Friday, April 18, 2025

Latest Posts

1 ವಾರ ಚೀಯಾ ಸೀಡ್ಸ್ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆಯಾಗತ್ತೆ ನೋಡಿ..

- Advertisement -

ಡಯಟ್ ಮಾಡುವವರಿಗೆಲ್ಲ ಚೀಯಾ ಸೀಡ್ಸ್ ಅಂದ್ರೆ ಏನು ಅಂತಾ ಗೊತ್ತಿರತ್ತೆ. ಇದನ್ನ ಕನ್ನಡದಲ್ಲಿ ಕಾಮಕಸ್ತೂರಿ ಬೀಜವೆಂದು ಹೇಳುತ್ತಾರೆ. ದೆಹಕ್ಕೆ ತಂಪು ನೀಡುವ ಈ ಚೀಯಾ ಸೀಡ್ಸನ್ನ ಫ್ರೂಟ್ ಸಲಾಡ್, ಜ್ಯೂಸ್, ಮೀಲ್ಕ್ ಶೇಕ್ ಎಲ್ಲದಕ್ಕೂ ಸೇರಿಸಿ ತಿನ್ನಲಾಗತ್ತೆ. ನಾವಿಂದು ಚೀಯಾ ಸೀಡ್ಸ್ ತಿಂದ್ರೆ ಆರೋಗ್ಯಕ್ಕಾಗುವ ಲಾಭಗಳೆನು ಅಂತಾ ಹೇಳಲಿದ್ದೇವೆ.

ಮೊದಲನೇಯ ಆರೋಗ್ಯ ಲಾಭ, ನಿಮ್ಮ ತ್ವಚೆ ಸುಕ್ಕುಗಟ್ಟುವುದಿಲ್ಲ. ನೀವು ವಯಸ್ಸಾದವರಂತೆ ಕಾಣುವುದಿಲ್ಲ. ನಿಮಗೆ 50-60 ವರ್ಷವಾದರೂ ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಚೀಯಾ ಸೀಡ್ಸ್ ಬೆರೆಸಿ ತಿನ್ನಿ. ಅಥವಾ ತಿಂಡಿ ತಿನ್ನುವಾಗ ಇದನ್ನು ನೆನೆಸಿ ಬಳಸಿ. ಜ್ಯೂಸ್ ಮಾಡಿ ಕುಡಿಯುವಾಗಲೂ ಇದನ್ನ ಸೇರಿಸಬಹುದು.

ಎರಡನೇಯ ಆರೋಗ್ಯ ಲಾಭ ನಿಮ್ಮ ತೂಕವನ್ನ ಇಳಿಸುವಲ್ಲಿ ಚೀಯಾ ಸೀಡ್ಸ್‌ ಸಹಾಯ ಮಾಡತ್ತೆ. ನೀವು ನಿಮ್ಮ ದೇಹದ ತೂಕವನ್ನ ಇಳಿಸಬೇಕು ಎಂದುಕೊಂಡಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಚೀಯಾ ಸೀಡ್ಸ್ ನೆನೆಸಿಟ್ಟು ಬೆರೆಸಿ. ಜೊತೆಗೆ ಕೊಂಚ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯಿರಿ. ಇದರಿಂದ ನಿಮ್ಮ ದೇಹದ ತೂಕ ಇಳಿಯುತ್ತದೆ.

ಮೂರನೇಯ ಆರೋಗ್ಯ ಲಾಭ ಹೃದಯದ ಆರೋಗ್ಯವನ್ನ ವೃದ್ಧಿಸುವಲ್ಲಿ ಇದು ಸಹಾಯ ಮಾಡತ್ತೆ. ನಿಮ್ಮ ಹೃದಯದ ಆರೋಗ್ಯ ಸರಿಯಾಗಿ ಇಲ್ಲವೆಂದಲ್ಲಿ, ನಿಮಗೆ ಉಸಿರಾಡಲು ತೊಂದರೆಯಾಗತ್ತೆ, ಸ್ವಲ್ಪ ನಡೆದರೂ ಸುಸ್ತಾಗತ್ತೆ ಎಂದಲ್ಲಿ ನೀವು ಪ್ರತಿದಿನ ನೀರಿನಲ್ಲಿ ಚೀಯಾಸೀಡ್ಸ್ ನೆನೆಸಿಟ್ಟು, ಅದನ್ನ ನಿಮ್ಮ ತಿಂಡಿಗೆ ಬೆರೆಸಿ ತಿನ್ನಿ. ಇದರಿಂದ ಹೃದಯ ಸಮಸ್ಯೆ ಎಂದಿಗೂ ಬರುವುದಿಲ್ಲ.

ನಾಲ್ಕನೇಯ ಆರೋಗ್ಯ ಲಾಭ ಇದು ನಿಮ್ಮ ಮೂಳೆಯನ್ನ ಗಟ್ಟಿಗೊಳಿಸತ್ತೆ. ಚೀಯಾ ಸೀಡ್ಸ್ ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚತ್ತೆ. ಈ ಕಾರಣಕ್ಕೆ ಚೀಯಾ ಸೀಡ್ಸ್ ಸೇವನೆ ಮಾಡಬೇಕು.

ಐದನೇಯ ಆರೋಗ್ಯ ಲಾಭ ನಿಮಗೆ ಬಿಪಿ ಶುಗರ್ ಇದ್ದಲ್ಲಿ, ಅದನ್ನ ಕೂಡ ಕಂಟ್ರೋಲಿನಲ್‌ಲಿಡಲು ಇದು ಸಹಾಯ ಮಾಡತ್ತೆ. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಅಥವಾ ಜ್ಯೂಸ್, ಸ್ಮೂದಿ ಯಾವುದಕ್ಕಾದರೂ ಚೀಯಾ ಸೀಡ್ಸ್ ಸೇರಿಸಿ ತಿನ್ನಿ. ಇದರಿಂದ ಶುಗರ್ ಕಂಟ್ರೋಲಿನಲ್ಲಿರತ್ತೆ.

ಬೆಲ್ಲ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳಿವು..

ಊಟವಾದ ಬಳಿಕ ಈ ತಪ್ಪು ಎಂದಿಗೂ ಮಾಡಬೇಡಿ..

ಮುಖದ ಮೇಲಿರುವ ಕೂದಲನ್ನು ಯಾವ ರೀತಿ ತೆಗೆದುಹಾಕಬೇಕು..?

- Advertisement -

Latest Posts

Don't Miss