ಸಕ್ಕರೆ ತಿನ್ನಲು ಇಷ್ಟವಿಲ್ಲದವರು, ಅಥವಾ ಸಕ್ಕರೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲಾ ಅಂತಾ ನಂಬಿರುವವರು ಬೆಲ್ಲ ತಿನ್ನಲು ಇಚ್ಛಿಸುತ್ತಾರೆ. ಹಾಗಾಗಿ ನಾವು ಯಾವ ರೀತಿ ಬೆಲ್ಲವನ್ನು ಉಪಯೋಗಿಸಿ ಲಾಭ ಪಡೆಯಬೇಕು ಅಂತಾ ಹೇಳಲಿದ್ದೇವೆ.
ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?
ಹಿರಿಯರಲ್ಲಿ ಕೆಲವರು ಊಟದ ಬಳಿಕ ಬೆಲ್ಲ ತಿನ್ನುತ್ತಾರೆ. ಅಥವಾ ಹಸಿವಾದಾಗ ಬೆಲ್ಲ ತಿಂದು ನೀರು ಕುಡಿಯುತ್ತಾರೆ. ಇದೇ ಕಾರಣಕ್ಕೆ ಯಾರಾದರೂ ನೀರು ಕೇಳಿದ್ರೆ, ನೀರು ಕೊಟ್ಟು ಒಂದು ತುಂಡು ಬೆಲ್ಲ ಕೊಡೋದು ಇಂದಿಗೂ ಚಾಲ್ತಿಯಲ್ಲಿದೆ. ಯಾಕಂದ್ರೆ ಇದು ಬರೀ ಹೊಟ್ಟೆ ತುಂಬಿಸುವುದಲ್ಲದೇ, ಶಕ್ತಿಯೂ ನೀಡುತ್ತದೆ. ಜೊತೆಗೆ ಸೌಂದರ್ಯವರ್ಧಕವೂ ಹೌದು. ಬೆಲ್ಲವನ್ನು ಸರಿಯಾದ ರೀತಿಯಲ್ಲಿ ಬಳಸಿದ್ರೆ ಇದು ನಿಮ್ಮ ತ್ವಚೆಯ ಮತ್ತು ಕೂದಲಿನ ಆರೋಗ್ಯವನ್ನ ಅಭಿವೃದ್ಧಿಪಡಿಸುತ್ತದೆ.
ಒಂದು ಚಮಚ ಟೊಮೆಟೋ ರಸ ಮತ್ತು ಒಂದು ಚಮಚ ನಿಂಬೆ ರಸದೊಂದಿಗೆ, ಚಿಟಿಕೆ ಅರಿಶಿನ ಮತ್ತು ಕೊಂಚ ಬೆಲ್ಲವನ್ನು ಸೇರಿಸಿ, ನಿಮ್ಮ ಮುಖಕ್ಕೆ ಹಚ್ಚಿ. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖದ ಮೇಲಿನ ಮೊಡವೆ ಕಲೆ ಮಾಯವಾಗುತ್ತದೆ. ವಾರಕ್ಕೊಮ್ಮೆ ಇದನ್ನ ಬಳಸಿದ್ರೆ ಸಾಕು.
ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..
ನೀವು ಪ್ರತಿದಿನ ಒಂದು ಚಿಕ್ಕ ತುಂಡು ಬೆಲ್ಲವನ್ನ ತಿನ್ನುವುದರಿಂದ ನಿಮ್ಮ ಮುಖ ಯಂಗ್ ಆಗಿ ಕಾಣುತ್ತದೆ. ನಿಮ್ಮ ಮುಖದ ಮೇಲೆ ನೆರಿಗೆಗಳು ಬೀಳುವುದಿಲ್ಲ. ಮತ್ತು ನಿಮಹೆ ಹೆಚ್ಚು ಮೊಡವೆಯಾಗಲ್ಲ. ನೀವು ಸಿಹಿ ತಿನ್ನಬೇಕು ಅನ್ನಿಸಿದಾಗ, ಒಂದು ಚಿಕ್ಕ ತುಂಡು ಬೆಲ್ಲವನ್ನು ತಿಂದರೂ ಸಾಕು. ಇದರಿಂದ ನಿಮ್ಮ ಕೂದಲ ಆರೋಗ್ಯವೂ ಹೆಚ್ಚುತ್ತದೆ.
ಮುಖ್ಯವಾದ ವಿಷಯ ಅಂದ್ರೆ ನೀವು ಪ್ರತಿದಿನ ಕೊಂಚ ಬೆಲ್ಲ ತಿಂದಲ್ಲಿ, ನಿಮ್ಮ ಜೀರ್ಣಶಕ್ತಿ ಉತ್ತಮವಾಗಿರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾದರೆ, ಮಲಬದ್ಧತೆ ಸಮಸ್ಯೆ ಇರುವುದಿಲ್ಲ. ಮಲ ಮೂತ್ರ ವಿಸರ್ಜನೆ ಸರಿಯಾಗಿ ಇದ್ದರೆ, ಅದರಿಂದ ಕೂದಲ ಆರೋಗ್ಯ ಮತ್ತು ತ್ವಚೆಯ ಆರೋಗ್ಯ ಉತ್ತಮವಾಗಿರುತ್ತದೆ.

