Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ಆಕೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ, ಕೆಲವು ಆರೋಗ್ಯಕರ ಗಿಫ್ಟ್ ನೀಡಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಡ್ರೈಫ್ರೂಟ್ಸ್: ಡ್ರೈಫ್ರೂಟ್ಸ್ ಅಂದ್ರೆ, ಕಲರ್ ಕಲರ್ ಬಾಕ್ಸ್ ಮಾಡಿ, ಅದರಲ್ಲಿ ಕೆಲವು ಕೆಲವು ಡ್ರೈಫ್ರೂಟ್ಸ್ ಹಾಕಿರುತ್ತಾರಲ್ಲಾ ಅದಲ್ಲಾ. ಬದಲಾಗಿ ಹೆಚ್ಚು ಡ್ರೈಫ್ರೂಟ್ಸ್ ಇರುವ ಬ್ಯಾಗ್ ನಿಮ್ಮ ಗೆಳತಿಗೆ ಗಿಫ್ಟ್ ಮಾಡಿ. ಇದು ಖಾಲಿಯಾಗುವ ಗಿಫ್ಟ್ ಆದರೂ, ಆಕೆಯ ಆರೋಗ್ಯವನ್ನು ಕಾಪಾಡುತ್ತದೆ.
ಕಾಟನ್ ಪ್ಯಾಡ್ಸ್: ಪ್ರತೀ ತಿಂಗಳು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಪ್ಯಾಡ್ಸ್ ಖರೀದಿಸುತ್ತಾರೆ. ಇದರಿಂದ ದುಡ್ಡು ವ್ಯರ್ಥ, ಆರೋಗ್ಯವೂ ಹಾಳು. ಅದರ ಬದಲು ರಿಪೀಟ್ ಆಗಿ ಬಳಸಬಹುದಾದ, ಆರೋಗ್ಯಕ್ಕೂ ಉತ್ತಮವಾದ ಕಾಟನ್ ಪ್ಯಾಡ್ಸ್ ಬಳಸಬಹುದು. ನೀವು ನಿಮ್ಮ ಹುಡುಗಿಗೆ, ಈ ಗಿಫ್ಟ್ ನೀಡಬಹುದು. ಇದು ಕೆಲವರಿಗೆ ವಿಚಿತ್ರ ಎನ್ನಿಸಿದರೂ, ಪುರುಷರು ಹೆಣ್ಣು ಮಕ್ಕಳ ವಿಚಾರದಲ್ಲಿ ಇಂಥ ಕಾಳಜಿ ತೆಗೆದುಕೊಂಡರೆ, ಅವರಿಗೆ ನಿಮ್ಮ ಬಗ್ಗೆ ನಂಬಿಕೆ ಹೆಚ್ಚಾಗುತ್ತದೆ.
ಹಾಟ್ ವಾಟರ್ ಬ್ಯಾಗ್. ಋತುಚಕ್ರದ ಸಂದರ್ಭದಲ್ಲಿ, ಹೆಣ್ಣು ಮಕ್ಕಳು ಹೊಟ್ಟೆ ನೋವಿನಿಂದ ಬಳಲುತ್ತಾರೆ. ಈ ಸಂದರ್ಭದಲ್ಲಿ ಹಾಟ್ ವಾಟರ್ ಬ್ಯಾಗ್ ಹೊಟ್ಟೆಯ ಮೇಲಿರಿಸಿಕೊಂಡರೆ, ಆರಾಮದಾಯಕವಾಗಿರುತ್ತದೆ. ಹೊಟ್ಟೆ ನೋವು ಕಡಿಮೆಯಾಗುತ್ತದೆ. ಹಾಗಾಗಿ ಈ ಗಿಫ್ಟ್ ಕೂಡ ನೀವು ನೀಡಬಹುದು.
ಹಾಟ್ ವಾಟರ್ ಬಾಟಲ್. ಮುಟ್ಟಿನ ಸಮಯದಲ್ಲಿ ಅಥವಾ ಅನಾರೋಗ್ಯದಿಂದ ಬಳಲುತ್ತಿರುವಾಗ, ಬಿಸಿ ನೀರಿನ ಸೇವನೆ ಮುಖವಾಗಿರುತ್ತದೆ. ಅಂಥ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದೇ ಹಾಟ್ ವಾಟರ್ ಬಾಟಲ್. ನೀವು ನಿಮ್ಮ ಗೆಳತಿಗೆ ಈ ಗಿಫ್ಟ್ ನೀಡಬಹುದು.
ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯಾ..?