Tuesday, November 18, 2025

Latest Posts

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

ಉಪ್ಪು ಇಲ್ಲದ ಊಟಕ್ಕೆ, ಎಂಥ ಮಸಾಲೆ ಪದಾರ್ಥ ಹಾಕಿದರೂ ಕೂಡ ಅದು ರುಚಿಸುವುದಿಲ್ಲ. ಹಾಗಾಗಿ ಅಡುಗೆ ಮಾಡುವ ಉಪ್ಪಿಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಈ ರೀತಿ ಅಡುಗೆಗೆ ರುಚಿ ನೀಡುವ ಉಪ್ಪು, ನಮ್ಮ ಆರೋಗ್ಯವನ್ನ ಕೂಡ ಸುಧಾರಿಸಬಲ್ಲದು. ನಮ್ಮ ಆರೋಗ್ಯಕ್ಕೆ ಲಾಭ ತಂದುಕೊಡಬಲ್ಲದು. ಹಾಗಾಗಿ ನಾವಿಂದು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಎಷ್ಟು ಲಾಭ ಉಂಟು ಗೊತ್ತಾ..?

ನೆಗಡಿ, ಕೆಮ್ಮು ಶುರುವಾದಾಗ ಗಂಟಲಲ್ಲಿ ಕಿರಿಕಿರಿಯಾಗುತ್ತದೆ. ಗಂಟಲು ನೋವಾಗುತ್ತದೆ. ಈ ವೇಳೆ ಉಗುರು ಬೆಚ್ಚಗಿನ ನೀರಿನಲ್ಲಿ ಕೊಂಚ ಉಪ್ಪು ಹಾಕಿ, ಅದರಿಂದ ಬಾಯಿ ಮುಕ್ಕಳಿಸಿ. ಆ ನೀರು ನಿಮ್ಮ ಗಂಟಲಿಗೆ ತಾಕುವಂತೆ ಗಳ ಗಳ ಮಾಡಬೇಕು. ಹೀಗೆ ಮಾಡಿದ್ದಲ್ಲಿ, ಗಂಟಲು ನೋವು, ಗಂಟಲಿನ ಕಿರಿಕಿರಿ ಇದ್ದಲ್ಲಿ ಎಲ್ಲ ಸಮಸ್ಯೆಯೂ ಪರಿಹಾರವಾಗುತ್ತದೆ.

ನಿಮಗೆ ಹಲ್ಲು ನೋವಿದ್ದರೆ, ಉಪ್ಪು ನೀರಿನಿಂದ ನೀವು ಬಾಯಿ ಮುಕ್ಕಳಿಸಿದ್ದೇ ಆದಲ್ಲಿ, ಹಲ್ಲು ನೋವು ಶಮನವಾಗುತ್ತದೆ. ನಿಮಗೆ ಹಲ್ಲು ನೋವು ಇಲ್ಲದಿದ್ದರೂ ಕೂಡ, ವಾರಕ್ಕೊಮ್ಮೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದ್ದಲ್ಲಿ, ನಿಮ್ಮ ಹಲ್ಲು ಗಟ್ಟಿಯಾಗಿ, ಆರೋಗ್ಯಕರವಾಗಿರುತ್ತದೆ.

ಇಸಬಗೋಲನ್ನು ಹೇಗೆ ಸೇವಿಸಬೇಕು..? ಇದನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು..?

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಸೈನಸ್ ಸಮಸ್ಯೆಯೂ ದೂರವಾಗುತ್ತದೆ. ಬಾಯಿಯಲ್ಲಿ ಗುಳ್ಳೆಯಾಗಿದ್ದಲ್ಲಿ, ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇನ್ನು ಮೂಗು, ಕಿವಿ ಮತ್ತು ಬಾಯಿ ಈ ಮೂರಕ್ಕೂ ಕನೆಕ್ಷನ್ ಇದ್ದು, ನಿಮಗೆ ಮೂಗು ಕಟ್ಟಿದಂತಾಗಿದ್ದರೆ, ಅಥವಾ ಮೂಗಿನ ಸಮಸ್ಯೆ ಇದ್ದರೆ, ನೀವು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಮೂಗಿನ ಸಮಸ್ಯೆ ದೂರವಾಗುತ್ತದೆ.

- Advertisement -

Latest Posts

Don't Miss