Sunday, June 22, 2025

Latest Posts

ಹರಾ ಭರಾ ಕಬಾಬ್ ರೆಸಿಪಿ

- Advertisement -

Recipe: ಹರಭರಾ ಕಬಾಬ್ ಅಂದ್ರೆ, ಹಸಿರಾಗಿರುವ ಕಬಾಬ್. ಹಸಿರು ಅಂದ್ರೆ ಆರೋಗ್ಯ. ಹಾಗಾದ್ರೆ ಯಾವ ರೀತಿ ಮನೆಯಲ್ಲೇ ಆರೋಗ್ಯವಾದ, ರುಚಿಕರವೂ ಆದ ಹರಾ ಭರಾ ಕಬಾಬ್ ತಯಾರಿಸುವುದು ಹೇಗೆ..? ಇದನ್ನು ತಯಾರಿಸಲು ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..

ಒಂದು ಪ್ಯಾನ್‌ಗೆ ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಹಸಿಮೆಣಸು, ಹಸಿ ಬಟಾಣಿ, ಬೀನ್ಸ್, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಒಂದು ಕಪ್ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ನೀರಿಗೆ ಹಾಕಿ ಕುದಿಸಿ. ನೀರು ಬಸಿದು ಇದನ್ನು ಮತ್ತು ಹುರಿದಿಟ್ಟುಕೊಂಡ ತರಕಾರಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ತಯಾರಿಸಿಕೊಳ್ಳಿ.

ಈಗ 2 ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಸ್ವಲ್ಪ ತುರಿದ ಪನೀರ್, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಕಾರ್ನ್ ಫ್ಲೋರ್, ಬ್ರೆಡ್ ಕ್ರಂಬ್ಸ್, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಅರಿಶಿನ ಪುಡಿ, ಚಾಟ್ ಮಸಾಲೆ ಪುಡಿ, ಉಪ್ಪು, ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿ.

ಈಗ ಈ ಮಿಶ್ರಣವನ್ನು ಕಬಾಬ್ ರೀತಿ ತಟ್ಟಿ, ಕಾದ ಎಣ್ಣೆಯಲ್ಲಿ ಕರಿದರೆ, ಹರಾ ಭರಾ ಕಬಾಬ್ ರೆಡಿ. ಇದರ ಮೇಲೆ ಬೇಕಾದರೆ ನೀವು ಗೋಡಂಬಿಯಿಂದ ಗಾರ್ನಿಶ್ ಮಾಡಬಹುದು.

ಯಾವುದೇ ಆಹಾರವನ್ನು ಅತೀಯಾಗಿ ತಿಂದಲ್ಲಿ ಏನಾಗತ್ತೆ ಗೊತ್ತಾ..?

ಸೂಪ್ಗಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

- Advertisement -

Latest Posts

Don't Miss