Thursday, April 3, 2025

Latest Posts

ಮಕ್ಕಳಿಗೆ ಜ್ವರ ಬಂದಾಗ, ಇಂಥ ಆಹಾರಗಳನ್ನು ಸೇವಿಸಲು ಕೊಡಿ..

- Advertisement -

Health Tips: ಮಕ್ಕಳಿಗೆ ಜ್ವರ ಬಂದರೆ, ಅಪ್ಪ ಅಮ್ಮನ ಕೈ ಕಾಲೇ ಆಡುವುದಿಲ್ಲ. ಅಂದ್ರೆ ಅಪ್ಪ ಅಮ್ಮ ಪೂರ್ತಿಯಾಗಿ ನರ್ವಸ್ ಆಗುತ್ತಾರೆ. ಏಕೆಂದರೆ, ಇಂದಿನ ಕಾಲದಲ್ಲಿ ವಿವಿಧ ರೀತಿಯ ರೋಗಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಸಣ್ಣ ಜ್ವರವೂ ಮಕ್ಕಳ ಜೀವಕ್ಕೇ ಕುತ್ತು ತರುತ್ತಿದೆ. ಹಾಗಾಗಿ ಮಕ್ಕಳಿಗೆ ಜ್ವರ ಬಂದಾಗ, ಬೇಗ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ಮತ್ತು ಪಥ್ಯ ಮಾಡಿಸುವುದು ತುಂಬಾ ಮುಖ್ಯವಾಗಿದೆ. ಹಾಗಾಗಿ ನಾವಿಂದು ಮಕ್ಕಳಿಗೆ ಜ್ವರ ಬಂದಾಗ, ಎಂಥ ಆಹಾರ ಕೊಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮಕ್ಕಳಿಗೆ ಜ್ವರ ಬಂದಾಗ, ರೋಗ ನಿರೋಧಕ ಶಕ್ತಿಯನ್ನು ಹಚ್ಚಿಸುವ ಆಹಾರವನ್ನು ಕೊಡಬೇಕು. ಮಕ್ಕಳು ಅನ್ನ ಸಾರು ಉಣ್ಣುವವರಾಗಿದ್ದರೆ, ಅರಿಶಿನ, ಕರಿಬೇವು, ಕೊಂಚವೇ ಕರಿಮೆಣಸು ಬಳಸಿ ರಸಂ ಮಾಡಿ ಕೊಡಿ. ಇದು ನಾಲಿಗೆಗೆ ರುಚಿಯನ್ನೂ ಕೊಡುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆದರೆ ಕಾಳುಮೆಣಸು ಕಡಿಮೆ ಹಾಕಿ. ಖಾರ ಹೆಚ್ಚಾದರೆ, ಮತ್ತೆ ಆರೋಗ್ಯದಲ್ಲಿ ಏರುಪೇರಾಗಬಹುದು.

ಅರಿಶಿನ ಹಾಲನ್ನು ಕೊಡಿ. ರಾತ್ರಿ ಮಗು ಮಲಗುವಾಗ, ಅದಕ್ಕೆ ಅರಿಶಿನ ಬೆರೆಸಿದ ಹಾಲನ್ನು ಕುಡಿಯಲು ಕೊಡಿ. ಮಗುವಿಗೆ ಇದರಿಂದ ಅಲರ್ಜಿಯಾಗುವಂತಿದ್ದರೆ, ವೈದ್ಯರ ಬಳಿ ವಿಚಾರಿಸಿಯೇ ಹಾಲು ಕೊಡಿ. ಅರಿಶಿನ ಹಾಲಿನ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ಚೆನ್ನಾಗಿ ನಿದ್ರಿಸಿದರೆ, ಜ್ವರ ಬೇಗ ಗುಣವಾಗುತ್ತದೆ.

ಮಗುವಿಗೆ ಸದಾ ಉಗುರು ಬೆಚ್ಚಗಿನ ನೀರನ್ನೇ ಕೊಡಿ. ಯಾವುದೇ ಕಾರಣಕ್ಕೂ ತಣ್ಣೀರನ್ನು ಕುಡಿಯಲು ಬಿಡಬೇಡಿ. ನಿಮ್ಮ ಮನೆಯಲ್ಲಿ ನೀರನ್ನು ಸ್ವಚ್ಛಗೊಳಿಸುವ ಎಂಥದ್ದೇ ಮಷಿನ್ ಇದ್ದರೂ ಕೂಡ, ಅದು ಕಾಯಿಸಿ, ತಣಿಸಿದ, ಉಗುರು ಬೆಚ್ಚಗಿನ ನೀರು ಕೊಡುವಂಥ ಆರೋಗ್ಯವನ್ನು, ಕೊಡಲು ಸಾಧ್ಯವಿಲ್ಲ. ಹಾಗಾಗಿ ಕಾಯಿಸಿ, ಆರಿಸಿದ ನೀರು ಜ್ವರ ಬಂದ ಮಕ್ಕಳಿಗೆ ಕೊಡುವುದು ಉತ್ತಮ.

ಇವೆಲ್ಲದರ ಜೊತೆಗೆ, ಫ್ರೆಶ್ ಆದ, ಸ್ವಚ್ಛವಾಗಿ ತೊಳೆದ ತರಕಾರಿ, ಹಣ್ಣುಗಳನ್ನ ಸಹ ತಿನ್ನಲು ಕೊಡಿ. ಜೊತೆಗೆ ಡ್ರೈ ಫ್ರೂಟ್ಸ್ ಸೇವನೆ ಇರಲಿ. ಏಕೆಂದರೆ, ಇವುಗಳು ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ, ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ.

ಎದೆಹಾಲು ಉಣಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದಾ..?

ನಾಯಿ ಕಡಿತ ಇದ್ದಲ್ಲಿ, ಅದನ್ನೆಂದಿಗೂ ನಿರ್ಲಕ್ಷಿಸಬೇಡಿ..

ಹುಚ್ಚು ನಾಯಿ ಕಚ್ಚಿದ್ರೆ ಏನು ಮಾಡಬೇಕು..?

- Advertisement -

Latest Posts

Don't Miss