Monday, December 23, 2024

Latest Posts

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಡಯಟ್ ಮಾಡುವವರು ಗ್ರೀನ್ ಟೀ ಮತ್ತು ಲೆಮನ್ ಟೀ ಸೇವನೆ ಮಾಡುತ್ತಾರೆ. ಆದರೆ ಇವೆರಡು ಟೀ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಗೊತ್ತಿರುವುದಿಲ್ಲ. ಹಾಗಾದ್ರೆ ಇದರ ಸೇವನೆ ಹೇಗೆ ಮಾಡಿದರೆ ಒಳ್ಳೆಯದು..? ಹೇಗೆ ಮಾಡಿದರೆ ಕೆಟ್ಟದ್ದು ಅಂತಾ ತಿಳಿಯೋಣ ಬನ್ನಿ..

ಗ್ರೀನ್ ಟೀ , ಲೆಮನ್ ಟೀ ಮಿತವಾಗಿ ಬಳಸಿದರೆ, ಇದು ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಗ್ರೀನ್ ಟೀ, ಲೆಮನ್‌ ಟೀಗೆ ನೀವು ಸಕ್ಕರೆ ಬಳಸುವಂತಿಲ್ಲ. ಹಾಗೇನಾದರೂ ಸಕ್ಕರೆ ಬಳಸಿದರೆ, ಅಂಥ ಟೀ ಕುಡಿದು ಯಾವ ಆರೋಗ್ಯ ಪ್ರಯೋಜನವೂ ಆಗುವುದಿಲ್ಲ. ಇನ್ನು ವೇದ್ಯರು ಹೇಳುವ ಪ್ರಕಾರ, ನಾವು ದೇಹಕ್ಕೆ ಒಗ್ಗುವ ಮತ್ತು ನಮಗೂ ಇಷ್ಟವಾಗುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು.

ಗ್ರೀನ್‌ ಟೀ, ಲೆಮನ್ ಟೀ ಇಷ್ಟವಾಗದಿದ್ದರೂ, ಒತ್ತಾಯಪೂರ್ವಕವಾಗಿ ಅದನ್ನು ಸೇವಿಸಿದರೆ, ಅದು ಹೆಚ್ಚಿನ ದಿನ ಸೇವಿಸಲು ಅಸಾಧ್ಯವಾಗುತ್ತದೆ. ಹಾಗಾಗಿ ಆರೋಗ್ಯಕರವಾದ ಇಷ್ಟವಾದ ಪೇಯ ಮತ್ತು ಆಹಾರ ಸೇವಿಸಬೇಕು ಅಂತಾರೆ ವೈದ್ಯರು. ಇನ್ನು ಹೆಚ್ಚು ಗ್ರೀನ್‌ ಟೀ, ಲೆಮನ್ ಟೀ ಕುಡಿಯುವುದು ಕೂಡ ಒಳ್ಳೆಯದಲ್ಲ. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ನ್ಯೂಟ್ರಿಷಿಯನ್ ನಮ್ಮ ದೇಹ ಸೇರಿದರೆ, ಅದರಿಂದ ನಮ್ಮ ದೇಹಕ್ಕೆ ತೊಂದರೆಯೇ ಹೆಚ್ಚು. ಹಾಗಾಗಿ ಇವೆರಡನ್ನೂ ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss