Friday, September 20, 2024

Latest Posts

ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..

- Advertisement -

Recipe: ಪಾಲಕ್ ಬಳಸಿ ಹಲವು ರೆಸಿಪಿಗಳನ್ನ ನೀವು ತಯಾರಿಸಿರಬಹುದು. ಆದರೆ ನಾವಿಂದು ಆರೋಗ್ಯಕರವೂ, ರುಚಿಕರವೂ ಆದ ಪಾಲಕ್ ಕಿಚಡಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ತುಪ್ಪ, ಚಿಟಿಕೆ ಸಾಸಿವೆ, ಜೀರಿಗೆ, ಎರಡರಿಂದ ಮೂರು ಹಸಿಮೆಣಸು ಅಥವಾ ಒಣಮೆಣಸು, ಕರಿಬೇವು, ಉದ್ದಿನಬೇಳೆ, ಎರರಡು ಈರುಳ್ಳಿ, ಕಾಲು ಕಪ್ ಪಾಲಕ್ ಸೊಪ್ಪಿನ ಪ್ಯೂರಿ, ಒಂದು ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದು ಸ್ಪೂನ್ ಗರಂಮಸಾಲೆ, ಧನಿಯಾಪುಡಿ, ಜೀರಿಗೆ ಪುಡಿ, ಚಿಟಿಕೆ ಅರಿಶಿನ ಮತ್ತು ಕಾರದಪುಡಿ, ಒಂದು ಟೊಮೆಟೋ, ಒಂದು ಕಪ್‌ ಅಕ್ಕಿ, ಅರ್ಧ ಕಪ್ ಬೇಳೆ,

ಮಾಡುವ ವಿಧಾನ: ಗ್ಯಾಸ್‌ ಆನ್ ಮಾಡಿ ಕುಕ್ಕರ್ ಇಟ್ಟು, ಒಂದು ಸ್ಪೂನ್ ತುಪ್ಪ ಹಾಕಿ. ಇದಕ್ಕೆ ಸಾಸಿವೆ, ಜೀರಿಗೆ, ಹಸಿಮೆಣಸು ಅಥವಾ ಒಣಮೆಣಸು, ಕರಿಬೇವು, ಉದ್ದಿನಬೇಳೆ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಪಾಲಕ್ ಸೊಪ್ಪಿನ ಪ್ಯೂರಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇದಕ್ಕೆ ಧನಿಯಾಪುಡಿ, ಗರಂಮಸಾಲೆ, ಜೀರಿಗೆ ಪುಡಿ, ಖಾರದ ಪುಡಿ, ಅರಿಶಿನ, ಟೊಮೆಟೋ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ ಅಕ್ಕಿ ಮತ್ತು ಬೇಳೆ ಸೇರಿಸಿ. ಅಗತ್ಯವಿದ್ದಷ್ಟು ನೀರು ಉಪ್ಪು ಸೇರಿಸಿ. ಅಗತ್ಯವಿದ್ದಲ್ಲಿ ಚಿಟಿಕೆ ಸಕ್ಕರೆ ಸೇರಿಸಿ. ಈಗ ಕುಕ್ಕರ್‌ ಮುಚ್ಚಳ ಮುಚ್ಚಿ, ಚೆನ್ನಾಗಿ ಬೇಯಿಸಿ. ಅಕ್ಕಿ,ಬೇಳೆ ಚೆನ್ನಾಗಿ ಬೆಂದಾಗಲೇ ಅದು ಖಿಚಡಿಯಾಗೋದು. ಈಗ ಪಾಲಕ್ ಖಿಚಡಿ ರೆಡಿ.

ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..

ಡ್ರೈಫ್ರೂಟ್ಸ್ ಚಿಕ್ಕಿ ರೆಸಿಪಿ..

ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?

- Advertisement -

Latest Posts

Don't Miss