Recipe: ರಾಗಿ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಗಿಂತ ಹೆಚ್ಚು ಕನ್ನಡಿಗರಿಗೇ ಗೊತ್ತಿರುತ್ತದೆ. ಏಕೆಂದರೆ ಇಲ್ಲಿ ರಾಗಿ ರೊಟ್ಟಿ ಮತ್ತು ರಾಗಿ ಮುದ್ದೆ ಫೇಮಸ್ ಆಗಿದೆ. ಸಕ್ಕರೆ ಖಾಯಿಲೆ, ಬಿಪಿ ಸೇರಿ ಅನೇಕ ಖಾಯಿಲೆಗಳನ್ನು ದೂರವಿಟ್ಟು, ನಮ್ಮನ್ನು ಗಟ್ಟಿಮುಟ್ಟಾಗಿರಿಸುವಲ್ಲಿ, ರಾಗಿ ಸಹಕಾರಿಯಾಗಿದೆ. ಹಾಗಾಗಿ ಇಂದು ನಾವು ರಾಗಿ ದೋಸೆ ರೆಸಿಪಿ ಹೇಳಲಿದ್ದೇವೆ. ಇದನ್ನು ನೀವು ನಿಮ್ಮ ಮಕ್ಕಳಿಗೆ ಟಿಫನ್‌ಗೂ ಹಾಕಿಕೊಡಬಹುದು.
ಒಂದು ಕಪ್ ರಾಗಿ, ಅರ್ಧ ಕಪ್ ರವಾ, ಅರ್ಧ ಕಪ್ ಅಕ್ಕಿಹಿಟ್ಟು, ಇವಿಷ್ಟಕ್ಕೆ ನೀರು ಮತ್ತು ಅವಶ್ಯಕತೆ ಇದ್ದಷ್ಟು ಉಪ್ಪು ಸೇರಿಸಿ, ದೋಸೆ ಹಿಟ್ಟು ರೆಡಿ ಮಾಡಿಕೊಳ್ಳಿ. ಮತ್ತು ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿ, ಜೀರಿಗೆ ಹಾಕಿ ಮಿಕ್ಸ್ ಮಾಡಿ. ಇದರಿಂದ ದೋಸೆ ರೆಡಿ ಮಾಡಿ. ತುಪ್ಪ ಅಥವಾ ಮೊಸರಿನೊಂದಿಗೆ ಈ ದೋಸೆ ರುಚಿಯಾಗಿರುತ್ತದೆ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..
ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..
ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..

