Saturday, July 20, 2024

Latest Posts

ರಾಗಿ ಅಂದ್ರೆ ಬರೀ ಧಾನ್ಯವಲ್ಲ.. ಇದೊಂದು ಶಕ್ತಿಯುತ ಆಹಾರ..

- Advertisement -

ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹಿರಿಯರು ಹೇಳಿದ್ದಾರೆ. ಯಾಕಂದ್ರೆ ರಾಗಿ ತಿಂದವರು ಗಟ್ಟಿಮುಟ್ಟಾಗಿರ್ತಾರೆ. ಹಾಗಾಗಿ ಅವರಿಗೆ ಅಷ್ಟು ಬೇಗ ರೋಗ ರುಜಿನಗಳು ಬರುವುದಿಲ್ಲ. ಮಂಡ್ಯ ಕಡೆಯ ಜನ ಹೆಚ್ಚು ರಾಗಿ ತಿನ್ನುತ್ತಾರೆ. ಹಾಗಾಗಿ ಅಲ್ಲಿನ ಹಿರಿಯರು ಈಗಲೂ ಗಟ್ಟಿಮುಟ್ಟಾಗಿ ಜೀವನ ನಡೆಸುತ್ತಿರುವುದನ್ನ ನಾವು ನೋಡಬಹುದು. ಹಾಗಾದ್ರೆ ರಾಗಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಉತ್ತಮ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..

ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ ಏನು ಮಾಡಬೇಕು..?

ರಾಗಿಯಲ್ಲಿ ಕ್ಯಾಲ್ಶಿಯಂ ಮತ್ತು ಐರನ್ ಅಂಶ ಹೆಚ್ಚಾಗಿರುತ್ತದೆ. ಮಕ್ಕಳು, ಹಿರಿಯರು ಮತ್ತು ಮಹಿಳೆಯರ ಆರೋಗ್ಯ ವೃದ್ಧಿಸಲು ಇದು ಸಹಕಾರಿಯಾಗಿದೆ. ಅನೇಮಿಯಾ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಮತ್ತು ಮೂಳೆಯನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ಇದನ್ನು ಮಕ್ಕಳಿಗೆ ಖಂಡಿತವಾಗಿ ನೀಡಿ. ವೃದ್ಧರು ಮತ್ತು ಮಹಿಳೆಯರು ರಾಗಿ ಸೇವನೆ ಮಾಡಿದ್ರೆ, ತುಂಬಾ ಉತ್ತಮ.

ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದ್ರೆ, ನೀವು ಹೃದಯ ರೋಗವನ್ನು ಹೊಂದಿದರೆ, ರಾಗಿ ಸೇವನೆ ಖಂಡಿತವಾಗಿ ಮಾಡಿ. ಇದರಲ್ಲಿ ಹೈ ಪ್ರೋಟೀನ್ ಇದ್ದು, ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ದೇಹದಿಂದ ತೆಗೆದು ಹಾಕಿ, ಒಳ್ಳೆಯ ಕೊಲೆಸ್ಟ್ರಾಲನ್ನು ದೇಹದಲ್ಲಿ ಹೆಚ್ಚುವಂತೆ ಮಾಡತ್ತೆ. ಅಲ್ಲದೇ ಹೃದಯ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ 7 ಕುದುರೆ ವರ್ಣಚಿತ್ರಗಳನ್ನು ಇಡುವ ಪ್ರಯೋಜನಗಳು..!

ಹಾಲು ಕುಡಿಸುವ ತಾಯಂದಿರು ರಾಗಿ ಸೇವನೆ ಮಾಡಬೇಕು. ಇದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು. ರಾಗಿ ತಿನ್ನುವುದರಿಂದ ಶಕ್ತಿ ಬರುತ್ತದೆ. ಹಾಲು ಕುಡಿಸುವ ತಾಯಂದಿರು ರಾಗಿ ತಿಂದ್ರೆ, ತಾಯಿ ಮಗು ಇಬ್ಬರಿಗೂ ಆ ಶಕ್ತಿ ಸಿಗುತ್ತದೆ. ಹಾಗಾಗಿ ರಾಗಿ ಸೇವನೆ ಖಂಡಿತ ಮಾಡಬೇಕು. ಚಿಕ್ಕ ಮಕ್ಕಳಿಗೂ ರಾಗಿ ದೋಸೆ, ರಾಗಿ ಮುದ್ದೆ, ರಾಗಿ ಇಡ್ಲಿಯನ್ನ ಮಾಡಿಕೊಡಿ. ಯಾಕಂದ್ರೆ ಅವರು ರಾಗಿ ತಿಂದಷ್ಟು ಗಟ್ಟಿಮುಟ್ಟಾಗಿ ಬೆಳೆಯುತ್ತಾರೆ.

- Advertisement -

Latest Posts

Don't Miss