ಆಯುರ್ವೇದದಲ್ಲಿ ಹಲವು ರೀತಿಯ ಎಣ್ಣೆಗಳ ತಯಾರಿಕೆ ಬಗ್ಗೆ ಮಾಹಿತಿ ಇದೆ. ಒಂದೊಂದು ಎಣ್ಣೆಗೂ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ ಕರಿಬೇವಿನ ಎಣ್ಣೆಯಿಂದಲೂ ಆರೋಗ್ಯಕ್ಕೆ ಅತ್ಯುನ್ನತ ಪ್ರಯೋಜನಗಳಿದೆ. ಹಾಗಾದ್ರೆ ಆ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಉಪಯೋಗವನ್ನು ನೀವು ಪ್ರತಿದಿನ ಮಾಡೇ ಮಾಡ್ತೀರಾ. ಅದರಲ್ಲೂ ಕರಿಬೇವಿನ ಉಪಯೋಗವನ್ನು ಹೆಚ್ಚಾಗಿ ಮಾಡುವುದೇ ದಕ್ಷಿಣ ಭಾರತದವರು. ಪಲ್ಯ, ಸಾರು, ಸಾಂಬಾರ್, ತಂಬಳಿ ಎಲ್ಲದಕ್ಕೂ ಕರಿಬೇವಿನ ಒಗ್ಗರಣೆ ಹಾಕಿದಾಗಲೇ, ಅದರ ರುಚಿ ಹೆಚ್ಚಾಗೋದು. ಆದ್ರೆ ನೀವು ಬರೀ ಕರಿಬೇವಿಂದಷ್ಟೇ ಅಲ್ಲದೇ, ಕರಿಬೇವಿನ ಎಣ್ಣೆಯಿಂದಲೂ, ಹಲವು ಲಾಭವನ್ನು ಪಡೆಯಬಹುದು.
ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟು ಲಾಭ ಉಂಟು ಗೊತ್ತೇ..?
ತೆಂಗಿನ ಎಣ್ಣೆಯಲ್ಲಿ ಕರಿಬೇವನ್ನು ಹಾಕಿ, ಚೆನ್ನಾಗಿ ಕುದಿಸಿದರೆ, ಕರಿಬೇವಿನ ಎಣ್ಣೆ ತಯಾರಾಗತ್ತೆ. ಕರಿಬೇವಿನ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ, ತಲೆ ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ, ತಲೆ ಕೂದಲು ಕಪ್ಪಾಗಿ ಇರುತ್ತದೆ. ವಯಸ್ಸಾದರೂ ನಿಮ್ಮ ತಲೆಗೂದಲು ಹೆಚ್ಚು ಬೆಳ್ಳಗಾಗುವುದಿಲ್ಲ.
ಇನ್ನು ದೇಹಕ್ಕೆ ಕರಿಬೇವಿನ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ನರಗಳು ಆ್ಯಕ್ಟೀವ್ ಆಗುವುದಲ್ಲದೇ, ನಿಮಗಿರುವ ಎಲ್ಲ ದಣಿವು ಮಾಯವಾಗುತ್ತದೆ. ಈ ಎಣ್ಣೆಯಿಂದ ಮಸಾಜ್ ಮಾಡಿ, ಬಿಸಿ ನೀರಿನಿಂದ ಸ್ನಾನ ಮಾಡಿದ್ದಲ್ಲಿ, ನೀವು ಚೈತನ್ಯದಾಯವಾಗಿರುತ್ತೀರಿ. ಅಷ್ಟೇ ಅಲ್ಲದೇ, ಪುರುಷರಲ್ಲಿ ವೀರ್ಯ ಕೊರತೆ ಇದ್ದಲ್ಲಿ, ವಾರಕ್ಕೆರಡು ಬಾರಿ ಕರಿಬೇವಿನ ಎಣ್ಣೆಯಿಂದ ಬಾಡಿ ಮಸಾಜ್ ಮಾಡಿ, ಸ್ನಾನ ಮಾಡಬೇಕು.
ಪುದೀನಾ ಪುಡಿ ಸೇವನೆಯಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು..?
ಇನ್ನು ಊಟದಲ್ಲಿ ಸಿಕ್ಕ ಕರಿಬೇವಿನ ಎಲೆಯನ್ನು ಪಕ್ಕಕ್ಕಿರಿಸದೇ, ಅದನ್ನೂ ಕೂಡ ನೀವು ಸೇವಿಸಿದ್ದಲ್ಲಿ, ನಿಮ್ಮ ಆರೋಗ್ಯಕ್ಕೆ ತುಂಬಾ ಉತ್ತಮ. ನಿಮ್ಮ ತಲೆ ಕೂದಲು ಕಪ್ಪಾಗಿರುತ್ತದೆ. ನಿಮ್ಮ ತ್ವಚೆ ಉತ್ತಮವಾಗಿರುತ್ತದೆ. ಇದರಲ್ಲಿರುವಂ ಅಂಶ ನಿಮ್ಮ ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸಿ, ನಿಮ್ಮ ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ ಕೊಡಿಸುತ್ತದೆ.