Saturday, July 27, 2024

Latest Posts

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : ಏಕಕಾಲಕ್ಕೆ 109 ಜನರ ಬಿಡುಗಡೆ..!

- Advertisement -

Hubli News: ಹುಬ್ಬಳ್ಳಿ : ವಾಣಿಜ್ಯನಗರಿಯ ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 109 ಮಂದಿಗೆ ಬಿಡುಗಡೆಯಾಗಿದ್ದಾರೆ.

ಕಳೆದ ಫೆ.15 ಶುಕ್ರವಾರದಂದು ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಆರೋಪಿತರಿಗೆ ಶೂರಿಟಿ ನೀಡುವ ಕುರಿತು ಬಿಡುಗಡೆ ವಿಳಂಬವಾಗಿತ್ತು. ಬೆಂಗಳೂರು ಮೂಲದ ಓರ್ವ ಹಿಂದೂ ಸೇರಿ ನಾಲ್ವರು 20 ಕೋಟಿ ಶೂರಿಟಿ ನೀಡಿದ್ದರಿಂದ 109 ಜನರ ಬಿಡುಗಡೆ ಪ್ರಕ್ರಿಯೆ ನಡೆದು ಹೊರಬಂದರು.

ಧಾರವಾಡ ಕಾರಾಗೃಹದಿಂದ 40, ಬಳ್ಳಾರಿ ಕಾರಾಗೃಹದಿಂದ 8 ಹಾಗೂ ಬೆಳಗಾವಿಯಿಂದ 61 ಜನರು ಬಿಡುಗಡೆಯಾಗಿದ್ದಾರೆ. ಧಾರವಾಡ ಮತ್ತು ಬಳ್ಳಾರಿಯಿಂದ ಬಂದವರು ದರ್ಗಾಕ್ಕೆ ಹೋಗಿ ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಬೆಳಗಾವಿ ಕಾರಾಗೃಹದಲ್ಲಿರುವವರನ್ನು ಒಬ್ಬೊಬ್ಬರಾಗಿ ವೈದ್ಯಕೀಯ ಪರೀಕ್ಷೆ ನಡೆದು ಅವರು ಕೂಡ ರಾತ್ರಿ ಬಿಡುಗಡೆಯಾಗಿದ್ದಾರೆ.

2022ರ ಏಪ್ರಿಲ್ 16ರಂದು ಯುವಕನೊಬ್ಬ ವಿವಾದಾತ್ಮಕ ಎನಿಮೇಟೆಡ್ ವಾಟ್ಸ್ಆ್ಯಪ್ ವಿಡಿಯೊ ಸ್ಟೇಟಸ್‌ ಹಾಕಿದ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಗಲಭೆ ಆಗಿತ್ತು. ಕೆಲವರು ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ್ದರು. ಪೊಲೀಸ್‌ ವಾಹನಗಳು ಜಖಂಗೊಂಡಿದ್ದವು. ಒಂದು ಸಾವಿರಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿ, 155 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು.

ಕಾಂಗ್ರೆಸ್‌ನ್ನು ಅಧಿಕಾರದಿಂದ ಕೆಳಗಿಳಿಸಿ, ವಿಧಾನಸೌಧದಿಂದ ಹೊರ ಕಳಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ: ವಿಜಯೇಂದ್ರ

ಮೋದಿ ಅಲೆಯಲ್ಲಿ ಯಾರೇ ನಿಂತರೂ ಸೋಲು ಗ್ಯಾರಂಟಿ: ಸಿ.ಟಿ.ರವಿ

ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ಕಾರ್ಯಕ್ರಮದ ರಂಗು ಹೆಚ್ಚಿಸಿದ ಪಾಪ್ ಗಾಯಕಿ: ಸಂಭಾವನೆ ಎಷ್ಟು ಗೊತ್ತಾ..?

- Advertisement -

Latest Posts

Don't Miss