Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳುವುದು ತುಂಬಾ ಮುಖ್ಯ. ಪುಟ್ಟ ಮಗು ಹುಟ್ಟಿತೆಂದರೆ, ಅದನ್ನು ನೋಡಲು ಸಂಬಂಧಿಕರು ಮನೆಗೆ ಬರುತ್ತಾರೆ. ಹಾಗೆ ಬಂದಾಗ, ಮಗುವಿಗೆ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳನ್ನು ರೋಗ ರುಜಿನಗಳಿಂದ ದೂರವಿಡಲು, ಮಗುವಿಗೆ 3 ತಿಂಗಳು ತುಂಬುವ ತನಕ ಯಾರನ್ನೂ ಭೇಟಿಯಾಗಲು ಬಿಡದಿರುವುದು ಉತ್ತಮ ಅಂತಾರೆ ವೈದ್ಯರು.
ಹೊಕ್ಕಳು ಬಳ್ಳಿ ಬಿದ್ದ ಬಳಿಕ, ಮಕ್ಕಳಿಗೆ ಟಮ್ಮಿ ಟೈಮ್ ಕೊಡಬೇಕು. ಟಮ್ಮಿ ಟೈಮ್ ಎಂದರೆ, ಮಕ್ಕಳನ್ನು ಹೊಟ್ಟೆಯ ಭಾಗವಾಗಿ ಮಲಗಲು ಬಿಡುವುದು. ಒಂದರೆಡು ನಿಮಿಷ ಮಲಗಿದರೂ ಸಾಕು. ಮತ್ತೆ ಬೆನ್ನು ಭಾಗವಾಗಿ ಮಲಗಿಸಬೇಕು. ಅಲ್ಲದೇ ಮಕ್ಕಳನ್ನು ನಾಜೂಕಾಗಿ ಹ್ಯಾಂಡಲ್ ಮಾಡಬೇಕು. ಮಕ್ಕಳನ್ನು ಹೆಚ್ಚು ಅಲ್ಲಾಡಿಸುವುದೆಲ್ಲ ಮಾಡಬಾರದು. 3 ತಿಂಗಳು ತುಂಬು ಮುನ್ನ ಮಗುವಿನ ದೇಹ ನಾಜೂಕಾಗಿರುತ್ತದೆ. ಹಾಗಿದ್ದಾಗ, ಮಕ್ಕಳನ್ನು ಹೆಚ್ಚು ಶೇಕ್ ಮಾಡಬಾರದು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.