ಚಳಿಗಾಲ ಕಳೆದು ಬೇಸಿಗೆ ಶುರುವಾಗಲು ಇನ್ನೊಂದೇ ತಿಂಗಳು ಬಾಕಿ ಇದೆ. ಬೇಸಿಗೆ ಶುರುವಾದಾಗ ನಾವು ಆಹಾರ ಪದ್ಧತಿ ಕಡೆ ಗಮನ ಕೊಡಬೇಕು. ಹಣ್ಣು, ತರಕಾರಿ, ಎಳನೀರು, ಹಣ್ಣಿನ ಜ್ಯೂಸ್ ಇತ್ಯಾದಿ ಸೇವನೆ ಮಾಡಿ, ಉಷ್ಣತೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಅದರಲ್ಲೂ ಬೇಸಿಗೆಯಲ್ಲಿ ವಾರಕ್ಕೊಮ್ಮೆಯಾದ್ರೂ ನೀವು ಕರ್ಬೂಜಾ ಹಣ್ಣಿನ ಸೇವನೆ ಮಾಡೋದು ತುಂಬಾ ಒಳ್ಳೆಯದು. ಹಾಗಾದ್ರೆ ಕರ್ಬೂಜಾ ಹಣ್ಣಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ವಿಟಾಮಿನ್ ಫೈಬರ್ ಖನಿಜಾಂಶಗಳಿಂದ ತುಂಬಿದ ಕರ್ಬೂಜ ಸೇವನೆಯಿಂದ ಆರೋಗ್ಯ ಮತ್ತು ಸೌಂದರ್ಯ ಎರಡೂ ವೃದ್ಧಿಯಾಗುತ್ತದೆ. ನೀವು ಸಕ್ಕರೆ ಬಳಸದೇ, ಇದರ ಜ್ಯೂಸ್ ಮಾಡಿ ಕುಡಿದರೆ, ಇದು ಆರೋಗ್ಯಕರ ಲಾಭವನ್ನು ನೀಡುತ್ತದೆ. ಇದಕ್ಕೆ ನೀವು ಬೆಲ್ಲ ಅಥವಾ ಜೇನುತುಪ್ಪ, ಕಲ್ಲುಸಕ್ಕರೆಯನ್ನ ಬಳಸಬಹುದು.
ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಜ್ವರ ಬಂದರೆ ಮಗುವಿಗೆ ಫ್ಲೋ ಬರುತ್ತದೆಯೇ..?
ಕರ್ಬೂಜದಲ್ಲಿ ವಿಟಾಮಿನ್ ಎ, ವಿಟಾಮಿನ್ ಬಿ ಮತ್ತು ವಿಟಾಮಿನ್ ಸಿ ಇದ್ದು ಐರನ್, ಮ್ಯಾಗ್ನಿಶಿಯಂ, ಪೋಟ್ಯಾಶಿಯಂ, ಕೊಪರ್, ಅಂಶವಿರುತ್ತದೆ. ಹಾಗಾಗಿ ಕರ್ಬೂಜ ಸೇವನೆ ಮಾಡುವುದರಿಂದ ತೂಕ ಇಳಿಕೆಯಾಗುತ್ತದೆ. ತೂಕ ಇಳಿಸಲು ಇಚ್ಛಿಸುವವರು ಕರ್ಬೂಜ ಹಣ್ಣನ್ನ ಎರಡು ದಿನಕ್ಕೊಮ್ಮೆಯಾದ್ರೂ ಸೇವಿಸಬಹುದು.
ಕರ್ಬೂಜ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸಬಹುದು. ಯಾಕಂದ್ರೆ ಇದರಲ್ಲಿ ನೀರಿನಂಶ ಹೆಚ್ಚಾಗಿರುವ ಕಾರಣಕ್ಕೆ, ಕರ್ಬೂಜವನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ಮತ್ತು ಮೂತ್ರ ವಿಸರ್ಜನೆ ಸರಿಯಾಗಿ ಆದಾಗ, ಕಿಡ್ನಿಯಲ್ಲಿ ಕಲ್ಲಾಗುವುದಿಲ್ಲ. ಇನ್ನು ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸಲು ಕೂಡ ಕರ್ಬೂಜ ಸಹಕಾರಿಯಾಗಿದೆ. ಕರ್ಬೂಜ ತಿನ್ನುವುದರಿಂದ ಮುಖದಲ್ಲಿ ಮೊಡವೆಯಾಗುವುದಿಲ್ಲ. ಮತ್ತು ನೆರಿಗೆಗಳು ಬೇಗ ಬರುವುದಿಲ್ಲ. ಹಾಗಾಗಿ ಕರ್ಬೂಜವನ್ನು ಸೌಂದರ್ಯ ವೃದ್ಧಿಗಾಗಿ ಸೇವಿಸಬಹುದು.
ನಿಮ್ಮ ಆಹಾರದಲ್ಲಿ ಈ ಮಸಾಲೆ ಪದರ್ಥಗಳನ್ನು ಸೇರಿಸಿ.. ಜೀರ್ಣಕಾರಿ ಸಮಸ್ಯೆಗಳನ್ನು ಪರಿಶೀಲಿಸಿ..!
ನಿಮ್ಮ ಕೂದಲು ಮತ್ತು ಉಗುರು ಗಟ್ಟಿಯಾಗಿರಬೇಕು. ಚೆಂದವಾಗಿ ಕಾಣಬೇಕು ಅಂದ್ರೆ ನೀವು ಕರ್ಬೂಜ ಸೇವನೆ ಮಾಡಬೇಕು. ಹೃದಯದ ಸಮಸ್ಯೆ ಇದ್ದವರು ಕೂಡ ಕರ್ಬೂಜ ಸೇವನೆಯನ್ನ ಅಗತ್ಯವಾಗಿ ಮಾಡಬೇಕು. ಇದರ ಸೇವನೆಯಿಂದ ಹೃದಯ ರೋಗ ಬರುವುದನ್ನು ತಡೆಗಟ್ಟಬಹುದು.
ಇನ್ನು ಮುಖ್ಯವಾದ ವಿಚಾರ ಅಂದ್ರೆ, ಕರ್ಬೂಜವನ್ನು ಮಿತವಾಗಿ ಸೇವಿಸಿದ್ರೆ ಇದು ಔಷಧಿಯಂತೆ ಕೆಲಸ ಮಾಡುತ್ತದೆ. ಅದೇ ಇದರ ಸೇವನೆ ಅತಿಯಾದ್ರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ವಾರದಲ್ಲಿ ಮೂರು ಬಾರಿ ಒಂದು ಗ್ಲಾಸ್ ಕರ್ಬೂಜದ ಜ್ಯೂಸ್ ಕುಡಿದ್ರೆ ಸಾಕು. ಕರ್ಬೂಜ ಸೇವನೆಯಿಂದ ನಿಮಗೆ ಅಲರ್ಜಿಯಾಗುತ್ತದೆ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.