ದಾಳಿಂಬೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಎನ್ನುವ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ದಾಳಿಂಬೆ ಸಿಪ್ಪೆ ಬಳಸಿಯೂ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು. ಹಾಗಾದ್ರೆ ದಾಳಿಂಬೆ ಸಿಪ್ಪೆಯನ್ನ ಹೇಗೆ ಬಳಸಬೇಕು..? ಅದರಿಂದೇನು ಉಪಯೋಗ ಅಂತಾ ತಿಳಿಯೋಣ ಬನ್ನಿ..
ದಾಳಿಂಬೆ ಸಿಪ್ಪೆಯನ್ನು ನಾಲ್ಕು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತರ ಇದರ ಪುಡಿ ತಯಾರಿಸಿಕೊಳ್ಳಿ. ಇದನ್ನ ಒಂದು ಡಬ್ಬದಲ್ಲಿ ಹಾಕಿಡಿ. ಈ ಪುಡಿಯಿಂದಲೇ ನೀವು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು.ಆದರೆ ನೀವು ಇದನ್ನು ನಿಮ್ಮ ಮುಖಕ್ಕೆ ಹಚ್ಚುವ ಮೊದಲು, ಕೈಗೆ ಹಚ್ಚಿ, ಅಲರ್ಜಿಯಾಗದಿದ್ದಲ್ಲಿ ಮಾತ್ರ ಮುಖಕ್ಕೆ ಹಚ್ಚಿಕೊಳ್ಳಿ.
ಒಂದು ಸ್ಪೂನ್ ದಾಳಿಂಬೆ ಸಿಪ್ಪೆಯ ಪುಡಿ ಮತ್ತು ಒಂದು ಸ್ಪೂನ್ ರೋಸ್ ವಾಟರ್ ಸೇರಿಸಿ, ಪೇಸ್ಟ್ ತಯಾರಿಸಿ, ಇದರಿಂದ ಫೇಸ್‌ಪ್ಯಾಕ್ ಹಾಕಿ. ಅದು ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದಲ್ಲದೇ ನೀವು ಮೊಸರು, ಕಡಲೆಹಿಟ್ಟು, ದಾಳಿಂಬೆ ಸಿಪ್ಪೆಯ ಪುಡಿ ಬೆರೆಸಿ, ಫೇಸ್‌ಪ್ಯಾಕ್ ತಯಾರಿಸಿ, ಮುಖಕ್ಕೆ ಅಪ್ಲೈ ಮಾಡಿ. ನಂತರ ಅದು ಒಣಗಿದ ಬಳಿಕ, ತಣ್ಣೀರಿನಿಂದ ಮುಖ ತೊಳೆಯಿರಿ. ಇವೆರಡರಲ್ಲಿ ಒಂದು ಫೇಸ್‌ಪ್ಯಾಕ್, ವಾರಕ್ಕೆರಡು ಬಾರಿ ಹಾಕಿದರೂ ಸಾಕು. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 2
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 1