ಹಲವರು ಬೆಳ್ಳುಳ್ಳಿಯನ್ನ ಒಗ್ಗರಣೆಗೆ, ಚಟ್ನಿಗೆ, ಮಸಾಲೆ ಅರಿಯುವಾಗ ಬಳಸುತ್ತಾರೆ. ಆದ್ರೆ ಬೆಳ್ಳುಳ್ಳಿಯನ್ನ ಹಾಗೆ ತಿನ್ನೋಕ್ಕೆ ತುಂಬಾ ಕಷ್ಟ ಎನ್ನುತ್ತಾರೆ. ಆದ್ರೆ ನೀವು ಪ್ರತಿದಿನ 2 ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದ್ರೆ ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಈ 5 ಮರಗಳು ನಿಮ್ಮ ಮನೆಯ ಬಳಿ ಇರದಂತೆ ನೋಡಿಕೊಳ್ಳಿ..
ಬೆಳಿಗ್ಗೆ ಹಸಿ ಬೆಳ್ಳುಳ್ಳಿ ತಿಂದು ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿ ಉಷ್ಣತೆ ಮತ್ತು ತಂಪು ಸಮ ಪ್ರಮಾಣದಲ್ಲಿರುತ್ತದೆ. ಹೀಗೆ ಆಗುವುದರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪದೇ ಪದೇ ಶೀತ, ಜ್ವರ ಬರುತ್ತಿದ್ದರೆ, ಅದರಿಂದಲೂ ಮುಕ್ತಿ ಸಿಗುತ್ತದೆ. ಹಾಗಂತ ಹೆಚ್ಚಿ ಬೆಳುಳ್ಳಿ ತಿನ್ನಬೇಡಿ. ಒಂದೊ ಎರಡೋ ಎಸಳು ಬೆಳ್ಳುಳ್ಳಿ ತಿನ್ನಿ.
ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..
ಹೆಣ್ಣು ಮಕ್ಕಳಿಗೆ ಮೂಳೆ ಸವೆಯುವ ಸಮಸ್ಯೆ ಇದ್ದಲ್ಲಿ, ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಇದಕ್ಕೆ ಪರಿಹಾರ ಸಿಗುತ್ತದೆ. ಹಸಿ ಬೆಳ್ಳುಳ್ಳಿ ತಿನ್ನಲು ಕಷ್ಟವಾದರೆ, ಒಂದೆರಡು ಹಸಿ ಬೆಳ್ಳುಳ್ಳಿಯನ್ನು ಚಪಾತಿ, ರೊಟ್ಟಿ ಅಥವಾ ದೋಸೆ, ಅನ್ನದೊಂದಿಗೆ ತಿನ್ನಿ. ಇಷ್ಟೇ ಅಲ್ಲದೇ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದಲ್ಲಿ, ಅದನ್ನ ಕೂಡ ತೆಗೆದು ಹಾಕುವ ಶಕ್ತಿ ಬೆಳ್ಳುಳ್ಳಿಯಲ್ಲಿದೆ. ಪ್ರತಿದಿನ ಬೆಳ್ಳುಳ್ಳಿ ತಿನ್ನುವುದರಿಂದ ನಿಮಗೆ ವಾಕರಿಕೆ ಬರಬಹುದು. ಹಾಗಾಗಿ ವಾರದಲ್ಲಿ ಮೂರು ಬಾರಿ ಹಸಿ ಬೆಳ್ಳುಳ್ಳಿ ತಿಂದ್ರೆ ಸಾಕು. ಇನ್ನು ನಿಮಗೆ ಬೆಳ್ಳುಳ್ಳಿ ತಿಂದ್ರೆ, ಅಲರ್ಜಿ ಎಂದಾದರೆ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಸೇವಿಸಿ.