Spiritual: ಹಿಂದೂಗಳಲ್ಲಿರುವ ಹಲವು ಪದ್ಧತಿಗಳಲ್ಲಿ, ಹೆಣ್ಣು ಋತುಮತಿಯಾದಾಗ ಅನುಸರಿಸುವ ಕೆಲ ಪದ್ಧತಿಗಳು ಕೂಡ ಒಂದು. ಅದರಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ಮೂರು ದಿನ ಮೈಲಿಗೆಯಾಗಿದ್ದು, ನಾಲ್ಕನೇಯ ದಿನ ಶುದ್ಧವಾಗುತ್ತಾರೆ. ಹಾಗಾದರೆ ಯಾಕೆ ಋತುಮತಿಯಾದ ಶುರುವಾದದ ಮೂರು ದಿನ ತಲೆ ಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮುಟ್ಟಾದ ಶುರುವಿನ ಮೂರು ದಿನ ತಲೆ ಸ್ನಾನ ಮಾಡಬಾರದು ಎಂದು ಹೇಳಲು ಇರುವ ವೈಜ್ಞಾನಿಕ ಕಾರಣವೆಂದರೆ, ಇದರಿಂದ ಆರೋಗ್ಯ ಹಾಳಾಗುತ್ತದೆ. ವೈದ್ಯರ ಬಳಿ ಹೋಗುವ ಪರಿಸ್ಥಿತಿ ಎದುರಾಗಬಹುದು. ಆಗ ಆರ್ಥಿಕ ಸಮಸ್ಯೆಯಾಗಬಹುದು. ಹಾಗಾಗಿ ಈ ದಿನಗಳಲ್ಲಿ ಮನೆಗೆಲಸವೂ ಮಾಡದೇ, ಸುಮ್ಮನೆ ರೆಸ್ಟ್ ಮಾಡಬೇಕು ಎಂದು ಹೇಳಲಾಗುತ್ತದೆ.
ಮುಟ್ಟಿನ ದಿನಗಳಲ್ಲಿ ತಲೆಸ್ನಾನ ಮಾಡಿದಾಗ, ರಕ್ತಸ್ರಾವದ ಸಮಸ್ಯೆ, ಹೊಟ್ಟೆನೋವಿನ ಸಮಸ್ಯೆ ಬರುವ ಸಾಧ್ಯತೆಗಳಿರುತ್ತದೆ. ಅಲ್ಲದೇ, ಇದು ಗರ್ಭಧಾರಣೆ ಮಾಡುವಾಗಲೂ ತೊಂದರೆ ನೀಡಬಹುದು. ಅದಕ್ಕಾಗಿ ಮುಟ್ಟಿನ ದಿನಗಳಲ್ಲಿ ತಲೆಸ್ನಾನ ಮಾಡಬಾರದು ಎಂದು ಹೇಳುತ್ತಾರೆ.
ನಾಲ್ಕನೇಯ ದಿನಕ್ಕೆ ಕೊಂಚ ಅರಿಶಿನವನ್ನು ನೀರಿಗೆ ಬೆರೆಸಿ, ತಲೆಸ್ನಾನ ಮಾಡಬೇಕು. ಹೀಗೆ ಮಾಡಿದಾಗ, ನೀವು ಶುದ್ಧರಾಗಿದ್ದೀರೆಂದು ಪರಿಗಣಿಸಲಾಗುತ್ತದೆ. ಅಲ್ಲದೇ, ಸಾಮಾನ್ಯ ದಿನಗಳಿಗಿಂತ, ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳ ದೇಹದಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತದೆ. ಹಾಗಾಗಿ ಅರಿಶಿನ ಹಾಕಿ, ಕೊನೆಯ ದಿನ ತಲೆಸ್ನಾನ ಮಾಡಿದಾಗ, ದೇಹದಲ್ಲಿರುವ ಬ್ಯಾಕ್ಟೀರಿಯಾ ಕ್ಲೀನ್ ಆಗುತ್ತದೆ. ಇಲ್ಲವಾದಲ್ಲಿ ಆ ಬ್ಯಾಕ್ಟೀರಿಯಾದಿಂದ ಹಲವು ರೋಗಗಳು ಬರುವ ಸಾಧ್ಯತೆ ಇದೆ.