ಮಜ್ಜಿಗೆ, ಮೊಸರು, ಹಾಲು, ಬೆಣ್ಣೆ, ತುಪ್ಪ ಈ ಆಹಾರಗಳೆಲ್ಲವೂ ದೇಹಕ್ಕೆ ಶಕ್ತಿ ಕೊಡುವಂಥದ್ದು. ಚಿಕ್ಕಂದಿನಲ್ಲೇ ಮಕ್ಕಳಿಗೆ ಇವನ್ನೆಲ್ಲ ತಿನ್ನಿಸಿದರೆ, ಮಕ್ಕಳು ದಷ್ಟಪುಷ್ಟವಾಗಿ, ಆರೋಗ್ಯವಾಗಿ ಬೆಳೆಯುತ್ತಾರೆ. ದೊಡ್ಡವರು ಇದನ್ನೆಲ್ಲ ಸೇವಿಸಿದರೂ ಉತ್ತಮ. ಅದರಲ್ಲೂ ಮಜ್ಜಿಗೆ ಸೇವನೆಯಿಂದ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?
ಹೆಚ್ಚಿನ ಜನ ಬೇಸಿಗೆ ಕಾಲದಲ್ಲಿ ಮಜ್ಜಿಗೆಯನ್ನು ಸೇವಿಸುತ್ತಾರೆ. ಆದ್ರೆ ಚಳಿಗಾಲದಲ್ಲೂ ಕೂಡ ಇದರ ಸೇವನೆ ಬಹು ಉಪಯೋಗಿಯಾಗಿದೆ. ಇದರಲ್ಲಿ ವಿಟಾಮಿನ್ ಎ, ಬಿ, ಸಿ, ಈ ಭರಪೂರ ಮಾತ್ರದಲ್ಲಿದ್ದು, ಕ್ಯಾಲ್ಸಿಯಂ, ಪೋಟ್ಯಾಶಿಯಂನಂಥ ಪೋಷಕ ತತ್ವಗಳು ಸಹ ಇದೆ. ಹಾಗಾಗಿ ಮಜ್ಜಿಗೆ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ.
ಅಲ್ಲದೇ, ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮಜ್ಜಿಗೆ ಸಹಾಯ ಮಾಡುತ್ತದೆ. ಅಲ್ಲದೇ ನೀವು ಇಡೀ ದಿನ ಚೈತನ್ಯದಾಯಕರಾಗಿರುವಂತೆ ಮಾಡುತ್ತದೆ. ಮಜ್ಜಿಗೆ ಕುಡಿಯುವುದರಿಂದ ಹಸಿವು ಕೂಡ ಕಡಿಮೆಯಾಗುತ್ತದೆ. ಯಾಕಂದ್ರೆ ಮಜ್ಜಿಗೆ ಕುಡಿದೇ ನಿಮಗೆ ಹೊಟ್ಟೆ ತುಂಬುತ್ತದೆ. ಹಾಗಾಗಿ ಕಡಿಮೆ ಊಟ ಮಾಡಿ, ನೀವು ಹೆಚ್ಚು ಮಜ್ಜಿಗೆ ಕುಡಿಯಬಹುದು. ಇದರಿಂದ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಬಹುದು.
ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?
ಇನ್ನು ನೀವು ತಿಂದ ಆಹಾರ ಅಜೀರ್ಣವಾಗಿದ್ದರೆ, ನಿಮಗೆ ಹೊಟ್ಟೆ ನೋವಾಗುತ್ತಿದ್ದರೆ, ಮಜ್ಜಿಗೆಗೆ ಚಿಟಿಕೆ ಇಂಗು ಸೇರಿಸಿ ಸೇವಿಸಿದರೆ, ಹೊಟ್ಟೆ ನೋವು ಶಮನವಾಗುತ್ತದೆ. ತಿಂದ ಆಹಾರವೂ ಬೇಗ ಜೀರ್ಣವಾಗುತ್ತದೆ. ಮಜ್ಜಿಗೆ ಸೇವನೆಯಿಂದ ಮೂಳೆ ಗಟ್ಟಿಗೊಳ್ಳುತ್ತದೆ. ಯಾಕಂದ್ರೆ ಇದರಲ್ಲಿ ಕ್ಯಾಲ್ಸಿಯಂ ಅಂಶವಿದ್ದು, ಇದು ಮೂಳೆ ಗಟ್ಟಿಗೊಳಿಸಲು ಅನುಕೂಲಕರವಾಗಿದೆ.
ನೀವು ಮಜ್ಜಿಗೆಯನ್ನು ಪ್ರತಿನಿತ್ಯ ಸೇವಿಸಬಹುದು. ಆದ್ರೆ ಸಂಜೆ ಬಳಿಕ ಮಜ್ಜಿಗೆ ಸೇವನೆ ಮಾಡುವ ಬದಲು ಬೆಳಿಗ್ಗೆ ಅಥವಾ ಮಧ್ಯಾಹ್ನ ಮಜ್ಜಿಗೆ ಕುಡಿಯಿರಿ. ದೇಹದಲ್ಲಿ ನೀರಿನ ಕೊರತೆ ಇದ್ದಲ್ಲಿ ಇದು ಆ ಕೊರತೆಯನ್ನು ಸರಿದೂಗಿಸುತ್ತದೆ. ಹಾಗಾಗಿ ನಿಮಗೆ ಬಾಯಾರಿಕೆಯಾದಾಗ, ಕೊಂಚ ಕೊಂಚ ಮಜ್ಜಿಗೆ ಕುಡಿದರೂ ಉತ್ತಮ.