ಹಾಸನಾಂಬಾ ದೇವಿ ದರ್ಶನ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇಷ್ಟು ದಿನ ಹಾಸನಾಂಬ ದೇವಿ ದರ್ಶನಕ್ಕೆ ಅವಕಾಶವಿದ್ದು, ಲಕ್ಷಾಂತರ ಭಕ್ತರು ದೂರದೂರು ಮತ್ತು ಹೊರರಾಜ್ಯಗಳಿಂದ ಬಂದು ಹಾಸನಾಂಬೆಯ ದರ್ಶನ ಪಡೆದು ಹೋಗಿದ್ದಾರೆ. ರಾಜಕೀಯ ನಾಯಕರು ಕೂಡ ಹಾಸನಾಂಬೆಯ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.
ನಿನ್ನೆವರೆಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶವಿದ್ದು, ಇಂದು ಮಧ್ಯಾಹ್ನ 12.47ರ ಸುಮಾರಿಗೆ, ಸಕಲ ವಿಧಿವಿಧಾನಗಳನ್ನು ಪೂರೈಸಿ ದೇವಾಲಯಕ್ಕೆ ಬಾಗಿಲು ಹಾಕಲಾಯಿತು. ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ, ಶಾಸಕರಾದ ಪ್ರೀತಂ ಗೌಡ ,ಸಿ.ಎನ್ ಬಾಲಕೃಷ್ಣ, ಜಿಲ್ಲಾಧಿಕಾರಿ ಅರ್ಚನಾ, ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಮತ್ತಿತರರು ಉಪಸ್ಥಿತಿ ಇದ್ದು ದೇವಾಲಯದ ಬಾಗಿಲು ಹಾಕುವ ಕಾರ್ಯಕ್ಕೆ ಸಾಕ್ಷಿಯಾದರು.
ಇನ್ನು ದೇವಿ ಮುಂದಿನ ವರ್ಷವೇ ಭಕ್ತರಿಗೆ ದರುಶನ ನೀಡಲಿದ್ದು, ಮುಂದಿನ ವರ್ಷ ನ.2-11-2023 ರಿಂದ ನ.15-11-2023 ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ಜರುಗಲಿದೆ.