ಭೂರಿ ಭೋಜನ ತಿಂದು ಕೊನೆಗೆ ಮೊಸರನ್ನ ತಿಂದಾಗಲಷ್ಟೇ ನಾವು ತಿಂದಿದ್ದೆಲ್ಲ ಜೀರ್ಣ ಆಗೋದು. ಅಷ್ಟೇ ಯಾಕೆ ಹೊಟ್ಟೆ ಕೆಟ್ಟಾಗಲೂ ಬರೀ ಮೊಸರನ್ನ ತಿಂದ್ರೆ, ಆರೋಗ್ಯ ಸರಿ ಹೋಗತ್ತೆ. ಹಾಗಾಗಿ ಮೊಸರನ್ನ ಬರೀ ರುಚಿಕರವಲ್ಲ, ಆರೋಗ್ಯಕರವೂ ಹೌದು ಅಂತಾ ಹೇಳಿದ್ದು.. ಹಾಗಾದ್ರೆ ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಸಿಹಿ ಗೆಣಸು ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ..
ಮೊಸರಿನ ಜೊತೆ ನೀರು ಸೇರಿಸಿ ಸೇವಿಸಿದರೆ ದೇಹಕ್ಕೆ ತಂಪು. ಮೊಸರನ್ನ ಹಾಗೆ ಸೇರಿಸಿದರೆ, ದೇಹಕ್ಕೆ ಉಷ್ಣ. ಹಾಗಾಗಿ ಮೊಸರಿನ ಜೊತೆ ಸ್ವಲ್ಪವಾದರೂ ನೀರನ್ನು ಸೇರಿಸಿ ಸೇವಿಸಿ ಅಂತಾ ಹೇಳುತ್ತಾರೆ. ಮೊಸರನ್ನ ತಿನ್ನುವುದರಿಂದ ಪಾಚನಶಕ್ತಿ ಉತ್ತಮವಾಗಿರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗಿ, ನಿಮ್ಮ ತೂಕ ಕೂಡ ಸರಿಯಾಗಿರುತ್ತದೆ. ಅನ್ನ ತಿಂದರೆ ಬೊಜ್ಜು ಬೆಳೆಯುತ್ತದೆ ಅನ್ನೋ ಭಯ ಇದ್ದವರು, ಮೊಸರನ್ನ ತಿನ್ನಬಹುದು.
ನಿಮಗೆ ಹೊಟ್ಟೆ ಹಾಳಾಗಿದೆ. ಹೊಟ್ಟೆ ನೋವಾಗುತ್ತಿದೆ. ತಿಂದಿದ್ದೆಲ್ಲ ವಾಂತಿಯಾಗುತ್ತಿದೆ ಎಂದಾದಲ್ಲಿ, ಮೊಸರನ್ನವನ್ನ ಸೇವಿಸಿ. ಇದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಿದ್ದರೆ, ಮೊಸರನ್ನವನ್ನ ಸೇವಿಸಬಹುದು. ಮುಖದಲ್ಲಿ ಹೆಚ್ಚು ಮೊದವೆಗಳಾಗುತ್ತಿದೆ ಎಂದಲ್ಲಿ, ಹೆಚ್ಚು ಕೂದಲು ಉದುರುತ್ತಿದೆ ಎಂದಲ್ಲಿ ಮೊಸರನ್ನವನ್ನ ಸೇವಿಸಿ. ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಮೊಸರನ್ನವನ್ನ ಸೇವಿಸುವುದು ಉತ್ತಮ.
ಹುರಿಗಡಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?
ಇನ್ನು ಮೊಸರನ್ನವನ್ನ ರಾತ್ರಿ ಹೊತ್ತು ಅಥವಾ ಸಂಜೆ ಹೊತ್ತು ತಿನ್ನುವ ಬದಲು, ಮಧ್ಯಾಹ್ನ ತಿಂದರೆ ಉತ್ತಮ. ಯಾಕಂದ್ರೆ ರಾತ್ರಿ ಹೊತ್ತು ಮೊಸರು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಹಾಗಾಗಿ ಮಧ್ಯಾಹ್ನವಷ್ಟೇ ಮೊಸರಣ್ಣ ಉಣ್ಣುವುದು ಉತ್ತಮ.