ಮೊದಲೆಲ್ಲ ಸ್ಟೀಲಿನ ಪ್ಲೇಟ್ ಇಲ್ಲದಿರುವ ಸಮಯದಲ್ಲಿ ಬಾಳೆಎಲೆಯಲ್ಲೇ ಕೆಲವರು ಊಟ ಮಾಡುತ್ತಿದ್ದರು. ಈಗಲೂ ಹಳ್ಳಿಕಡೆ ಕೆಲ ಜನ ಪ್ರತಿದಿನ ಬಾಳೆ ಎಲೆಯಲ್ಲೇ ಊಟ ಮಾಡುತ್ತಾರೆ. ಹಾಗಾದ್ರೆ ಬಾಳೆ ಎಲೆಯಲ್ಲಿ ಯಾಕೆ ಊಟ ಮಾಡಬೇಕು..? ಇದರಿಂದೇನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ: ಸಚಿವ ಗೋಪಾಲಯ್ಯ ಶಪಥ..
ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಮಗೆ ಸಾತ್ವಿಕತೆ ಉಂಟಾಗುತ್ತದೆ ಎನ್ನುತ್ತದೆ ಆಯುರ್ವೇದ. ಅಲ್ಲದೇ, ಬಾಳೆ ಎಲೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ, ಅದರಲ್ಲಿ ಊಟ ಮಾಡುವುದರಿಂದ, ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಕೆಟ್ಟ ಬ್ಯಾಕ್ಟೀರಿಯಾಗಳು ಸೇರದಂತೆ ನೋಡಿಕೊಳ್ಳುತ್ತದೆ. ನಾವು ಎಂಥದ್ಧೇ ಸೋಪು ಹಾಕಿ ತೊಳೆದರೂ ಪ್ಲೇಟ್‌ಗಳಲ್ಲಿ ಕೊಂಚವಾದ್ರೂ ಕೀಟಾಣುಗಳಿರುತ್ತದೆ. ಆದ್ರೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ, ನಮ್ಮ ದೇಹದಲ್ಲಿ ಕೀಟಾಣುಗಳು ಹೋಗದಂತೆ ತಡೆಗಟ್ಟುತ್ತದೆ.
‘ಸಿದ್ದರಾಮಯ್ಯ ಒಬ್ಬ ನೀಚ ರಾಜಕಾರಣಿ, ನಿಜವಾದ ದಲಿತ ವಿರೋಧಿ’
ಬಾಳೆ ಎಲೆಯಲ್ಲಿ ಬಿಸಿ ಬಿಸಿ ಆಹಾರ ಬಡಿಸಿಕೊಂಡು ತಿಂದರೂ ಕೂಡ, ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದ್ರೆ ನೀವು ಪ್ಲಾಸ್ಟಿಕ್ ತಟ್ಟೆಯಲ್ಲಿ, ಸ್ಟೀಲ್ ಬಟ್ಟಲಲ್ಲಿ ಊಟ ಮಾಡುವುದರಿಂದ ಕೆಮಿಕಲ್ ನಿಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಾಳೆ ಎಲೆಯಲ್ಲಿ ಊಟ ಮಾಡುವುದು ತುಂಬಾ ಉತ್ತಮ.