ತಣ್ಣೀರು ಅಥವಾ ಬಿಸಿಯಾದ ನೀರಿಗಿಂತ, ಉಗುರು ಬೆಚ್ಚಗಿನ ನೀರಿನ ಸೇವನೆ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ನೀವು ಎಲ್ಲ ಸಮಯದಲ್ಲೂ ರೂಮ್ ಟೆಂಪರೆಚರ್‌ನಲ್ಲಿರುವ ನೀರು ಕುಡಿದರೂ ನಡೆಯುತ್ತದೆ. ಆದ್ರೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಬೇಕು. ಹಾಗಾದ್ರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಆಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಕೆಲವರು ತಮ್ಮ ದಿನವನ್ನ ಚಹಾ ಅಥವಾ ಕಾಫಿಯೊಂದಿಗೆ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದೇ ಆರೋಗ್ಯಕರವಾಗಿದೆ. ಯಾಕಂದ್ರೆ ಹೀಗೆ ಮಾಡುವುದರಿಂದ ಹೊಟ್ಟೆ ನೋವಿನ ಸಮಸ್ಯೆ, ಅಜೀರ್ಣ ಸಮಸ್ಯೆ, ತ್ವಚೆಯ ಸಮಸ್ಯೆ, ಕೂದಲು ಉದುರುವ ಸಮಸ್ಯೆ, ಈ ಎಲ್ಲ ಸಮಸ್ಯೆಗೂ ರಾಮಬಾಣವಾಗಿದೆ.
ಮಕ್ಕಳಿಗೆ ಈ ಆಹಾರ ನೀಡಿದರೆ.. ಆರೋಗ್ಯವಾಗಿರುತ್ತಾರೆ..!
ಬೆಳಿಗ್ಗೆ ಬೆಚ್ಚಗಿನ ನೀರು ಕುಡಿದರೆ, ಸರಿಯಾಗಿ ಮಲ ವಿಸರ್ಜನೆಯಾಗಿ ಹೊಟ್ಟೆ ಕ್ಲೀನ್ ಆಗುತ್ತದೆ. ಪ್ರತಿದಿನ ಸರಿಯಾದ ಕ್ರಮದಲ್ಲಿ ಮಲ ಮೂತ್ರ ವಿಸರ್ಜನೆಯಾದ್ರೆ, ಹೊಟ್ಟೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ, ತ್ವಚೆಗೆ ಸಂಬಂಧಿಸಿದ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಇದ್ದರೆ ಅದು ಕೂಡ ಸರಿಯಾಗುತ್ತದೆ. ಒಟ್ಟಿನಲ್ಲಿ ಬೆಳಿಗ್ಗೆ ನೀವು ಕುಡಿಯುವ ಬೆಚ್ಚಗಿನ ನೀರು ನಿಮ್ಮ ಆರೋಗ್ಯ ಸಮಸ್ಯೆ ಮತ್ತು ಸೌಂದರ್ಯ ಸಮಸ್ಯೆ ಎರಡಕ್ಕೂ ಪರಿಹಾರ ನೀಡುತ್ತದೆ.
ಇನ್ನು ಸೈನಸ್ ಸಮಸ್ಯೆ ಇದ್ದವರಿಗೂ ಕೂಡ ಬೆಳಿಗ್ಗೆ ಬೆಚ್ಚಗಿನ ನೀರು ಕುಡಿಯುವುದು ಬಹು ಉಪಯೋಗಕಾರಿಯಾಗಿದೆ. ಸೈನಸ್ ಅಂದ್ರೆ ತಲೆ ನೋವಿನ ಸಮಸ್ಯೆ. ತಲೆಯನ್ನ ಅಲ್ಲಾಡಿಸಿದಾಗ, ತಲೆ ನೋವು ಶುರುವಾಗುತ್ತದೆ. ಇಂಥ ಸಮಸ್ಯೆಗೂ ಬೆಳಿಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯುವುದೇ ರಾಮಬಾಣ.
ಕ್ಯಾರೆಟ್ ಅನ್ನು ಹಸಿಯಾಗಿ ತಿಂದರೆ ಏನಾಗುತ್ತದೆ ಗೊತ್ತಾ? ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಕೆಟ್ಟದೋ..!
ಇನ್ನು ನೀವು ಸೇವಿಸಿದ ಕೆಲ ಆಹಾರಗಳಲ್ಲಿ ವಿಷಕಾರಿ ಅಂಶವಿದ್ದಲ್ಲಿ, ತೆಗೆದು ಹಾಕಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿದರೆ, ನಿಮಗೆ ಫುಡ್‌ಪಾಯ್ಸನ್ ಆದಾಗ ಅದರ ಪರಿಣಾಮ ಹೆಚ್ಚಾಗಿ ಇರುವುದಿಲ್ಲ. ಯಾಕಂದ್ರೆ ನಿಮ್ಮ ದೇಹ ಸೇರಿರುವ ಬೆಚ್ಚಗಿನ ನೀರು, ನಿಮ್ಮ ಪಾಚನ ಶಕ್ತಿಯನ್ನ ಉತ್ತಮ ಗೊಳಿಸಿರುತ್ತದೆ.