ಮಾರುಕಟ್ಟೆಯಲ್ಲಿ ತರಹೇವಾರಿ ಶ್ಯಾಂಪೂ, ಎಣ್ಣೆ, ಕಂಡೀಶ್ನರ್ ಬಂದಿದೆ. ಆದ್ರೂ ಕೂಡ ಕೂದಲು ಉದುರುವ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಇನ್ನೂ ವಯಸ್ಸು 30 ದಾಟಿರೋದೇ ಇಲ್ಲಾ. ಆಗಲೇ ತಲೆ ಗೂದಲು ಉದುರಲು ಶುರುವಾಗತ್ತೆ. ಹಾಗಾಗಿ ಇಂದು ನಾವು ಕೂದಲು ಆರೋಗ್ಯವಾಗಿರಲು ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ..
ಮಲಬದ್ಧತೆ ದೂರ ಮಾಡಲು ಹೀಗೆ ಮಾಡಿ..
ಮೊದಲನೇಯದಾಗಿ ಮನೆಯಲ್ಲೇ ಶ್ಯಾಂಪೂ ತಯಾರಿಸಿ ಬಳಸಿ.. ಕೊಂಚ ಸಿಗೇಕಾಯಿ ಮತ್ತು ಕೊಂಚ ಒಣಗಿದ ನೆಲ್ಲಿಕಾಯಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಒಂದು ಪ್ಯಾನ್‌ನಲ್ಲಿ ನೀರನ್ನು ಕುದಿಸಿ, ಅದಕ್ಕೆ ನೆನೆಸಿಟ್ಟ ನೆಲ್ಲಿಕಾಯಿ ಮತ್ತು ಸಿಗೇಕಾಯಿಯನ್ನು ಹಾಕಿ, ಮತ್ತಷ್ಟು ಕುದಿಸಿ. ಈಗ ಆ ನೀರನ್ನು ಸೋಸಿ ಶ್ಯಾಂಪೂವಿನಂತೆ ಬಳಸಿ.
ಎರಡನೇಯದಾಗಿ ಅಂಟಲಕಾಯಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ನೀರು ಕುದಿಸಿ, ಆ ನೀರಿಗೆ ಅಂಟಲಕಾಯಿ ಹಾಕಿ ಮತ್ತೂ ಕುದಿಸಿ. ನಂತರ ಅದನ್ನ ಸೂಸಿ ಶ್ಯಾಂಪೂವಿನಂತೆ ಬಳಸಿ. ಇನ್ನು ಮೂರನೇಯದಾಗಿ ಅಕ್ಕಿಯ ನೀರು. ಬೆಳಿಗ್ಗೆ ಎರಡು ಚಮಚ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಆ ನೀರನ್ನ ತೆಲೆಗೆ ಸ್ಪ್ರೇ ಮಾಡಿಕೊಳ್ಳಿ. ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಿ..
ಟೇಸ್ಟಿಯಾದ ಗೋಧಿ ದೋಸೆ ಮಾಡೋದು ಹೇಗೆ ಗೊತ್ತಾ..?
ಇನ್ನು ಎರಡು ಕಪ್ ನೀರು ಪ್ಯಾನ್‌ಗೆ ಹಾಕಿ ಕುದಿಸಿ ಅದಕ್ಕೆ ಅರ್ಧ ಕಪ್ ಅಕ್ಕಿ ಹಾಕಿ ಬೇಯಿಸಿ. ನಂತರ ಆ ತಿಳಿ ಅಂದರೆ ಗಂಜಿಯನ್ನು ತಣಿಸಿ, ತಲೆಗೆ ಹಚ್ಚಿಕೊಳ್ಳಿ. ಕರೆಕ್ಟ್ ಆಗಿ ಅರ್ಧ ಗಂಟೆ ಬಳಿಕ, ತಲೆ ಸ್ನಾನ ಮಾಡಿ. ಇದರಿಂದ ಕೂದಲ ಬುಡ ಗಟ್ಟಿಗೊಳ್ಳುತ್ತದೆ. ಕೂದಲು ಉದ್ದ ಬೆಳೆಯುತ್ತದೆ.