Friday, September 20, 2024

Latest Posts

ಕಾಳುಮೆಣಸನ್ನ ಅಡುಗೆಯಲ್ಲಿ ಸೇರಿಸಬೇಕು ಅಂತಾ ಹೇಳೋದು ಇದಕ್ಕೆ ನೋಡಿ..

- Advertisement -

ನಾವು ಪ್ರತಿದಿನ ಅಡುಗೆ ಮಾಡುವಾಗ, ಎಣ್ಣೆ, ಉಪ್ಪು, ಹುಳಿ, ಖಾರವನ್ನ ಹೇಗೆ ಬಳಸುತ್ತೇವೋ, ಅದೇ ರೀತಿ ಕಾಳು ಮೆಣಸನ್ನು ಅಥವಾ ಕಾಳು ಮೆಣಸಿನ ಪುಡಿಯನ್ನು ಬಳಸಬೇಕು. ಯಾಕೆ ನಾವು ಪ್ರತಿದಿನ ಕಾಳು ಮೆಣಸನ್ನ ಆಹಾರದಲ್ಲಿ ಸೇರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ಹರಿವೆ ಸೊಪ್ಪನ್ನು ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ..

ವಾರದಲ್ಲಿ ಮೂರು ದಿನವಾದ್ರೂ ಹಾಲಿಗೆ ಅರಿಶಿನ, ಚಕ್ಕೆ, ಲವಂಗ, ಕಲ್ಲುಸಕ್ಕರೆ, ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಕುಡಿಯಿರಿ. ಇದರ ಜೊತೆಗೆ ನಾಲ್ಕು ಕಾಳುಮೆಣಸು ಕೂಡ ಸೇರಿಸಿ ಕುಡಿಯಿರಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ನೀವು ಅಡಿಗೆ ಮಾಡುವಾಗ ಖಾರದ ಪುಡಿ, ಹಸಿ ಮೆಣಸಿನಕಾಯಿ ಬಳಸುವಲ್ಲಿ ಕೊಂಚ ಕಾಳು ಮೆಣಸು ಬಳಸಿ. ಯಾಕಂದ್ರೆ ಇದನ್ನು ಬಳಸುವುದರಿಂದ ಖಾರವೂ ಇರುತ್ತದೆ. ಆರೋಗ್ಯಕ್ಕೂ ಇದು ಉತ್ತಮ. ಹಾಗಂತ ತುಂಬಾ ಕಾಳುಮೆಣಸು ಬಳಸಿದ್ರೆ, ದೇಹದಲ್ಲಿ ಉಷ್ಣ ಹೆಚ್ಚಾಗಿ, ನಿಮ್ಮ ಆರೋಗ್ಯ ಹಾಳಾಗೋದು ಗ್ಯಾರಂಟಿ. ಹಾಗಾಗಿ 5ರಿಂದ 6 ಕಾಳು ಕಾಳುಮೆಣಸು ಬಳಸಿದ್ರೆ ಸಾಕು.

ಪೈಲ್ಸ್ ಬರಬಾರದೆಂದರೆ ನಾವು ಎಂಥ ಆಹಾರವನ್ನು ಸೇವಿಸಬೇಕು ಗೊತ್ತಾ..?

ಪ್ರತಿದಿನ ಅಡುಗೆಯಲ್ಲಿ, ಅಥವಾ ಕಶಾಯದಲ್ಲಿ ನೀವು ಕೊಂಚ ಕೊಂಚವೇ ಕಾಳು ಮೆಣಸು ಬಳಸುವುದರಿಂದ ನಿಮ್ಮ ದೇಹದ ತೂಕ ಇಳಿಯುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ. ದಣಿವು, ಆಯಾಸ ದೂರವಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ. ನಿಮ್ಮ ತ್ವಚೆ ಕೂಡ ಚೆನ್ನಾಗಿರುತ್ತದೆ. ಆದ್ರೆ ಮೊದಲೇ ಹೇಳಿದ ಹಾಗೆ, ಇದನ್ನ ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ. ಮಮತ್ತು ನಿಮಗೆ ಕಾಳು ಮೆಣಸು ತಿಂದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.

- Advertisement -

Latest Posts

Don't Miss