Monday, November 4, 2024

Latest Posts

ಮತದಾನ ಮಾಡಿರುವುದು ಸಂತೋಷ ತಂದಿದೆ: ವಿನಯ ಕುಲಕರ್ಣಿ

- Advertisement -

Dharwad News: ಧಾರವಾಡ : ನಾಲ್ಕು ವರ್ಷಗಳ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡುತ್ತಿರುವುದು ಸಂತೋಷವಾಗಿದೆ. ಅಷ್ಟೇ ನೋವು ಸಹ ತಂದಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿನಯ ಕುಲಕರ್ಣಿ ತಿಳಿಸಿದರು.

ಧಾರವಾಡ ನಗರದಲ್ಲಿ ಮತದಾನ ಮಾಡಿದ ನಂತರ ಮಾದ್ಯಮದವರ ಜೊತೆ ಮಾತನಾಡಿದ ಅವರು, ಇವತ್ತು ಉಚ್ಚ ನ್ಯಾಯಾಲಯ ಮತದಾನಕ್ಕೆ ಅವಕಾಶ‌ ಕೊಟ್ಟಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ಮಾಡಲು ಅವಕಾಶ ಸಿಕ್ಕಿದೆ. ಉಚ್ಚ ನ್ಯಾಯಾಲಯಕ್ಕೆ ನಾನು ಅಭಿನಂದನೆ ಸಲ್ಲಿಸಿವೆ ಎಂದು ತಿಳಿಸಿದರು.

ನನ್ನ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಸಿಕ್ಕಿರಲಿಲ್ಲ ಹಾಗೂ ಮತದಾನಕ್ಕೂ ಅವಕಾಶ ನೀಡಿರಲಿಲ್ಲ, ಈಗ ಲೋಕಾಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿಗೆ ಮತ ಹಾಕಲು ಅವಕಾಶ ಸಿಕ್ಕಿದೆ. ನಿಜವಾಗಿಯೂ ಬಹಳ ಸಂತೋಷವಾಗಿದೆ. ನಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನಾನು ಬರೋ ವಿಷಯವನ್ನು ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಮಾಧ್ಯಮಗಳು ನಾನು ಬರುವ ವಿಷಯ ತಿಳಿದು ಸುದ್ದಿ ಹಾಕಿರುವುದರಿಂದ ಬಹಳಷ್ಟು ಜನ ಕಾರ್ಯಕರ್ತರು ಬಂದಿದ್ದಾರೆ. ಇದಕ್ಕಾಗಿ ಮಾಧ್ಯಮಗಳಿಗೆ ಅಭಿನಂದನೆ ಹೇಳುವೆ ಎಂದರು.

ಸಹಜವಾಗಿಯೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಜೋಶ್ ಎದ್ದು ಕಾಣುತ್ತಿದೆ. 25 ವರ್ಷದಿಂದ ನಾನು ರಾಜಕೀದಯಲ್ಲಿದ್ದು, ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲ ರಂಗದಲ್ಲಿ ಕೆಲಸ ಮಾಡಿದ್ದೇನೆ. ನಾನು ಕ್ಷೇತ್ರದಲ್ಲಿ ಇರಲಿಲ್ಲ, ಆದರೂ ಅಭಿಮಾನಿಗಳು ಗೆಲ್ಲಿಸಿದ್ದಾರೆ. ನಾನು ಕ್ಷೇತ್ರಕ್ಕೆ ಬರದಿದ್ದರೂ ಗೆದ್ದಿದ್ದೇನೆ. ಇದು ಕರ್ನಾಟಕದಲ್ಲಿಯೇ ಮಾದರಿ ಆಗಿದೆ ಎಂದರು.

ಮತದಾನಕ್ಕೆ ಅವಕಾಶ ಸಿಕ್ಕಿರುವುದರಿಂದಲೇ ಕಾಂಗ್ರೆಸ್ ಗೆಲವು ಖಚಿತ ಅನ್ನೋದು ಗೋಚರ ಆಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ‌ ಧಾರವಾಡ ಈಗಾಗಲೇ ನಾವು ಗೆದ್ದಾಗಿದೆ. ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರು ಈ ಸಲವೂ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಮತದಾರರು ಒಲವು ಕಾಂಗ್ರೆಸ್ ಪರವಾಗಿದೆ. ನಾಲ್ಕು ವರ್ಷದ ಬಳಿಕ ಧಾರವಾಡಕ್ಕೆ ಬಂದಿದ್ದೇನೆ. ನನಗೆ ಬಹಳಷ್ಟು ಸಂತೋಷವಾಗಿದೆ ಎಂದರು.

ನಾನು ಈ ಭಾಗದ ಶಾಸಕನಾಗಿದ್ದರೂ ನಾಲ್ಕು ವರ್ಷದಿಂದ ನನ್ನ ಕ್ಷೇತ್ರಕ್ಕೆ ಬಂದಿರಲಿಲ್ಲ, ಅದು ನನ್ನ ದುರಾದೃಷ್ಟ, ನ್ಯಾಯಾಲಯ ಈಗ ಅವಕಾಶ ಕೊಟ್ಟಿದೆ. ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುವೆ. ಇವತ್ತು ನನ್ನ ಸೌಭಾಗ್ಯ ಪ್ರಜಾಪ್ರಭುತ್ವದಲ್ಲಿ ನನ್ನ ಹಕ್ಕು ನನಗೆ ಸಿಕ್ಕಂತಾಗಿದೆ. ಹುಬ್ಬಳ್ಳಿ ಮೂಲಕ ಧಾರವಾಡಕ್ಕೆ ಬಂದೇ ಎಲ್ಲಿಯೂ ಯಾರನ್ನು ಭೇಟಿಯಾಗಿಲ್ಲ, ಮತ ಹಾಕಿ ಬನ್ನಿ ಎಂದು ಕೋರ್ಟ್ ಹೇಳಿದೆ. ಅದರಂತೆ ಮತ ಚಲಾಯಿಸಿ ವಾಪಸ್ ಹೋಗುತ್ತೇನೆ ಎಂದರು.

ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ

Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ

ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ

- Advertisement -

Latest Posts

Don't Miss