ತಲೆಗೂದಲು ಉದುರುವ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ನಾವು ಜೀವಿಸುವ ರೀತಿ, ನಾವು ಸೇವಿಸುವ ಆಹಾರ, ಧೂಳು, ಹೊಗೆ ಇತ್ಯಾದಿ ಸಮಸ್ಯೆಯಿಂದ ನಮ್ಮ ಕೂದಲ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಮನೆಯಲ್ಲೇ ಕೆಲ ರೆಮಿಡಿಗಳನ್ನು ಅನುಸರಿಸಿ, ಹೇಗೆ ಆರೋಗ್ಯಕರ ಕೂದಲನ್ನು ಪಡೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್ ಸೂಪರ್ ಆಗಿರತ್ತೆ..
3 ಸ್ಪೂನ್ ಕಡಲೆ ಹಿಟ್ಟು, 1 ಸ್ಪೂನ್ ಮೆಂತ್ಯೆ ಹಿಟ್ಟು, ಅರ್ಧ ಚಮಚ ನೀವು ಯಾವಾಗಲೂ ಬಳಸೋ ಹೇರ್ ಆಯ್ಲ್, ಈ ಮೂರರ ಜೊತೆಗೆ ಕೊಂಚ ಬಿಸಿ ನೀರನ್ನು ಹಾಕಿ, ಪೇಸ್ಟ್ ರೆಡಿ ಮಾಡಿ. ಇದರಿಂದ ಹೇರ್ ವಾಶ್ ಮಾಡಿ. ಕೆಮಿಕಲ್ ಯುಕ್‌ತ ಶ್ಯಾಂಪೂ ಬಳಸುವ ಬದಲು ನೀವು ಈ ಪೌಡರ್ ಬಳಸಿದ್ರೆ ಉತ್ತಮ.
ಸಾಫ್ಟ್, ಪಿಂಕ್ ಲಿಪ್ಸ್ ನಿಮ್ಮದಾಗಬೇಕು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ..
2 ಸ್ಪೂನ್ ರೋಸ್‌ಮೆರಿ ಎಲೆ, 1 ಸ್ಪೂನ್ ಮೆಂತ್ಯೆ, ಇವೆರಡನ್ನೂ ಒಂದು ಚಿಕ್ಕ ಬೌಲ್‌ಗೆ ಹಾಕಿ, 2 ಕಪ್ ನೀರಿನಲ್ಲಿ ಒಂದು ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ 10 ನಿಮಿಷ ಮಂದ ಉರಿಯಲ್ಲಿ ಇದನ್ನು ಕಾಯಿಸಿ. ತಣಿದ ಮೇಲೆ ಸೋಸಿ, ಒಂದು ಬಾಟಲಿಗೆ ಹಾಕಿ. ಇದರಿಂದ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ. ನಂತರ ಚೆನ್ನಾಗಿ, ಆದ್ರೆ ನಿಧಾನವಾಗಿ ಹೇರ್ ಮಸಾಜ್ ಮಾಡಿ. ನಂತರ ನಿಮಗೆ ಬೇಕಾದ ಹೇರ್‌ಸ್ಟೈಲ್ ಮಾಡಿಕೊಳ್ಳಿ. ಇದರಲ್ಲಿ ಎಣ್ಣೆ ಅಂಶ, ಅಥವಾ ಯಾವುದೇ ಕೆಮಿಕಲ್ ಇಲ್ಲದ ಕಾರಣ, ನೀವು ಇದನ್ನು ಸ್ಪ್ರೇ ಮಾಡಿದ ಮೇಲೆ ತಲೆ ಸ್ನಾನ ಮಾಡಬೇಕಂತಿಲ್ಲ.