Friday, September 20, 2024

Latest Posts

ಹೊಟೇಲ್ ಶೈಲಿಯ ಗೋಬಿ ಪೆಪ್ಪರ್ ಫ್ರೈ ತಯಾರಿಸುವುದು ಹೀಗೆ..

- Advertisement -

ಹೊಟೇಲ್‌ನಲ್ಲಿ ಸಿಗುವ ಕೆಲ ಸ್ಪೆಶಲ್ ತಿಂಡಿಗಳಲ್ಲಿ ಗೋಬಿ ಪೆಪ್ಪರ್ ಫ್ರೈ ಕೂಡ ಒಂದು. ಈ ತಿಂಡಿಯನ್ನ ನಾವು ಇನ್ನೂ ಸ್ವಾದಿಷ್ಟವಾಗಿ, ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಈ ತಿಂಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..

ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸ್ವಚ್ಛವಾಗಿ ತೊಳೆದ ಗೋಬಿ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಚಿಕ್ಕ ಕಪ್ ಮೈದಾ, ಅರ್ಧ ಕಪ್ ಕಾರ್ನ್ ಫ್ಲೋರ್, ಒಂದುವರೆ ಸ್ಪೂನ್ ಪೆಪ್ಪರ್, ಒಂದು ಸ್ಪೂನ್ ಸೋಂಪು, ಒಂದು ಸ್ಪೂನ್ ಜೀರಿಗೆ, 1 ಒಣ ಮೆಣಸು, ಒಂದು ಚಕ್ಕೆ, 3 ಲವಂಗ, ಚಿಟಿಕೆ ಅರಿಶಿನ, ಒಂದು ಸ್ಪೂನ್ ಖಾರದ ಪುಡಿ, ಕಾಲು ಕೊಂಚ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಸ್ಪೂನ್ ಪೆಪ್ಪರ್ ಪುಡಿ, ಎರಡು ಸ್ಪೂನ್ ಟೊಮೆಟೋ ಸಾಸ್, 10 ಎಸಳು ಬೆಳ್ಳುಳ್ಳಿ, 10 ಎಸಳು ಕರಿಬೇವು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಸಂಜೆ ತಿನ್ನಲು ಬೆಸ್ಟ್ ತಿಂಡಿ ಈ ರಗ್ಡಾ ಪ್ಯಾಟ್ಟೀಸ್..

ಮಾಡುವ ವಿಧಾನ: ಮೊದಲು ಬಿಸಿ ನೀರಿಗೆ ಉಪ್ಪು ಮತ್ತು ಕೊಂಚ ಅರಿಶಿನ ಹಾಕಿ, ಹೂಕೋಸನ್ನು ನೆನೆಸಿಡಿ. 15 ನಿಮಿಷ ಬಿಟ್ಟು ಮೈದಾ, ಕಾರ್ನ್ ಫ್ಲೋರ್, ಚಿಟಿಕೆ ಅರಿಶಿನ, ಕಾರದ ಪುಡಿ, ಪೆಪ್ಪರ್ ಪುಡಿ, ನೀರು ಹಾಕಿ ಮಿಕ್ಸ್ ಮಾಡಿ, ಬಜ್ಜಿ ಬ್ಯಾಟರ್ ರೆಡಿ ಮಾಡಿಕೊಳ್ಳಿ. ಇದಕ್ಕೆ ಹೂಕೋಸನ್ನ ಅದ್ದಿ, ಎಣ್ಣೆಯಲ್ಲಿ ಕರಿದು ಬಜ್ಜಿ ತಯಾರಿಸಿಕೊಳ್ಳಿ.

ಪನೀರ್ ಪೆಪ್ಪರ್ ಫ್ರೈ ಹೀಗೆ ತಯಾರಿಸಿ ನೋಡಿ..

ಈಗ ಪ್ಯಾನ್ ಇಟ್ಟು ಪೆಪ್ಪರ್, ಸೋಂಪು, ಜೀರಿಗೆ, ಒಣ ಮೆಣಸು, ಚಕ್ಕೆ, ಲವಂಗ ಹಾಕಿ, ಚೆನ್ನಾಗಿ ಹುರಿದು ಪುಡಿ ಮಾಡಿ. ಇದಾದ ಬಳಿಕ ಅದೇ ಪ್ಯಾನ್‌ಗೆ ಎರಡು ಸ್ಪೂನ್ ಎಣ್ಣೆ ಮತ್ತು ಸಣ್ಣಗೆ ಕತ್ತರಿಸಿಕೊಂಡ ಬೆಳ್ಳುಳ್ಳಿ ಹಾಕಿ, ಹುರಿಯಿರಿ. ಇದಾದ ಬಳಿಕ ಕರಿಬೇವು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.

ಇದಾದ ಬಳಿಕ ಟೊಮೆಟೋ ಸಾಸ್, ಮೊದಲೇ ತಯಾರಿಸಿಕೊಂಡ ಹೂಕೋಸಿನ ಬಜ್ಜಿ, ಮತ್ತು ಮಸಾಲೆ ಪುಡಿ, ಕೊತ್ತೊಂಬರಿ ಸೊಪ್ಪು ಸೇರಿಸಿ,ಮಿಕ್ಸ್ ಮಾಡಿದ್ರೆ ಗೋಬಿ ಪೆಪ್ಪರ್ ಫ್ರೈ ರೆಡಿ.

- Advertisement -

Latest Posts

Don't Miss