Sunday, September 8, 2024

Latest Posts

ಲಂಕೆಗೆ ಹೋದ ಹನುಮಂತ ಈ 4 ಕೆಲಸ ಮಾಡಿ ಬಂದಿದ್ದರಂತೆ..

- Advertisement -

Spiritual: ರಾಮಭಕ್ತ ಹನುಮಂತ, ಸೀತೆಯನ್ನು ಲಂಕೆಯಿಂದ ಕರೆ ತರುವುದಕ್ಕಾಗಿ, ಹಲವಾರು ಕೆಲಸಗಳನ್ನು ಮಾಡಿದ್ದರು ಅನ್ನೋದನ್ನ ರಾಮಾಯಣದಲ್ಲಿ ನೀವು ಓದಿರಬಹುದು. ಇಂದು ನಾವು ಲಂಕೆಗೆ ಹೋಗುತ್ತಿದ್ದ ಹನುಮಂತ, ಲೋಕ ಕಲ್ಯಾಣಕ್ಕಾಗಿ, 4 ಕೆಲಸ ಮಾಡಿ ಬದ್ದಿದ್ದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಸೀತೆಯನ್ನು ಕಾಣಲು ಹೋಗುವಾಗ, ಸಮುದ್ರವನ್ನು ದಾಟಿಕೊಂಡು ಹೋಗುತ್ತಿದ್ದ ಹನುಮಂತನಿಗೆ, ಸುರಸಾ ಎಂಬ ನಾಗಮಾತೆ ಸಿಗುತ್ತಾಳೆ. ಆಕೆ ಹನುಮನನ್ನು ನುಂಗಲು ಪ್ರಯತ್ನ ಮಾಡುತ್ತಾಳೆ. ಆಕೆಯ ಉಪಾಯ ಬಲ್ಲ ಹನುಮಂತ, ಆಕೆ ಎಷ್ಟು ಅಗಲ ಬಾಯಿ ತೆಗೆಯುತ್ತಾಳೋ, ಅಷ್ಟು ತನ್ನ ಅಂಗವನ್ನು ದೊಡ್ಡ ಮಾಡುತ್ತಾನೆ. ಬಳಿಕ ಸಣ್ಣವನಾಗಿ ಆಕೆಯ ಬಾಯಿಯೊಳಗೆ ಹೊಕ್ಕು ಹೊರಬರುತ್ತಾನೆ. ಹನುಮನ ಜಾಣತನ ನೊಡಿದ ಸುರಸಾ, ನಿನಗೆಲ್ಲ ಒಳ್ಳೆಯದಾಗಲಿ ಎಂದು ಹರಸಿ ಕಳುಹಿಸುತ್ತಾಳೆ.

ಎರಡನೇಯದಾಗಿ ಮಾಯಾ ಎಂಬ ರಾಕ್ಷಸಿ ಸಿಗುತ್ತಾಳೆ. ಆಕೆ ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ನೆರಳನ್ನು ಕಂಡು ಹಿಡಿದು ತಿನ್ನುತ್ತಿದ್ದಳು. ಹನುಮನ ನೆರಳು ಕಂಡು, ಅವನನ್ನೂ ನುಂಗಬೇಕು ಎಂದುಕೊಂಡಿದ್ದಳು. ಆದರೆ, ಆಕೆಯ ಛಲ ಕಪಟವನ್ನು ತಿಳಿದಿದ್ದ ಹನುಮಂತ, ಆಕೆಯ ವಧೆ ಮಾಡಿದ.

ಮೂರನೇಯದಾಗಿ ವಿಭೀಷಣನನ್ನು ಹನುಮಂತ ಭೇಟಿ ಮಾಡಿದ್ದು. ಸೀತೆಯನ್ನು ಕಾಣಲು ಹೊರಟಾಗ ಹನುಮಂತ, ವಿಭೀಷಣನ ಅರಮನೆಯ ಬಳಿಯಿಂದ ಹೊರಟಿದ್ದ. ಆಗ ಆ ಅರಮನೆಯ ಎದುರು ಜೈ ಶ್ರೀರಾಮ್ ಎಂದು ಬರೆದಿದ್ದನ್ನು ಕಂಡು, ವಿಭೀಷಣನನ್ನು ಭೇಟಿಯಾಗಿ, ತನ್ನ ಪರಿಚಯ ಹೇಳಿ, ನಿಮ್ಮನ್ನು ನಾನು ರಾಮನಿಗೆ ಭೇಟಿ ಮಾಡಿಸುತ್ತೇನೆಂದು ಮಾತು ಕೊಟ್ಟ.

ನಾಲ್ಕನೇಯದಾಗಿ ರಾವಣನ ಪುತ್ರ ಅಕ್ಷಯಕುಮಾರನನ್ನು ಹನುಮಂತ ವಧೆ ಮಾಡಿದ. ಇದನ್ನು ತಿಳಿದ ಮೇಘನಾಥ, ಹನುಮನಿಗೆ ಬ್ರಹ್ಮಾಸ್ತ್ರ ಬಿಟ್ಟು, ರಾವಣನ ಬಳಿ ಎಳೆದು ತಂದ. ಬಳಿಕ ಹನುಮಂತ, ರಾವಣನ ಬಳಿ ತನ್ನ ಒಡೆಯ ರಾಮನ ಗುಣಗಾನ ಮಾಡಿದ. ಇದಾದ ಬಳಿಕ ಲಂಕಾದಹನ ಮಾಡಿ, ಸೀತೆ ಕೊಟ್ಟ ಉಂಗುರವನ್ನು ತಂದು ರಾಮನಿಗೆ ನೀಡಿದ.

ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..

ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?

ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..

- Advertisement -

Latest Posts

Don't Miss