ಸುಂದರವಾದ ಕೇಶರಾಶಿ ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಕಾಲದ ಯುವಕ ಯುವತಿಯರಿಗೆ ಕಾಡುತ್ತಿರುವ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಕೆಲವರಿಗೆ ಕೂದಲು ಚೆನ್ನಾಗಿ ಬೆಳೆದಿದ್ದರೂ, ಸುಕ್ಕುಗಟ್ಟಿರುತ್ತದೆ. ಅದರಲ್ಲಿ ಶೈನ್ ಇರೋದಿಲ್ಲಾ. ಹಾಗಾಗಿ ಇಂದು ಕೂದಲ ಆರೋಗ್ಯಕ್ಕಾಗಿ ನಾವು ಕೆಲ ಟಿಪ್ಸ್ ನೀಡಲಿದ್ದೇವೆ.
ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..
ಮೊದಲನೇಯದಾಗಿ ಆಲಿವ್ ಎಣ್ಣೆ. ಆಲಿವ್ ಎಣ್ಣೆಯನ್ನ ಹಲವರು ಕೂದಲಿಗೆ ಹಚ್ಚೋಕ್ಕೆ ಇಷ್ಟ ಪಡಲ್ಲ. ಅಡುಗಷ್ಟೇ ಬಳಸುತ್ತಾರೆ. ಯಾಕಂದ್ರೆ ಅದರ ಸ್ಮೆಲ್ ಅಷ್ಟು ಚೆನ್ನಾಗಿರಲ್ಲ ಅಂತಾ. ಆದ್ರೆ ಇದು ಕೂದಲು ಸಾಫ್ಟ್ ಆ್ಯಂಡ್ ಶೈನಿಂಗ್ ಆಗೋಕ್ಕೆ ತುಂಬಾ ಉತ್ತಮ. ರಾತ್ರಿ ಮಲಗುವಾಗ, ಆಲಿವ್ ಎಣ್ಣೆಯನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಬೆಳಿಗ್ಗೆ ಎದ್ದು ಉತ್ತಮ ಶ್ಯಾಂಪೂವಿನಿಂದ ಹೇರ್ ವಾಶ್ ಮಾಡಿ.
ಎರಡನೇಯದಾಗಿ ವಿಟಾಮಿನ್ ಈ ಎಣ್ಣೆ. ವಿಟಾಮಿನ್ ಈ ಎಣ್ಣೆ ಬರೀ ಕೂದಲ ಆರೋಗ್ಯಕ್ಕಷ್ಟೇ ಅಲ್ಲ. ಬದಲಾಗಿ ಮುಖದ ಅಂದ ಹೆಚ್ಚಿಸಲು ಕೂಡ ಉಪಯೋಗಕಾರಿಯಾಗಿದೆ. ನೀವು ಆ ಕ್ಯಾಪ್ಸೂಲ್‌ನಲ್ಲಿರುವ ಎಣ್ಣೆಯಿಂದ ತಲೆ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಬೇಕು. ರಾತ್ರಿಯಿಡೀ ಹಾಗೆ ಬಿಟ್ಟು ಮರುದಿನ ಕೂದಲು ವಾಶ್ ಮಾಡಿ. ಅಥವಾ ತೆಂಗಿನೆಣ್ಣೆ ಜೊತೆ ವಿಟಾಮಿನ್ ಈ ಎಣ್ಣೆ ಮಿಕ್ಸ್ ಮಾಡಿ, ಕೊಂಚ ಬಿಸಿ ಮಾಡಿ, ತಲೆ ಬುಡಕ್ಕೆ ಮಸಾಜ್ ಮಾಡಬೇಕು.
ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..
ಬಾಳೆಹಣ್ಣಿನ ಮಾಸ್ಕ್ ಹಾಕುವುದರ ಮೂಲಕವೂ ನೀವು ನಿಮ್ಮ ಕೂದಲನ್ನ ಸೊಂಪಾಗಿ ಬೆಳೆಸಬಹುದು. ಹೆಚ್ಚು ಹಣ್ಣಾದ ಬಾಳೆ ಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ, ಹೇರ್ ಪ್ಯಾಕ್ ಹಾಕಿ. ಒಂದು ಗಂಟೆ ಅಥವಾ ಅರ್ಧ ಗಂಟೆ ಬಿಟ್ಟು ಹೇರ್ ವಾಶ್ ಮಾಡಿ.
ಇನ್ನು ಪ್ಯೂರ್ ಬಾದಾಮ್ ಎಣ್ಣೆ ಬಳಸಿದ್ರೂ ನೀವು ಉತ್ತಮ ರಿಸಲ್ಟ್ ಪಡೆಯಬಹುದು. ಬಾದಾಮ್ ಎಣ್ಣೆಯಿಂದ ತಲೆಗೂದಲಿಗೆ ಚೆನ್ನಾಗಿ ಮಸಾಜ್ ಮಾಡಿ, ರಾತ್ರಿಯಿಡೀ ಹಾಗೆ ಬಿಡಿ. ಮರುದಿನ ಬೆಳಿಗ್ಗೆ ಉತ್ತಮ ಶ್ಯಾಂಪೂ ಅಥವಾ ಪುಡಿಯಿಂದ ಹೇರ್ ವಾಶ್ ಮಾಡಿ. ಇನ್ನು ಮುಖ್ಯವಾದ ವಿಷಯ ಅಂದ್ರೆ, ನೀವು ಈ ಮೇಲೆ ಹೇಳಿದ ಯಾವುದೇ ಎಣ್ಣೆ ಅಥವಾ ಹೇರ್ ಪ್ಯಾಕ್ ಬಳಸಿದಾಗ, ನಿಮಗೆ ಯಾವುದೇ ಅಲರ್ಜಿಯಾಗಿಲ್ಲವೆಂದಲ್ಲಿ ಮಾತ್ರ, ಅದರ ಬಳಕೆ ಕಂಟಿನ್ಯೂ ಮಾಡಿ.