ಬಟಾಣಿಯಿಂದಲೂ ತಯಾರಿಸಬಹುದು ಸ್ವಾದಿಷ್ಟ ಚಾಟ್ಸ್

Recipe: ಮನೆಯಲ್ಲಿ ಏನಾದರೂ ಚಾಟ್ಸ್ ಮಾಡಿ ತಿನ್ನಬೇಕು ಎನ್ನಿಸಿದಾಗ, ಸಮೋಸಾ, ಬಜ್ಜಿ, ಬೋಂಡಾ ಮಾಡಿ ತಿಂದು ತಿಂದು ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಬಟಾಣಿ ಚಾಟ್ಸ್ ಹೇಗೆ ಮಾಡುವುದು ಅಂತಾ ಹೇಳಲಿದ್ದೇವೆ.

ಮೊದಲು ಎರಡು ಕಪ್ ನೀರು ಕುದಿಸಬೇಕು. ಇದಕ್ಕೆ ಉಪ್ಪು ಮತ್ತು ನೆನೆಸಿಟ್ಟ ಬಟಾಣಿ ಹಾಕಿ ಕೊಂಚವೇ ಬೇಯಿಸಬೇಕು. ಬಟಾಣಿ ಹೆಚ್ಚು ಬೆಂದರೆ ರುಚಿ ಹಾಳಾಗುತ್ತದೆ. ಹಾಗಾಗಿ ಬಟಾಣಿ ಸರಿಯಾದ ರೀತಿಯಲ್ಲಿ ಬೇಯಬೇಕು.

ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, ಕೊಂಚ ತುರಿದ ಶುಂಠಿ, ಹಾಕಿ ಹುರಿಯಿರಿ. ಇದಕ್ಕೆ ಬೇಯಿಸಿದ ಬಟಾಣಿ ಹಾಕಿ ಹುರಿಯಿರಿ. ಬಳಿಕ ಅರ್ಧ ಸ್ಪೂನ್ ಗರಂಮಸಾಲೆ, ಕಪ್ಪು ಉಪ್ಪು, ಚಾಟ್ ಮಸಾಲೆ, ಖಾರದ ಪುಡಿ, ಎರಡು ಹಸಿಮೆಣಸಿನಕಾಯಿ, ಒಂದು ಟೊಮೆಟೋ, 1 ಈರುಳ್ಳಿ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ಸ್ಪೂನ್ ನಿಂಬೆರಸ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಬಟಾಣಿ ಚಾಟ್ ರೆಡಿ. ಇದನ್ನು ಬೌಲ್‌ಗೆ ಹಾಕಿ, ಅದರ ಮೇಲೆ ಸೇವ್ ಹಾಕಿದ್ರೆ ಬಟಾಣಿ ಚಾಟ್ ರೆಡಿ.

ಆಲೂ ಚಾಟ್ ರೆಸಿಪಿ

ಪಾಲಕ್ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು..?

ಸಾಸಿವೆ ಸೊಪ್ಪಿನ ಗೊಜ್ಜು ಮಾಡಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..? ನಷ್ಟವೇನು..?

About The Author