ಹಲವರಿಗೆ ಮೋಸಂಬಿ ಕಂಡರೆ ಅಷ್ಟಕಷ್ಟೆ. ಚಿಕ್ಕು, ಬಾಳೆ ಹಣ್ಣು, ಆ್ಯಪಲ್‌ನ್ನು ಇಷ್ಟಪಟ್ಟು ತಿಂದಷ್ಟು, ಮೋಸಂಬಿಯನ್ನು ಇಷ್ಟ ಪಟ್ಟು ತಿನ್ನುವವರು ಕಡಿಮೆ. ಯಾಕಂದ್ರೆ ಇದು ಅಷ್ಟು ರುಚಿಯಾಗಿರೋದಿಲ್ಲಾ. ಅದರ ಬದಲು ಅಂಗಡಿಗೆ ಹೋಗಿ, ಮೋಸಂಬಿ ಜ್ಯೂಸ್ ಸೇವಿಸುತ್ತಾರೆ. ಅದು ಟೇಸ್ಟಿಯಾಗಿರತ್ತೆ. ಯಾಕಂದ್ರೆ ಅದರಲ್ಲಿ ಐಸ್, ಸಕ್ಕರೆ ಸೇರಿಸಿರ್ತಾರೆ. ಆದ್ರೆ ಇದು ಕುಡಿಯುವುದರಿಂದ ಯಾವ ಪ್ರಯೋಜನವೂ ಆಗೋದಿಲ್ಲಾ. ಅದರ ಬದಲು ನೀವು ಹಣ್ಣನ್ನೇ ತಿನ್ನಬೇಕು. ಇಂದು ನಾವು ಮೋಸಂಬಿ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ಮೋಸಂಬಿ ಹಣ್ಣನ್ನು ಪ್ರತಿದಿನವಲ್ಲದಿದ್ದರೂ, ವಾರಕ್ಕೆ ಮೂರು ಬಾರಿಯಾದ್ರೂ ತಿನ್ನಿ. ಇದರಲ್ಲಿ ವಿಟಾಮಿನ್ ಸಿ ಇರುವುದರಿಂದ ಇದು ನಿಮ್ಮ ತ್ವಚೆಯನ್ನು ಉತ್ತಮಗೊಳಿಸುತ್ತದೆ. ದೇಹದೊಳಗಿನ ರಕ್ತ ಉತ್ತಮವಾಗಿದ್ದರೆ, ಕೂದಲು ಮತ್ತು ತ್ವಚೆ ಎರಡೂ ಉತ್ತಮವಾಗಿರುತ್ತದೆ. ಹಾಗಾಗಿ ವಾರಕ್ಕೆ ಮೂರು ಬಾರಿಯಾದ್ರೂ ನೀವು ಮೋಸಂಬಿ ತಿನ್ನಬೇಕು.
ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..
ನೀವು ವಾರಕ್ಕೆ ಮೂರು ದಿನವಾದ್ರೂ ಮೋಸಂಬಿ ಹಣ್ಣನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಹೊಂದಿರುವ ಮೋಸಂಬಿ ಸೇವನೆಯಿಂದ ನೀವು ಆರೋಗ್ಯವಂತರಾಗಿರುತ್ತೀರಿ.
ಇನ್ನು ಮೋಸಂಬಿ ತಿನ್ನುವುದರಿಂದ ನೆಗಡಿ, ಕೆಮ್ಮು ಯಾವುದು ಬರುವುದಿಲ್ಲ. ಹಾಗಾಗಿಯೇ ಜ್ವರ ಬಂದವರಿಗೆ ಮೋಸಂಬಿ ತಿನ್ನಬೇಕು ಅಂತಾ ಹೇಳೋದು. ಇದರಲ್ಲಿ ಮನುಷ್ಯ ಆರೋಗ್ಯವಾಗಿರಲು ಬೇಕಾಗಿರುವ ಪೋಷಕಾಂಶಗಳು, ಖನಿಜಗಳು ಇದೆ. ಹಾಗಾಗಿ ಮೋಸಂಬಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕರ..
ಇನ್ನು ವಯಸ್ಸಾದವರಿಗೆ ಮೋಸಂಬಿ ಹಣ್ಣನ್ನು ತಿನ್ನಲು ಕೊಡಲಾಗುತ್ತದೆ. ಯಾಕಂದ್ರೆ ಇದರಲ್ಲಿರುವ ಪೋಷಕಾಂಶಗಳು ಸಂಧಿವಾತ ಬರುವುದನ್ನು ತಪ್ಪಿಸುತ್ತದೆ. ಹಾಗಾಗಿ ಇದನ್ನು ನಿಯಮಿತವಾಗಿ ತಿಂದವರಿಗೆ ಕೈ ಕಾಲು ನೋವು ಹೆಚ್ಚಾಗಿ ಬರೋದಿಲ್ಲಾ. ಅಲ್ಲದೇ ಅಜೀರ್ಣ ಸಮಸ್ಯೆ ಇದ್ದವರು, ಮೋಸಂಬಿ ತಿನ್ನಬೇಕು. ಇದರಿಂದ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾದಷ್ಟು ನೀವು ಆರೋಗ್ಯವಾಗಿರುತ್ತೀರಿ.




