Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ ಊಟ ಮಾಡೋದಿಲ್ಲ ಅನ್ನೋ ಕಾರಣ ಮಾತ್ರ ಅವರು ತಿಳಿದಿರುವುದಿಲ್ಲ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ.
ಪ್ರತೀ ಮಕ್ಕಳು ಊಟದ ಸಮಯದಲ್ಲಿ ಅರ್ಧಂಬರ್ಧ ತಿನ್ನುವುದು, ಸರಿಯಾಗಿ ಆಹಾರ ಸೇವಿಸದಿರುವುದು ಸಾಮಾನ್ಯ. ಆದರೆ ಪೋಷಕರು ಕೆಲವರು ಉಪಾಯ ಮಾಡಿ, ಮಕ್ಕಳಿಗೆ ಊಟ ಮಾಡಿಸಬೇಕು. ಮಕ್ಕಳು ಏನು ಊಟ ಮಾಡಬೇಕು..? ಅನ್ನೋದನ್ನು ನಿರ್ಧರಿಸಿ, ಪೋಷಕರು ಮಕ್ಕಳಿಗೆ ಉಣಬಡಿಸಬೇಕು. ಎಷ್ಟು ಊಟ ಮಾಡಬೇಕು ಅನ್ನೋದು ಮಾತ್ರ ಮಕ್ಕಳು ಡಿಸೈಡ್ ಮಾಡಬೇಕು.
ಏಕೆಂದರೆ, ನಾವು ಒತ್‌ತಾಯಪೂರ್ವಕವಾಗಿ ಏನನ್ನಾದರೂ ತಿನ್ನಿಸಿದರೆ, ಅದರಿಂದ ಮಗುವಿನ ಜೀವ ಹೋಗುವ ಸಂಭವವಿರುತ್ತದೆ. ಹಾಗಾಗಿ ತಿನ್ನು ತಿನ್ನು ಎಂದು ಹಿಂಸೆ ಮಾಡಿ ಮಗುವಿಗೆ ಎಂದಿಗೂ ಆಹಾರ ತಿನ್ನಿಸಬೇಡಿ. ಮಕ್ಕಳು ಖುಷಿ ಖುಷಿಯಾಗಿ, ಶಾಂತಿಯಿಂದ ಆಹಾರ ಸೇವಿಸಿದಾಗ, ಅದು ಅವರಿಗೆ ಆರೋಗ್ಯ ತಂದು ಕ“ಡುತ್ತದೆ ಹ“ರತು, ನೀವು ತಿನ್ನು ಎಂದು ಹಿಂಸಿಸಿ ತಿನ್ನಿಸಿದಾಗ ಅಲ್ಲ ಅಂತಾರೆ ವೈದ್ಯರು.
ಅಲ್ಲದೇ ಇಂದಿನ ಕಾಲದ ಹಲವು ಪೋಷಕರು ಮಕ್ಕಳಿಗೆ Mobile, TV ತೋರಿಸಿ ಊಟ ಮಾಡಿಸುತ್ತಾರೆ. ಇದು ಅಕ್ಷರಶಹ ತಪ್ಪು. ಮಕ್ಕಳಿಗೆ ಯಾವುದೇ ಕಾರಣಕ್ಕೂ ಹೀಗೆ ಆಹಾರ ತಿನ್ನಿಸಬೇಡಿ. ಮಗು ಶಾಂತವಾಗಿ ಕುಳಿತು ಊಟ ಮಾಡಿದಾಗಲೇ, ಆ ಆಹಾರ ದೇಹಕ್ಕೆ ತಾಕುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.