Thursday, November 27, 2025

Latest Posts

ಇನ್ನೊಬ್ಬರಿಗೆ ಗಿಫ್ಟ್ ಕೊಡುವುದಿದ್ದರೆ ಇಂಥ ಗಿಫ್ಟ್ ಕೊಡಿ..

- Advertisement -

ಗಿಫ್ಟ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ.. ಹಲವರು ಕೇಳಿ ಗಿಫ್ಟ್ ಪಡೆಯುತ್ತಾರೆ. ಇನ್ನು ಕೆಲವರು ಕೊಟ್ಟರಷ್ಟೇ ಗಿಫ್ಟ್ ತೆಗೆದುಕೊಳ್ತಾರೆ. ಮತ್ತೆ ಕೆಲವರಿಗೆ ಕೇಳದೇ ಗಿಫ್ಟ್ ಸಿಕ್ಕರೂ ಕೂಡ, ತೆಗೆದುಕೊಳ್ಳೋಕ್ಕೆ ಏನೋ ಮುಜುಗರ. ಆದ್ರೂ ಹೇಗೋ, ಗಿಫ್ಟ್ ತೆಗೆದು ಕೊಳ್ತಾರೆ. ಆದ್ರೆ ನೀವು ಇನ್ನೊಬ್ಬರಿಗೆ ಎಂಥ ಗಿಫ್ಟ್ ಕೊಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಅರ್ಥಪೂರ್ಣ ಮಾಹಿತಿ ನೀಡಲಿದ್ದೇವೆ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಕೆಲ ತಿಂಗಳ ಹಿಂದಷ್ಟೇ ನಿಧನರಾಗಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಈ ಬಗ್ಗೆ ಹೇಳಿದ್ದಾರೆ. ಓರ್ವ ಶಿಕ್ಷಕನ ಮನೆ ಮುಂದೆ ಓರ್ವ ಬಾಲಕ, ಭಿಕ್ಷೆ ಬೇಡಲು ಬಂದ. ನನಗೆ ಒಂದು ತುತ್ತು ಅನ್ನ ಕೊಡಿ ಎಂದು ಆ ಬಾಲಕ, ಶಿಕ್ಷಕನಲ್ಲಿ ಕೇಳಿದ. ಅದಕ್ಕೆ ಶಿಕ್ಷಕರು ಹೇಳಿದರು, ನಾನು ಈಗ ನಿನಗೆ ಊಟ ಕೊಟ್ಟರೆ, ನೀನು ಅದನ್ನು ತಿನ್ನುತ್ತಿ. ರಾತ್ರಿ ಮತ್ತೆ ನಿನಗೆ ಹಸಿವಾಗುತ್ತದೆ. ಮತ್ತೆ ನೀನು ಇನ್ನೊಬ್ಬರ ಮನೆ ಮುಂದೆ ಹೋಗಿ ಭಿಕ್ಷೆ ಬೇಡುತ್ತಿ ಎಂದು ಹೇಳುತ್ತಾರೆ.

ಯಾಕಂದ್ರೆ ಆತ ಓರ್ವ ಶಿಕ್ಷಕನಾಗಿದ್ದ. ಹಾಗಾಗಿ ಈ ಬಾಲಕ ಹಸಿವಾದಾಗೆಲ್ಲ, ಭಿಕ್ಷೆ ಬೇಡುತ್ತಾನೆ. ಹೀಗೆ ಜೀವನಪೂರ್ತಿ ಹಸಿವಾದಾಗೆಲ್ಲ ಭಿಕ್ಷೆ ಬೇಡಿದರೆ, ಈ ಬಾಲಕನ ಗತಿಯೇನು ಎಂದು ಅವರು ವಿಚಾರ ಮಾಡಿದರು. ಹಾಗಾಗಿ ಅವರು ಬಾಲಕನಲ್ಲಿ ಒಂದು ಮಾತು ಹೇಳಿದರು. ನಾನು ನಿನಗೆ ಒಂದು ವಸ್ತು ನೀಡುತ್ತೇನೆ. ಆ ವಸ್ತು ನಿನ್ನ ಬಳಿ ಇದ್ದರೆ, ನೀನು ಇ್ನನೊಬ್ಬರ ಬಳಿ, ಭಿಕ್ಷೆ ಬೇಡುವ ಪರಿಸ್ಥಿತಿಯೇ ಬರುವುದಿಲ್ಲ ಎಂದು ಹೇಳುತ್ತಾರೆ. ಬಾಲಕ ಅಂಥಾದ್ದೇನು ಕೊಡುತ್ತೀರಿ ಎಂದು ಕೇಳುತ್ತಾನೆ.

ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (OIL PULLING) ಏನು ಲಾಭ..?

ಅದಕ್ಕೆ ಶಿಕ್ಷಕರು ಒಳಗೆ ಹೋಗಿ, ಪ್ಲೇಟು ಮತ್ತು ಬಳಪ ತಂದು ಆ ಮಗುವಿಗೆ ಕೊಡುತ್ತಾರೆ. ಮತ್ತು ನೀನು ಇದನ್ನು ಉಪಯೋಗಿಸು, ಇನ್ನೆಂದೂ ಜೀವನದಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳುತ್ತಾರೆ. ಆ ಮಗುವನ್ನು ತಮ್ಮ ಶಾಲೆಗೆ ಸೇರಿಸುತ್ತಾರೆ. ಅವನಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ಅವನು ವಿದ್ಯೆ ಕಲಿತು, ಉತ್ತಮ ಕೆಲಸ ಹುಡುಕಿಕೊಳ್ಳುತ್ತಾನೆ. ಹಾಗಾಗಿ ಗಿಫ್ಟ್ ಕೊಡುವುದಿದ್ದರೆ, ಇಂಥ ಉಡುಗೊರೆ ಕೊಡಬೇಕು ಎನ್ನುತ್ತಾರೆ ಶ್ರೀಗಳು.

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

- Advertisement -

Latest Posts

Don't Miss