Recipe: ನಮಗೆ ಏನಾದರೂ ಸಿಹಿ ತಿನ್ನಬೇಕು ಅನ್ನಿಸಿದಾಗ, ನಾವು ಸಕ್ಕರೆ ಬಳಸಿ ಮಾಡಿದ ತಿಂಡಿಯನ್ನು ತಿನ್ನುತ್ತೇವೆ. ಆದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಅಲ್ಲದೇ, ಮಕ್ಕಳಿಗೂ ಸಕ್ಕರೆಯ ತಿಂಡಿ ಕೊಡುವುದು ಉತ್ತಮವಲ್ಲ. ಹಾಗಾಗಿ ನಾವಿಂದು ಸಿಹಿಯಾದ, ರುಚಿಯಾದ, ಆರೋಗ್ಯಕರವಾದ ಪ್ರೋಟೀನ್ ಬೈಟ್ಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಪ್ರತಿದಿನ ಒಂದು ಬೈಟ್ಸ್ ಸೇವಿಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ.
ಶೇಂಗಾವನ್ನು ಮೊದಲು ಹುರಿದುಕೊಳ್ಳಿ, ಬಳಿಕ ಎಳ್ಳು, ಫ್ಲ್ಯಾಕ್ಸ್‌ಸೀಡ್ಸ್ (ಅಗಸಿಬೀಜ) ಹುರಿದುಕೊಳ್ಳಿ. ಈಗ ಅದೇ ಪ್ಯಾನ್‌ಗೆ ತುಪ್ಪ ಹಾಕಿ, ಬಾದಾಮಿ, ಗೋಡಂಬಿ, ಪಿಸ್ತಾ, ಅಖರೂಟ್ ಇವನ್ನೆಲ್ಲ ಹುರಿದುಕೊಳ್ಳಿ. ಬಳಿಕ ಡ್ರೈಫ್ರೂಟ್ಸ್ ಬಿಟ್ಟು ಉಳಿದೆಲ್ಲ ಸಾಮಗ್ರಿಯನ್ನು ಪುಡಿ ಮಾಡಿಕೊಳ್ಳಿ. ಈಗ ಮತ್ತೆ ಅದೇ ಪ್ಯಾನ್‌ನಲ್ಲಿ ಚೀಯಾ ಸೀಡ್ಸ್, ಕುಂಬಳಕಾಯಿ ಬೀಜ, ಕಲ್ಲಂಗಡಿ ಬೀಜವನ್ನು ಹುರಿದುಕೊಳ್ಳಿ.
ಈಗ ಬೀಜ ತೆಗೆದ ಹಸಿ ಖರ್ಜೂರವನ್ನು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಪುಡಿ ಮಾಡಿದ ಮಿಶ್ರಣಕ್ಕೆ ಸೇರಿಸಿ. ಇದರೊಂದಿಗೆ ಏಲಕ್ಕಿ ಪುಡಿ, ಹುರಿದಿಟ್ಟುಕೊಂಡ ಡ್ರೈಫ್ರೂಟ್ಸ್, ಕಲ್ಲಂಗಡಿ ಬೀಜ, ಚೀನಾ ಸೀಡ್ಸ್, ಕುಂಬಳಕಾಯಿ ಬೀಜವನ್ನು ಸೇರಿಸಿ. ಲಾಡು ತಯಾರಿಸಿದರೆ, ಪ್ರೋಟೀನ್ ಬೈಟ್ಸ್ ರೆಡಿ. ಪ್ರತಿದಿನ ಒಂದೇ ಒಂದು ಲಾಡುವನ್ನು ಸೇವಿಸಿದರೆ, ನಿಮ್ಮ ಆರೋಗ್ಯ ಸೌಂದರ್ಯ ಎರಡೂ ಹೆಚ್ಚುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಲಾಡುವನ್ನು ಸೇವಿಸುವುದು ಒಳ್ಳೆಯದಲ್ಲ.
ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..
ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..




