Health Tips: ಮೊದಲೆಲ್ಲ ಮದುವೆಯಾದ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಅಂದ್ರೆ ಒಂದು ಮಗುವಿನ ಕಿಲ ಕಿಲ ನಗುವಿನ ಸಪ್ಪಳ ಆ ಮನೆ ತುಂಬಿರುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಯುವ ಪೀಳಿಗೆ ಫ್ಯಾಮಿಲಿ ಪ್ಲಾನಿಂಗ್ ಅನ್ನೋ ನೆಪದಲ್ಲಿ ಮದುವೆಯಾಗಿ ಮೂರ್ನಾಲ್ಕು ವರ್ಷವಾದ್ರೂ ಮಗುವಿನ ಬಗ್ಗೆ ಯೋಚಿಸುವುದೇ ಇಲ್ಲ. ಇದೇ ತಪ್ಪಿನಿಂದ ಅದೆಷ್ಟೋ ಜನ ತಾಯ್ತನ ಭಾಗ್ಯವನ್ನೇ ಕಳೆದುಕೊಂಡಿದ್ದಾರೆ. ಸಂತಾನ ಸಮಸ್ಯೆಯ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದೆ.
ಮೊದಲು ಫ್ಯಾಮಿಲಿ ಪ್ಲಾನಿಂಗ್ ಅನ್ನೋ ನೆಪದಲ್ಲಿ ಮಗು ಮಾಡಿಕೊಳ್ಳದೇ, ಜೀವನ ಎಂಜಾಯ್ ಮಾಡಬೇಕು ಎನ್ನುವ ದಂಪತಿಗಳು, ಮುಂದೆ ಅದೇ ಮಗುವಿಗಾಗಿ, ಹಾತೊರೆಯುತ್ತಾರೆ. ಆರೋಗ್ಯವಾಗಿದ್ದಾಗ ಮಾಡಿದ ತಪ್ಪಿಗೆ, ಲಕ್ಷ ಲಕ್ಷ ಬೇಕಾದ್ರೂ ಖರ್ಚು ಮಾಡೋಕ್ಕೆ ರೆಡಿ ಇದಿವಿ ಅಂತಾರೆ. ಕೆಲವರಿಗ ಒಂದು ಮಗು ಆದ್ರೆ ಸಾಕು ಅನ್ನೋ ತೃಪ್ತಿ ಆದ್ರೆ, ಇನ್ನು ಕೆಲವರು ಒಂದಾದ್ರೂ ಮಗು ಆದ್ರೆ ಸಾಕು ಅನ್ನೋ ತವಕ.
ನಮ್ಮ ದೇಶದಲ್ಲಿ ಬರೋಬ್ಬರಿ 2 ಕೋಟಿ, 75 ಲಕ್ಷ ಜನರು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇನ್ನೊಂದು ಶಾಕಿಂಗ್ ನ್ಯೂಸ್ ಅಂದ್ರೆ, ಪತಿಗೆ ಮಕ್ಕಳು ಬೇಗ ಆಗಬೇಕು ಅನ್ನೋ ಆಸೆ ಇದ್ರೆ, ಪತ್ನಿಗೆ ಇಷ್ಟು ಬೇಗ ಬೇಡ ಅನ್ನೋ ಹಠ. ಇನ್ನು ಪತ್ನಿಗೆ ಮಗು ಬೇಕು, ಆದ್ರೆ ಪತಿಗೆ ಖರ್ಚು ನಿಭಾಯಿಸಲು ಕಷ್ಟ. ಅದಕ್ಕೆ ಇಷ್ಟು ಬೇಗ ಮಗು ಬೇಡ ಅನ್ನೋ ಮಾತು. ಇದೇ ಸಮಸ್ಯೆಯಿಂದ ಭಾರತದಲ್ಲಿ ಹಲವು ದಂಪತಿ ಡಿವೋರ್ಸ್ ಪಡೆದಿದ್ದಾರೆ, ಪಡೆಯುತ್ತಿದ್ದಾರೆ ಅನ್ನೋದು ವಿಪರ್ಯಾಸದ ಸಂಗತಿ.
ಇನ್ನು ಸಂತಾನ ಸಮಸ್ಯೆಗೆ ಹಲವು ಕಾರಣಗಳಿದೆ. ಅತಿಯಾದ ಧೂಮಪಾನ, ಮದ್ಯಪಾನ, ದೇಹದ ತೂಕ ಹೆಚ್ಚಾಗುವುದು, ಅನಾರೋಗ್ಯಕರ ಜೀವನ ಶೈಲಿ, ಇವುಗಳೆಲ್ಲ ಸಂತಾನ ಸಮಸ್ಯೆ ಉದ್ಭವಿಸಲು ಕಾರಣವಾಗುತ್ತದೆ. ಇನ್ನು ಇಂದಿನ ಕಾಲದಲ್ಲಿ ಸಿಗುವ ಕೆಲ ಕೆಮಿಕಲ್ ಯುಕ್ತ ಪ್ರಾಡಕ್ಟ್‌ಗಳು, ತಿನಿಸುಗಳ ಸೇವನೆ ಕೂಡ ಬಂಜೆತನಕ್ಕೆ ಕಾರಣವಾಗುತ್ತದೆ.
ಈ ಎಲ್ಲ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಅಂದ್ರೆ ಐವಿಎಫ್ ಸೆಂಟರ್‌ಗಳು. ನೀವು ಎಷ್ಟೋ ವೈದ್ಯರ ಬಳಿ ಹೋದರೂ, ಏನೇ ಹರಕೆ ಹೊತ್ತರೂ, ಮದ್ದು ಮಾಡಿದರೂ ನಿಮಗೆ ಮಕ್ಕಳಾಗಲಿಲ್ಲವೆಂದಲ್ಲಿ, ನೀವು ಐವಿಎಫ್ ಸೆಂಟರ್ ಮೂಲಕ, ಮಗು ಪಡೆಯುವ ಪ್ರಯತ್ನ ಮಾಡಬಹುದು. ಆದರೆ ವೈದ್ಯರು ಹೇಳುವ ಎಲ್ಲಾ ನಿಯಮಗಳನ್ನು ನೀವು ಪಾಲಿಸಲೇಬೇಕು. ಆಗ ಮಾತ್ರ ನೀವು ಆರೋಗ್ಯಕರವಾದ ಮಗುವನ್ನು ಪಡೆಯಲು ಸಾಧ್ಯ. ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ.