Sunday, December 22, 2024

Latest Posts

ಪಲಾವ್, ಜೀರಾರೈಸ್ಗೆ ಸಖತ್ ಮ್ಯಾಚ್ ಆಗತ್ತೆ ಈ ಗ್ರೇವಿ..

- Advertisement -

ಮೊದಲೆಲ್ಲ ಪಲಾವ್, ಜೀರಾರೈಸ್‌ನಾ ತುಪ್ಪ ಅಥವಾ ರಾಯ್ತಾ ಜೊತೆ ತಿಂತಾ ಇದ್ರು. ಈಗ ಗ್ರೇವಿ ಜೊತೆ ಪಲಾವ್, ಜೀರಾರೈಸ್, ಬಿರಿಯಾನಿ ತಿಂದ್ರೆನೇ ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ನಾವಿಂದು ಈ ಗ್ರೇವಿ ಮಾಡೋದು ಹೇಗೆ..? ಇದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ : ಎರಡು ಸ್ಪೂನ್ ಶೇಂಗಾ, ಮತ್ತು ಎಳ್ಳು, 2 ಒಣಮೆಣಸು, ಕಾಲು ಕಪ್ ತುರಿದ ಕೊಬ್ಬರಿ, ಕಾಲು ಕಪ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, ಒಂದು ಪಲಾವ್ ಎಲೆ, 2 ಏಲಕ್ಕಿ, ಒಂದು ಚಿಕ್ಕ ತುಂಡು ಚಕ್ಕೆ, 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್, 1 ಈರುಳ್ಳಿಯ ಪೇಸ್ಟ್, 2 ಟೊಮೆಟೋ ಪೇಸ್ಟ್, 1 ಸ್ಪೂನ್ ಗರಂ ಮಸಾಲೆ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಧನಿಯಾ ಪುಡಿ, 1 ಸ್ಪೂನ್ ಬಿರಿಯಾನಿ ಮಸಾಲೆ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಕೊಂಚ ಕಸೂರಿ ಮೇಥಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಮೊದಲು ಒಂದು ಪ್ಯಾನ್ ಬಿಸಿ ಮಾಡಿ, ಶೇಂಗಾ, ಎಳ್ಳು, ಒಣಮೆಣಸು, ತುರಿದ ಕೊಬ್ಬರಿ ಇವೆಲ್ಲವನ್ನೂ ಮಂದ ಉರಿಯಲ್ಲಿ ಹುರಿದುಕೊಳ್ಳಿ. ಇದು ಚೆನ್ನಾಗಿ ಹುರಿದ ಬಳಿಕ, ಮಿಕ್ಸಿ ಜಾರ್‌ಗೆ ಹಾಕಿ, ಕೊಂಚ ನೀರು ಹಾಕಿ, ಪೇಸ್ಟ್ ತಯಾರಿಸಿಕೊಳ್ಳಿ. ಈಗ ಅದೇ ಪ್ಯಾನ್‌ಗೆ ಎಣ್ಣೆ, ಜೀರಿಗೆ, ಪಲಾವ್ ಎಲೆ, ಚಕ್ಕೆ, ಏಲಕ್ಕಿ ಹಾಕಿ ಹುರಿಯಿರಿ. ನಂತರ ಜಿಂಜರ್ ಗಾರ್ಲಿಕ್ ಪೇಸ್ಟ್, ಈರುಳ್ಳಿ, ಟೊಮೆಟೋ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.

ಇದಕ್ಕೆ ಗರಂ ಮಸಾಲೆ, ಅರಿಶಿನ, ಉಪ್ಪು, ಖಾರದ ಪುಡಿ, ಧನಿಯಾ ಪುಡಿ, ಬಿರಿಯಾನಿ ಪುಡಿ ಇವೆಲ್ಲವನ್ನೂ ಹಾಕಿ 1 ನಿಮಿಷ ಬೇಯಿಸಿ. ನಂತರ ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿ, ಕೊಂಚ ಬಿಸಿ ಮಾಡಿದ್ರೆ, ಗ್ರೇವಿ ರೆಡಿ..

ಶವರ್ ಬಳಸಿ ಸ್ನಾನ ಮಾಡಿದ್ರೆ ಆರೋಗ್ಯಕ್ಕೆ ಆಗತ್ತೆ ಇಂಥ ನಷ್ಟ..

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 2

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

- Advertisement -

Latest Posts

Don't Miss