Sunday, September 8, 2024

Latest Posts

ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..

- Advertisement -

ನಮ್ಮ ಭಾರತೀಯ ಅಡುಗೆ ಮಾಡುವ ರೀತಿ ಅದೆಷ್ಟು ಅತ್ಯುತ್ತಮವೆಂದರೆ, ಆ ಆಹಾರದಲ್ಲಿ ರುಚಿಯೂ ಇರುತ್ತದೆ. ಆರೋಗ್ಯವೂ ಇರುತ್ತದೆ. ಮಿತವಾಗಿ ಬಳಸುವ ಶುದ್ಧವಾದ ಎಣ್ಣೆ, ಮಸಾಲೆ ಪದಾರ್ಥ, ಅರಿಶಿನ ಇತ್ಯಾದಿ ಪದಾರ್ಥಗಳು ಬರೀ ರುಚಿಯನ್ನ ಹೆಚ್ಚಿಸುವುದಷ್ಟೇ ಅಲ್ಲದೇ, ಆರೋಗ್ಯವನ್ನೂ ವೃದ್ಧಿಸುತ್ತದೆ. ಇಂಥ ಆಹಾರದಲ್ಲಿ ಹಾಕುವ ಲವಂಗ ಕೂಡ ಒಂದು ಆರೋಗ್ಯಕರ ಮಸಾಲೆ ಪದಾರ್ಥ. ಹಾಗಾಗಿ ಇಂದು ನಾವು ಲವಂಗ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ತಲೆನೋವಿನಿಂದ ಹಿಡಿದು ಮಧುಮೇಹದ ವರೆಗೂ..ಇಂಗು ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯೇ..?

ಲವಂಗ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಿಳಿ ರಕ್ತಕಣಗಳ ಪ್ರಮಾಣವೂ ಹೆಚ್ಚುತ್ತದೆ. ಅಲ್ಲದೇ ಹೊಟ್ಟೆ ನೋವಿನ ಸಮಸ್ಯೆ, ಸ್ಟ್ರೆಸ್ ದೂರ ಮಾಡುವಲ್ಲಿಯೂ ಲವಂಗ ಸಹಾಯ ಮಾಡುತ್ತದೆ. ಗಂಟಲಲ್ಲಿ ಕಿರಿಕಿರಿಯುಂಟಾದರೆ ಒಂದು ಲವಂಗವನ್ನ ಬಾಯಲ್ಲಿಟ್ಟುಕೊಂಡು ಅಗಿದು ಅದರ ರಸವನ್ನ ನುಂಗಿ. ಕೆಲವೇ ನಿಮಿಷಗಳಲ್ಲಿ ಗಂಟಲ ಕಿರಿಕಿರಿ ದೂರವಾಗುತ್ತದೆ.

ಲವಂಗವನ್ನ ಜನ ಬೇರೆ ಬೇರೆ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಕೆಲವರು ಲವಂಗದೆಣ್ಣೆ ಬಳಸಿದ್ರೆ, ಕೆಲವರು ಚಹಾಕ್ಕೆ, ಹಾಲಿಗೆ, ಕಶಾಯಕ್ಕೆ ಲವಂಗ ಬಳಸಿ ಸೇವಿಸುತ್ತಾರೆ. ಇನ್ನು ಕೆಲವರು ಲವಂಗದ ಪುಡಿಯನ್ನು ಬಳಸುತ್ತಾರೆ. ಹೀಗೆ ಆಯಾ ಸಮಸ್ಯೆಗೆ ಆಯಾ ರೀತಿಯಲ್ಲಿ ಲವಂಗವನ್ನ ಬಳಸಲಾಗುತ್ತದೆ. ಲವಂಗ ಬಳಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಮೊಸರಿನೊಂದಿಗೆ ಈ 4 ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಬೇಡಿ…!

ಹಾಗಾಗಿಯೇ ವಾರದಲ್ಲಿ ನಾಲ್ಕು ಬಾರಿಯಾದ್ರೂ ಮಸಾಲೆ ಪದಾರ್ಥ , ಅರಿಶಿನ, ಕಲ್ಲುಸಕ್ಕರೆ ಬಳಸಿ ಮಾಡಿದ ಅರಿಶಿನದ ಹಾಲನ್ನ ಕುಡಿಯಬೇಕು ಅಂತಾ ಹೇಳೋದು. ಇನ್ನು ವಾರದಲ್ಲಿ ಒಂದೆರಡು ಬಾರಿ ಲವಂಗ ಹಾಕಿದ ಕಶಾಯ ಅಥವಾ ಚಹಾವನ್ನ ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಹಲ್ಲು ನೋವಿದ್ದಲ್ಲಿ, ಆ ಜಾಗದಲ್ಲಿ ಒಂದು ಲವಂಗವನ್ನಿಟ್ಟುಕೊಂಡರೆ ಹಲ್ಲು ನೋವು ಮಾಯವಾಗುತ್ತದೆ. ಆದರೆ ನೆನಪಿರಲಿ ಪ್ರತಿದಿನ ಲವಂಗ ಸೇವಿಸಬೇಕಂದಲ್ಲಿ ಒಂದೇ ಒಂದು ಲವಂಗ ಸೇವಿಸಿದ್ರೆ ಸಾಕು. ಅದಕ್ಕಿಂತ ಹೆಚ್ಚು ಲವಂಗ ಸೇವಿಸಿದ್ದಲ್ಲಿ, ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

- Advertisement -

Latest Posts

Don't Miss