Thursday, December 12, 2024

Latest Posts

ನುಗ್ಗೆಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಭರಪೂರ ಲಾಭಗಳು..

- Advertisement -

ಕೆಲವರು ನುಗ್ಗೆಕಾಯಿಯನ್ನ ಹೇಟ್ ಮಾಡಿದ್ರೆ, ಹಲವರು ಇದನ್ನ ಇಷ್ಟಪಟ್ಟು ತಿಂತಾರೆ. ಯಾಕಂದ್ರೆ ಇದನ್ನ ಸಾಂಬಾರ್‌ನಲ್ಲಿ ಬಳಸಿದ್ರೆ, ಅದರ ಟೇಸ್ಟ್ ಇನ್ನೂ ಸಖತ್ ಆಗಿರತ್ತೆ. ಆ ಸಾಂಬಾರ್ ಸ್ಮೆಲ್ ಅಂತೂ ಸೂಪ್ ಆಗಿರತ್ತೆ. ಅದೇ ರೀತಿ ನುಗ್ಗೆಸೊಪ್ಪು ತಿನ್ನಲು ರುಚಿಕರ ಮಾತ್ರವಲ್ಲದೇ, ಆರೋಗ್ಯಕ್ಕೂ ತುಂಬಾ ಉತ್ತಮ. ಹಾಗಾಗಿ ನಾವಿಂದು ನುಗ್ಗೆಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕಾಗುವ  ಆರೋಗ್ಯಕರ ಲಾಭಗಳೇನು ಅಂತಾ ಹೇಳಲಿದ್ದೇವೆ.

ಸೊಪ್ಪು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಪಾಲಕ್, ಮೆಂತ್ಯೆ ಸೊಪ್ಪು, ಹರಿವೆ ಸೊಪ್ಪು, ಬಸಳೆ ಸೊಪ್ಪು, ಪುದೀನಾ, ಸಬ್ಬಸಿಗೆ ಸೊಪ್ಪು, ಹೇಳ್ತಾ ಹೋದ್ರೆ, ಇನ್ನೂ ಹಲವಾರು ರೀತಿಯ ಸೊಪ್ಪುಗಳಿದೆ. ಆದ್ರೆ ಇವೆಲ್ಲದರ ಹಾಗೆ ಆರೋಗ್ಯಕರವೂ, ರುಚಿಕರವೂ ಆಗಿರುವ ನುಗ್ಗೆಕಾಯಿ ಸೊಪ್ಪು ಕೂಡ ಅಷ್ಟೇ ಉತ್ತಮ ಲಕ್ಷಣಗಳನ್ನ ಹೊಂದಿದೆ. ಇದನ್ನ ತಿಂದ್ರೆ ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಲಾಭಗಳಿದೆ.

ವಿಟಾಮಿನ್ ಎ, ಬಿ1, ಬಿ2, ಬಿ3, ಬಿ6,ಕಬ್ಬಿಣಾಂಶ, ಕ್ಯಾಲ್ಶಿಯಂ, ಪೊಟ್ಯಾಶಿಯಂ, ರಂಜಕ ಸೇರಿ ಇನ್ನೂ ಹಲವು ಅಂಶಗಳನ್ನ ನುಗ್ಗೆಸೊಪ್ಪು ಹೊಂದಿದೆ. ಹಾಗಾಗಿ ವಾರದಲ್ಲಿ 2 ದಿನವಾದ್ರೂ ನೀವು ಇದರ ಸೂಪ್, ಪಲ್ಯ, ಸಾರು, ಸಾಂಬಾರ್, ತಂಬುಳಿ ಮಾಡಿ ತಿನ್ನಬೇಕು. ಎಲ್ಲಕ್ಕಿಂತ ಉತ್ತಮ ಆಹಾರ ಅಂದ್ರೆ ಇದರ ತಂಬುಳಿ. ಯಾಕೆ ಇದು ಉತ್ತಮ ಅಂದ್ರೆ ಇಲ್ಲಿ ನುಗ್ಗೆಸೊಪ್ಪಿನ ಜೊತೆ ಮಜ್ಜಿಗೆ ಅಥವಾ ಮೊಸರನ್ನ ತಂಬುಳಿ ಮಾಡುವಾಗ ಬಳಸಲಾಗತ್ತೆ. ಇದರಿಂದ ದೇಹವೂ ತಂಪಾಗಿರತ್ತೆ.

ಇನ್ನು ನುಗ್ಗೆಸೊಪ್ಪನ್ನ ತಿನ್ನುವುದರಿಂದ ಏನು ಪ್ರಯೋಜನ ಅಂದ್ರೆ, ನಿಮ್ಮ ಜೀರ್ಣಕ್ರಿಯೆಯನ್ನ ಇದು ವೃದ್ಧಿಸುತ್ತೆ. ನಿಶ್ಯಕ್ತಿ ಹೋಗಲಾಡಿಸಲು, ಬಿಪಿ, ಶುಗರ್ ಕಂಟ್ರೋಲಿನಲ್ಲಿಡಲು, ಹಿಮೋಗ್ಲೋಬಿನ್ ಹೆಚ್ಚಿಸಲು, ಥೈರಾಯ್ಡ್ ಸಮಸ್ಯೆ ಬರಬಾರದು ಅಂದ್ರೆ, ಅಥವಾ ಇದ್ದರೆ ಅದನ್ನ ಕಂಟ್ರೋಲ್ ಮಾಡಲು, ಪಿಸಿಓಡಿ, ಪಿಸಿಓಎಸ್ ಸಮಸ್ಯೆಯನ್ನ ಕಂಟ್ರೋಲ್ ಮಾಡಲು ಇದು ಸಹಾಯ ಮಾಡತ್ತೆ.

ಅಲ್ಲದೇ, ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದಲ್ಲಿ ಈ ನುಗ್ಗೆಸೊಪ್ಪು ನಿಮಗೆ ಸಹಾಯ ಮಾಡತ್ತೆ. ಇಷ್ಟೇ ಅಲ್ಲದೇ, ನಿಮ್ಮ ಸೌಂದರ್ಯ ವೃದ್ಧಿಸಲು, ತಲೆಗೂದಲ ಆರೋಗ್ಯ ಚೆನ್ನಾಗಿರಿಸಲು ನುಗ್ಗೆಸೊಪ್ಪು ಸಹಾಯ ಮಾಡತ್ತೆ.

ಓಟ್ಸ್ ಈ ರೀತಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು..

ಮೈಗ್ರೇನ್ (ತಲೆನೋವು) ಪದೇ ಪದೇ ಬರುತ್ತಿದ್ದರೆ, ಈ ರೆಮಿಡಿ ಬಳಸಿ..

ಕರ್ಮ ದೊಡ್ಡದೋ..? ಧರ್ಮ ದೊಡ್ಡದೋ..?

- Advertisement -

Latest Posts

Don't Miss