Health Tips: ಲಾವಂಚ ಅಂದರೆ ಒಂದು ಬೇರು. ಇಡಗುಂಜಿ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಇದರ ಪರಿಚಯ ಹೆಚ್ಚಾಗಿ ಇರುತ್ತದೆ. ಏಕೆಂದರೆ ಅಲ್ಲಿ, ಲಾವಂಚದ ಬೇರಿನಿಂದ ಬ್ಯಾಗ್, ಪರ್ಸ್, ಸೇರಿ ಹಲವು ವಸ್ತುಗಳನ್ನು ತಯಾರಿಸುತ್ತಾರೆ. ಈ ಲಾವಂಚದ ಬೇರಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ, ಲಾವಂಚದ ನೀರಿನಿಂದಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಲಾವಂಚವನ್ನ ಔಷಧಿ ತಯಾರಿಸಲು ಬಳಸಲಾಗುತ್ತದೆ. ಜೊತೆಗೆ ನೀರಿನಲ್ಲಿ ಹಾಕಿ ಕುದಿಸಿ, ಲಾವಂಚದ ನೀರು ಮಾಡಲಾಗುತ್ತದೆ. ಕೆಲವರು ಇದನ್ನು ಕುಡಿದರೆ, ಇನ್ನು ಕೆಲವರು ಈ ನೀರನ್ನು ಬಳಸಿ ಮುಖ ತೊಳೆಯುತ್ತಾರೆ. ಏಕೆಂದರೆ, ಲಾವಂಚದ ಸುವಾಸನೆ ಅಷ್ಟು ಅದ್ಭುತವಾಗಿರುತ್ತದೆ. ಹಾಗಾಗಿ ಪರ್ಫ್ಯೂಮ್, ಮೇಕಪ್ ಸಾಧನ ತಯಾರಿಸುವಾಗಲೂ ಕೆಲವರು ಲಾವಂಚವನ್ನು ಬಳಸುತ್ತಾರೆ.
ಲಾವಂಚದ ನೀರನ್ನು ಹೆಚ್ಚಾಗಿ ಬೇಸಿಗೆಕಾಲದಲ್ಲಿ ಬಳಸುತ್ತಾರೆ. ಏಕೆಂದರೆ, ಬೇಸಿಗೆಯಲ್ಲಿ ಬರೀ ನೀರಿನಿಂದ ನಮ್ಮ ಆರೋಗ್ಯ ಸರಿಯಾಗುವುದಿಲ್ಲ. ಅದಕ್ಕಾಗಿಯೇ, ಎಳನೀರು, ಜ್ಯೂಸ್, ಮಜ್ಜಿಗೆ ಸೇವನೆ ಮಾಡಬೇಕು ಅಂತಾ ಹೇಳುತ್ತಾರೆ. ಇದರೊಂದಿಗೆ ನೀವು ಬರೀ ನೀರು ಕುಡಿಯುವ ಬದಲು, ಲಾವಂಚದ ನೀರು ಕುಡಿದರೆ, ಇನ್ನೂ ಅದ್ಭುತ ಆರೋಗ್ಯ ಲಾಭವನ್ನು ನೀವು ಪಡಿಯಬಹುದು.
ಬೇಸಿಗೆಯಲ್ಲಿ ಹಸಿವಿಗಿಂತ ಹೆಚ್ಚು ಬಾಯಾರಿಕೆಯಾಗುತ್ತದೆ. ಹಾಗಾಗಿ ನೀರನ್ನೇ ಹೆಚ್ಚು ಕುಡಿಯುತ್ತಾರೆ. ಅದರ ಬದಲಾಗಿ ನೀವು ಲಾವಂಚದ ನೀರು ಕುಡಿದರೆ, ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದರಿಂದ ಬೇಸಿಗೆಯಲ್ಲಿ ಬರುವ ಶೀತ, ಜ್ವರದಿಂದ ನೀವು ಪಾರಾಗಬಹುದು.
ಸ್ನಾನ ಮಾಡುವಾಗ, ಲಾವಂಚದ ನೀರನ್ನು ಬಿಸಿ ನೀರಿಗೆ ಸೇರಿಸಿ, ಸ್ನಾನ ಮಾಡಿದರೆ, ಬೆವರಿನ ವಾಸನೆಯೂ ಹೋಗುತ್ತದೆ. ನೀವು ಇಡೀ ದಿನ ಫ್ರೆಶ್ ಆಗಿರುವಂತೆ ಮಾಡುತ್ತದೆ.
ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..




