Health Tips: ಪುಟ್ಟ ಶಿಶುಗಳಿಗೆ ತಾಯಿಯ ಹಾಲು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಇಂದಿನ ಕಾಲದಲ್ಲಿ ಎಷ್ಟೋ ತಾಯಂದಿರು, ತಮ್ಮ ಫಿಗರ್ ಹಾಳಾಗತ್ತೆ ಅಂತಾ ಯೋಚಿಸದೇ, ಮಕ್ಕಳಿಗೆ ಎದೆ ಹಾಲು ಕೊಡಲು ಮುಂದಾಗುತ್ತಾರೆ. ಎದೆ ಹಾಲನ್ನು ಮಕ್ಕಳಿಗೆ 6 ತಿಂಗಳಿನಿಂದ 1 ವರ್ಷವಾಗುವವರೆಗೂ ನೀಡಬೇಕು. ಅದಕ್ಕೂ ಮುನ್ನ ಬಿಡಿಸಿದರೆ, ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅದರಲ್ಲೂ ಮಕ್ಕಳಿಗೆ 6 ತಿಂಗಳು ತುಂಬುವವರೆಗೂ ಬರೀ ಎದೆ ಹಾಲು ಮಾತ್ರ ಕುಡಿಸೇಕು. ಬಳಿಕ ಎದೆ ಹಾಲಿನೊಂದಿಗೆ, ಬೇರೆ ಬೇರೆ ಆಹಾರಗಳನ್ನು ನೀಡಬೇಕು.
ಹಣ್ಣಿನ ರಸ, ಬೇಯಿಸಿದ ತರಕಾರಿ, ಬೇಳೆ, ರಾಗಿ ಮಣ್ಣಿ ಹೀಗೆ ದೇಹಕ್ಕೆ ಶಕ್ತಿ ನೀಡುವ ಪದಾರ್ಥ ಮಾಡಿಕೊಡಬೇಕು. ಆದರೆ ನೀವು ಮಗುವಿಗೆ 6 ತಿಂಗಳು ತುಂಬುವ ಮುನ್ನವೇ ಎದೆ ಹಾಲು ಬಿಟ್ಟು ಬೇರೆಯ ಆಹಾರ ಕೊಡಬಾರದು ಅಂತಾ ವೈದ್ಯರು ಹೇಳುತ್ತಾರೆ. ಅದರಲ್ಲೂ ಸಮಯ ತುಂಂಬುವ ಮುನ್ನವೇ ಹೆರಿಗೆಯಾಗಿ ಹುಟ್ಟಿದ ಮಕ್ಕಳಿಗೆ ಅಂದ್ರೆ ಪ್ರಿಟರ್ಮ್ ಮಕ್ಕಳಿಗಂತೂ ಎದೆ ಹಾಲು ಉಣಿಸುವ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಹಾಗಾದ್ರೆ ಯಾಕೆ ಹಾಗೆ ಹೇಳಲಾಗುತ್ತದೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
ನವಜಾತ ಶಿಶು ಮತ್ತು ಮಕ್ಕಳ ತಜ್ಞೆಯಾಗಿರುವ ಡಾ.ಪ್ರಿಯ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದಾರೆ. ಪ್ರಿಟರ್ಮ್ ಅಂದರೆ ಸಮಯಕ್ಕೂ ಮುನ್ನ ಹುಟ್ಟುವ ಮಗುವಿಗೆ ಹಾಲು ಕುಡಿಸುವಾಗ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ವೈದ್ಯರು ಮೊದಲೇ ನಿಮಗೆ ಈ ಬಗ್ಗೆ ಎಚ್ಚರಿಕೆ ವಹಿಸಿದ್ದರೆ, ಆರೋಗ್ಯಕರ ಆಹಾರ ಸೇವನೆ, ವೈದ್ಯರು ಸೂಚಿಸುವ ಮಾತ್ರೆ ಎಲ್ಲವನ್ನೂ ತೆಗೆದುಕೊಳ್ಳಬೇಕು. ಇದರಿಂದ ಮಗು ಶಕ್ತಿಯುತವಾಗುತ್ತದೆ. ಅಲ್ಲದೇ ನಿಮ್ಮ ದೇಹಕ್ಕೂ ಶಕ್ತಿ ಸಿಗುತ್ತದೆ.
ಪ್ರಿಟರ್ಮ್ ಮಕ್ಕಳಿಗೆ ಏಕೆ ಅಷ್ಟೊಂದು ಎಚ್ಚರಿಕೆ ವಹಿಸಬೇಕು ಅಂದ್ರೆ, ಅವರ ದೇಹದ ಅಂಗಗಳು ಎಲ್ಲ ಮಕ್ಕಳಂತೆ ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ. ಹಾಗಾಗಿ ಮಕ್ಕಳಿಗೆ ಆದಷ್ಟು ಎದೆ ಹಾಲು ಕೊಟ್ಟು ಅದರ ಆರೋಗ್ಯ ಅಭಿವೃದ್ಧಿಯಾಗಲು ಸಹಕರಿಸಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.