Health Tips: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ, ಹೃದಯ, ಲಿವರ್, ಕಿಡ್ನಿ ಇವಿಷ್ಟು ಆರೋಗ್ಯವಾಗಿರಬೇಕು. ಆಗ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಅದರಲ್ಲೂ ಕಿಡ್ನಿಯ ಆರೋಗ್‌ಯ ಬಹುಮುಖ್ಯವಾಗಿದೆ. ಆದ್ರೆ ನಮಗೆ ಎರಡು ಕಿಡ್ನಿಗಳು ಬೇಕೇ ಬೇಕಾ..? ಒಂದು ಕಿಡ್ನಿ ಇದ್ರೆ ಮನುಷ್ಯ ಆರೋಗ್ಯವಾಗಿ ಇರೋಕ್ಕೆ ಆಗಲ್ವಾ..? ಈ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.
ವಾದ್ಯರು ಹೇಳುವ ಪ್ರಕಾರ, ಮನುಷ್ಯನಿಗೆ ಬದುಕಲು ಒಂದು ಕಿಡ್ನಿ ಸಾಕು. ಆದರೆ ಆತ ಆರೋಗ್ಯವಾಗಿ ಬದುಕಬೇಕು ಅಂದ್ರೆ ಎರಡು ಕಿಡ್ನಿ ಬೇಕು. ಕೆಲವರು ಒಂದು ಕಿಡ್ನಿಯನ್ನು ದಾನ ಮಾಡಿರುತ್ತಾರೆ. ಅಂಥವರು ಬದುಕುತ್ತಾರೆ. ಆದರೆ ಅವರು ಪೂರ್ತಿ ಆರೋಗ್ಯವಂತರಾಗಿರುವುದಿಲ್ಲ.
ಇನ್ನು ಕೆಲವರಿಗೆ ಕಿಡ್ನಿ ಫೇಲ್ ಆಗಿರುತ್ತದೆ. ಅದು ಯಾಕಾಗತ್ತೆ ಅಂದ್ರೆ, ಬಿಪಿ ಮಾತ್ರೆ ತೆಗೆದುಕೊಂಡಾಗ, ಅದರ ದುಷ್ಪರಿಣಾಮದಿಂದ ಕಿಡ್ನಿ ಫೇಲ್ ಆಗುತ್ತದೆ. ಹಾಗಾಗಿಯೇ ಬಿಪಿ ಇದ್ದವರು, ತಿಂಗಳಿಗೊಮ್ಮೆ ವೈದ್ಯರ ಬಳಿ ಹೋಗಿ, ಚೆಕ್ ಮಾಡಿಸಿಕೊಂಡು, ಮಾತ್ರೆಯನ್ನು ಬದಲಾಯಿಸುವ ಬಗ್ಗೆ ಕೇಳಬೇಕು ಅಂತಾ ಹೇಳೋದು. ಒಂದೇ ಮಾತ್ರೆ ತೆಗೆದುಕೊಳ್ಳುವುದರಿಂದಲೂ, ಆರೋಗ್ಯದಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆ ಕಂಡು ಬರುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.