Friday, December 27, 2024

Latest Posts

ಚಳಿಗಾಲದಲ್ಲಿ ಈ ನೆಲ್ಲಿಕಾಯಿ ಪದಾರ್ಥ ತಿಂದ್ರೆ, ನೀವು ಹೆಲ್ದಿಯಾಗಿರ್ತೀರಿ..

- Advertisement -

ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನ ಸರಿಯಾಗಿ ಇರಿಸಿಕೊಳ್ಳೋದೇ ಒಂದು ಚಾಲೆಂಜಿಂಗ್ ಟಾಸ್ಕ್. ಅಷ್ಟೇ ಅಲ್ಲ, ನಮ್ಮ ತ್ವಚೆ ಆರೋಗ್ಯವಾಗಿ, ಚೆಂದವಾಗಿ ಇರಿಸಿಕೊಳ್ಳೋದೂ ಒಂದು ಚಾಲೆಂಜ್.  ಈ ಸೀಸನ್‌ನಲ್ಲಿ ಕೂದಲು ಉದುರುವ ಸಮಸ್ಯೆಯೂ ಹೆಚ್ಚು. ಹಾಗಾಗಿ ಈ ಮೂರು ಸಮಸ್ಯೆಗಳನ್ನ ಎದುರಿಸೋಕ್ಕೆ ನಾವು ಹೆಲ್ದಿ ಆಹಾರದ ಸೇವನೆ ಮಾಡಬೇಕಾಗುತ್ತದೆ. ಹಾಗಾಗಿ ಇಂದು ನೆಲ್ಲಿಕಾಯಿಯ ಸಿಹಿ ಉಪ್ಪಿನಕಾಯಿ(ನೆಲ್ಲಿಕಾಯಿ ಮುರಬ್ಬಾ) ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

10 ರಿಂದ 15 ಕಾಡು ನೆಲ್ಲಿಕಾಯಿ, ಒಂದು ಕಪ್ ಕಲ್ಲು ಸಕ್ಕರೆ, ನಿಮಗೆ ಆರೋಗ್ಯಕರ ನೆಲ್ಲಿಕಾಯಿ ಮುರಬ್ಬಾ ಬೇಕು ಅಂದ್ರೆ ನೀವು ಸಕ್ಕರೆ ಬದಲು ಕಲ್ಲು ಸಕ್ಕರೆಯೇ ಬಳಸಬೇಕು. ಚಿಕ್ಕ ತುಂಡು ಚಕ್ಕೆ, ಕಾಲು ಸ್ಪೂನ್ ಒಣ ಶುಂಠಿ ಪುಡಿ.

ಲೆಮನ್ ಟೀಯಿಂದ ಲೆಕ್ಕವಿಲ್ಲದಷ್ಟು ಆರೋಗ್ಯಕಾರಿ ಲಾಭಗಳು..!

ಮೊದಲು ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಒರೆಸಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು, ಅದು ಕುದಿ ಬಂದ ಬಳಿಕ, ಅದರಲ್ಲಿ ನೆಲ್ಲಿಕಾಯಿ ಹಾಕಿ, ಮಂದ ಉರಿಯಲ್ಲಿ 5ರಿಂದ 6 ನಿಮಿಷ ಕುದಿಸಬೇಕು. ಇದಕ್ಕಿಂತ ಹೆಚ್ಚು, ಅಥವಾ ಹೆಚ್ಚಿನ ಉರಿಯಲ್ಲಿ ನೀವು ನೆಲ್ಲಿಕಾಯಿಯನ್ನು ಕುದಿಸಿದರೆ, ನೆಲ್ಲಿಕಾಯಿ ಒಡೆದು ಹೋಗುತ್ತದೆ. ಮತ್ತು ಸರಿಯಾದ ರುಚಿ ಬರುವುದಿಲ್ಲ.

ನೆಲ್ಲಿಕಾಯಿ ಕೊಂಚ ಬೆಂದ ಬಳಿಕ, ಅದನ್ನು ಬಟ್ಟೆಯಿಂದ ಒರೆಸಿ, ಫೋರ್ಕ್ ಅಥವಾ ಚಾಕುವಿನಿಂದ, ನೆಲ್ಲಿಕಾಯಿಯ ಮೇಲೆ ಚುಚ್ಚಬೇಕು. ಯಾಕೆ ಹೀಗೆ ಮಾಡಬೇಕು ಅಂದ್ರೆ, ನಾವು ಮುರಬ್ಬಾ ಮಾಡುವಾಗ, ಸಿಹಿ ಅಂಶವೆಲ್ಲ ನೆಲ್ಲಿಕಾಯಿಯಲ್ಲಿ ಹೋಗಬೇಕು. ಈಗ ಕಲ್ಲು ಸಕ್ಕರೆಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಪುಡಿ ಮಾಡಿಕೊಳ್ಳಿ.

ಚಳಿಗಾಲದಲ್ಲಿ ಖಂಡಿತ ಕುಡಿಯಿರಿ ಈ ಹೆಲ್ದಿ ಡ್ರಿಂಕ್..

ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು, ಈ ಕಲ್ಲುಸಕ್ಕರೆ ಪುಡಿಯನ್ನು ಪ್ಯಾನ್‌ಗೆ ಹಾಕಿ, ಇದರಲ್ಲಿ ನೆಲ್ಲಿಕಾಯಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದೆರಡು ಸ್ಪೂನ್ ಅಷ್ಟೇ ನೀರು ಹಾಕಿ. ಈಗ ಸಕ್ಕರೆ ಕರಗಿ ಪಾಕವಾಗುತ್ತದೆ. ಈ ವೇಳೆ ನೀವು ಪದೇ ಪದೇ ನೆಲ್ಲಿಕಾಯಿ ಮತ್ತು ಪಾಕವನ್ನು ತಿರುವುತ್ತಲಿರಬೇಕು. ಇಲ್ಲವಾದಲ್ಲಿ. ತಳ ಹಿಡಿದು, ಮುರಬ್ಬಾ ಹಾಳಾಗಬಹುದು.

ಮಂದ ಉರಿಯಲ್ಲಿ ನೆಲ್ಲಿಕಾಯಿ ಮತ್ತು ಕಲ್ಲು ಸಕ್ಕರೆ ಬೇಯಬೇಕು. ಆದರೆ ಹೆಚ್ಚು ಬೇಯಿಸಬೇಡಿ. ಈಗ ಕಲ್ಲುಸಕ್ಕರೆ ಪಾಕ ಹದವಾಗಿದೆ ಎಂದಾಗ, ಅವಶ್ಯಕತೆ ಇದ್ದಲ್ಲಿ, ಏಲಕ್ಕಿ ಪುಡಿ ಬಳಸಿ. ಕಾಲು ಸ್ಪೂನ್ ಒಣಶುಂಠಿ ಪುಡಿ, ಚಿಕ್ಕ ತುಂಡು ಚಕ್ಕೆ ಸೇರಿಸಿ, ಮಿಕ್ಸ್ ಮಾಡಿ. ನೆನಪಿರಲಿ ಪಾಕ ಹೆಚ್ಚು ಗಟ್ಟಿಯಾಗಬಾರದು. ಗುಲಾಬ್ ಜಾಮೂನ್ ಪಾಕದ ರೀತಿಯೇ ಇರಬೇಕು. ಈ ಮಿಶ್ರಣವನ್ನ ಕೆಲ ಗಂಟೆ ಹಾಗೆ ಇರಿಸಿ. ಆಗ ನೆಲ್ಲಿಕಾಯಿ ಸಿಹಿ ಹೀರಿಕೊಂಡು ಟೇಸ್ಟಿಯಾಗಿರತ್ತೆ. ಈ ಮುರಬ್ಬಾವನ್ನು ಪ್ರತಿದಿನ ಒಂದು ತಿಂದರೆ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

- Advertisement -

Latest Posts

Don't Miss