Health Tips: ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ, ಕಾಫಿ ಕುಡಿಯಲೇಬೇಕು ಎಂದಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಹಲವು ರೋಗಗಳಿಗೆ ಆ ಅಭ್ಯಾಸ ನಾಂದಿಯಾಗುತ್ತದೆ. ಹಾಾಗಾಗಿ ಬೆಳಿಗ್ಗೆ ಟೀ, ಕಾಫಿ ಬದಲಿಗೆ ನೀವು ಬೇರೆ ಪೇಯವನ್ನು ಕುಡಿಯಬಹುದು. ಅದು ಯಾವ ಪೇಯ, ಅದನ್ನು ಹೇಗೆ ತಯಾರಿಸುವುದು ಅಂತಾ ತಿಳಿಯೋಣ ಬನ್ನಿ..
ಪುದೀನಾ ಟೀ: ಇದನ್ನು ತಯಾರಿಸಲು ಕೊಂಚ ಪುದೀನಾ, ತುಳಸಿ, ಏಲಕ್ಕಿ, ಚಕ್ಕೆ, ಶುಂಠಿ, ಬೆಲ್ಲ ಇವಿಷ್ಟು ಬೇಕು. ಇವೆಲವನ್ನೂ ಕುಟ್ಟಣಿಗೆಯಲ್ಲಿ ಹಾಕಿ, ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿ. ಹೀಗೆ ಕುಟ್ಟಿದಾಗಲೇ, ಅದರಲ್ಲಿರುವ ಪೌಷ್ಠಿಕಾಂಶ ಹೆಚ್ಚು ವೇಸ್ಟ್ ಆಗುವುದಿಲ್ಲ. ನೀವೇನಾದರೂ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿದರೆ, ಪೌಷ್ಠಿಕಾಂಶ ಹೆಚ್ಚು ಹಾಳಾಗುತ್ತದೆ.
ಆದರೆ ಕುಟ್ಟಣಿಗೆಯಲ್ಲಿ ನೀವು ಇದೆಲ್ಲವನ್ನೂ ಕುಟ್ಟಿ, ತುಂಬ ಹೊತ್ತು ಹಾಗೇ ಇರಿಸುವಂತಿಲ್ಲ. ಬೇಗ ಬೇಗ ಇದನ್ನು ಉಪಯೋಗಿಸಬೇಕು. ನೀರು ಕುದಿಸಿದ ಬಳಿಕ, ಇವೆಲ್ಲವನ್ನೂ ಕುಟ್ಟಿ ಪುಡಿ ಮಾಡಿ, ನೀರಿಗೆ ಹಾಕಿ ಇನ್ನೂ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ಇದನ್ನು ಸವಿಯಿರಿ. ಇದು ಚಹಾಕ್ಕಿಂತಲೂ ಆರೋಗ್ಯಕ್ಕೆ ಉತ್ತಮ.
ತುಳಸಿ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಶುಂಠಿ ಜೀರ್ಣಕ್ರಿಯೆ ಪ್ರಕ್ರಿಯೆ ಉತ್ತಮವಾಗಿ ಇರಿಸುತ್ತದೆ. ಏಲಕ್ಕಿ ದೇಹದಲ್ಲಿ ಊತ ಕಡಿಮೆ ಮಾಡಲು ಸಹಕಾರಿಯಾಗಿದೆ. ಚಕ್ಕೆ ಬಿಪಿ ಕಂಟ್ರೋಲಿನಲ್ಲಿ ಇರಿಸುತ್ತದೆ. ಬೆಲ್ಲ ಐರನ್ ಲೆವಲ್ ಹೆಚ್ಚು ಮಾಡುತ್ತದೆ. ಹಾಗಾಗಿ ಹಾಲು ಮಿಕ್ಸ್ ಮಾಡಿದ ಟೀ ಸವಿದು, ಅದರ ಚಟ ಹತ್ತಿಸಿಕೊಳ್ಳುವ ಬದಲು, ಇಂಥ ಆರೋಗ್ಯಕರ ಟೀ ಕುಡಿದು, ಇದನ್ನೇ ಅಭ್ಯಾಸ ಮಾಡಿಕೊಳ್ಳಬಹುದು.