ನೀವು ಒಂದು ಸೇಬು ತಿನ್ನುವ ಬದಲು, ಒಂದು ಪೇರಲೆ ಹಣ್ಣನ್ನ ತಿಂದ್ರೆ ಅಷ್ಟೇ ಪೌಷ್ಟಿಕಾಂಶ ಸಿಗುತ್ತದೆ ಅಂತಾ ಹೇಳಲಾಗತ್ತೆ. ಅಷ್ಟು ಆರೋಗ್ಯಕರವಾಗಿದೆ ಪೇರಲೆ ಹಣ್ಣು. ಬರೀ ಪೇರಲೆಹಣ್ಣಷ್ಟೇ ಅಲ್ಲ, ಇದರ ಎಲೆಯೂ ಕೂಡ ಆರೋಗ್ಯಕಾರಿಯಾಗಿದೆ. ಹಾಗಾದ್ರೆ ಪೇರಲೆ ಎಲೆಯ ಬಳಕೆ ಎಷ್ಟು ಆರೋಗ್ಯಕರವಾಗಿದೆ. ಇದನ್ನ ಬಳಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ ಧ್ಯಾನ ಮಾಡಿದರೆ ಅದ್ಭುತ ಫಲಿತಾಂಶ ಸಿಗುತ್ತದೆ.. ವರ್ಕ್ ಔಟ್ ಗಿಂತ ಸೂಪರ್ ಫಲಿತಾಂಶ..
ಸಕ್ಕರೆ ಖಾಯಿಲೆ ಇದ್ದವರಿಗೆ ಇದು ಅತೀ ಉತ್ತಮ ಔಷಧಿ. ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ಪೇರಲೆ ಎಲೆ ಸಹಾಯ ಮಾಡುತ್ತದೆ. ಶುಗರ್ ಇದ್ದವರು ಪೇರಲೆ ಹಣ್ಣನ್ನು ತಿನ್ನುವುದರ ಜೊತೆಗೆ, ಪೇರಲೆ ಎಲೆಯಿಂದ ಕಶಾಯ ಮಾಡಿ ಸೇವಿಸಿದ್ದಲ್ಲಿ, ಶುಗರ್ ಲೆವಲ್ ಕಂಟ್ರೋಲಿನಲ್ಲಿಡಬಹುದು.
ಬಾಯಿಯಿಂದ ಹೊರಡುಗ ಗಬ್ಬು ವಾಸನೆಯನ್ನ ತಡೆಯಲು ಪೇರಲೆ ಎಲೆ ಸಹಾಯ ಮಾಡುತ್ತದೆ. ಅಲ್ಲದೇ, ಪೇರಲೆ ಎಲೆಯ ಕಶಾಯ ಮಾಡಿ ಸೇವಿಸುವುದರಿಂದ, ನೆಗಡಿ ಕೆಮ್ಮು ಕೂಡ ಶಮನವಾಗುತ್ತದೆ. ಅಲ್ಲದೇ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಸಹಕಾರಿಯಾಗಿದೆ.
ರೆಡ್ ವೈನ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ..? ಪರಿಶೋದನೆಯಲ್ಲಿ ಸಂಚಲನ ವಿಷಯಗಳು..!
ಪೇರಲೆ ಎಲೆಯಲ್ಲಿ ವಿಟಾಮಿನ್, ಪ್ರೋಟಿನ್ ಸೇರಿ ಹಲವು ಪೋಷಕಾಂಶಗಳಿದ್ದು, ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ತೆಗೆದು ಹಾಕಿ, ಉತ್ತಮ ಕೊಲೆಸ್ಟ್ರಾಲನ್ನು ಆರೋಗ್ಯಕರವಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಬೊಜ್ಜು ಬರುವುದನ್ನು ತಡೆಯಬಹುದು. ಇನ್ನು ಹಲ್ಲು ನೋವಿದ್ದವರು ಕೂಡ ಪೇರಲೆ ಎಲೆಯನ್ನ ಬಳಕೆ ಮಾಡಬಹುದು. ಯಾವ ಹಲ್ಲು ನೋವಿರುತ್ತದೆಯೋ, ಆ ಹಲ್ಲಿನಿಂದ ಒಂದೆರಡು ಪೇರಲೆ ಎಲೆಯನ್ನು ಅಗಿದರೆ ಹಲ್ಲು ನೋವು ಬೇಗ ವಾಸಿಯಾಗುತ್ತದೆ.

