Thursday, September 19, 2024

Latest Posts

ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? 40 ವರ್ಷದೊಳಗೆ ಮುಟ್ಟು ನಿಲ್ಲತ್ತಾ..?

- Advertisement -

Health Tips: ಓರ್ವ ಹೆಣ್ಣಿನ ಆರೋಗ್ಯ ಉತ್ತಮವಾಗಿದ್ದರೆ, ಆಕೆ ಸರಿಯಾದ ಸಮಯಕ್ಕೆ ಮುಟ್ಟಾಗುತ್ತಾಳೆ. ಮತ್ತು ಸರಿಯಾದ ಸಮಯಕ್ಕೆ ಆಕೆಯ ಮುಟ್ಟು ನಿಲ್ಲುತ್ತದೆ. ಹಾಗಾದ್ರೆ 40 ವರ್ಷದೊಳಗೆ ಮುಟ್ಟು ನಿಲ್ಲುತ್ತಾ..? ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? ಈ ಎಲ್ಲ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ..

ಓರ್ವ ಹೆಣ್ಣಿಗೆ 40 ವರ್ಷ ದಾಟಿದ ಬಳಿಕವೇ ಮುಟ್ಟು ನಿಲ್ಲಬೇಕು. 40 ವರ್ಷದೊಳಗೆ ಮುಟ್ಟು ನಿಂತರೆ, ಅದು ಆರೋಗ್ಯಕರ ಸೂಚನೆಯಲ್ಲ. 42 ವರ್ಷದಿಂದ 53 ವರ್ಷದೊಳಗೆ ಮುಟ್ಟು ನಿಂತರೆ, ಅದು ಆರೋಗ್ಯಕರ ಸೂಚನೆಯಾಗಿರುತ್ತದೆ.

ಹಾಗಾದ್ರೆ ಯಾಕೆ 40 ವರ್ಷದೊಳಗೆ ಮುಟ್ಟು ನಿಂತರೆ ಒಳ್ಳೆಯದಲ್‌ಲ ಎಂದರೆ, ಪ್ರತೀ ತಿಂಗಳು ತಪ್ಪದೇ ಮುಟ್ಟಾದಲ್ಲಿ, ದೇಹದಲ್ಲಿ ಉತ್ತಮವಾದ ಹಾರ್ಮೋನ್ ಉಂಟಾಗುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಬೇಗ ಮುಟ್ಟು ನಿಂತರೆ, ಅದರಿಂದ ಬಿಪಿ, ಶುಗರ್, ಹಾರ್ಟ್ ಪ್ರಾಬ್ಲಮ್‌ನಂಥ ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ಇಂಥ ತೊಂದರೆ ಇರದೇ, ಆರೋಗ್ಯವಾಗಿರಬೇಕು ಅಂದ್ರೆ, 40 ವಯಸ್ಸಾದ ಬಳಿಕವೇ, ಮುಟ್ಟು ನಿಲ್ಲಬೇಕು.

ಇನ್ನು 52ನೇಯ ವಯಸ್ಸಿನ ಬಳಿಕ ಮುಟ್ಟು ಸಂಪೂರ್ಣವಾಗಿ ನಿಂತು ಹೋಗಬೇಕು. 53 ವರ್ಷವಾದರೂ ಮುಟ್ಟಾಗುತ್ತಿದೆ ಎಂದರೆ, ಅದರಿಂದ ಬ್ರೀಸ್ಟ್ ಕ್ಯಾನ್ಸರ್ ಸೇರಿ, ಬೇರೆ ವಿಧದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಮುಟ್ಟು ನಿಲ್ಲುತ್ತದೆ ಎಂದರೆ, ಅದರ ಸೂಚನೆ ಈ ರೀತಿ ಇರುತ್ತದೆ. ಪ್ರತೀ ತಿಂಗಳು ಆಗುತ್ತಿದ್ದ ಮುಟ್ಟು, ಎರಡು ಮೂರು ತಿಂಗಳಿಗೊಮ್ಮೆ ಆಗುತ್ತದೆ.

ಮೂರು ತಿಂಗಳಿಗೊಮ್ಮೆ ಮುಟ್ಟಾದಾಗ, ಬ್ಲೀಡಿಂಗ್ ನಾರ್ಮಲ್ ಆಗಿದ್ದರೆ ಅದು ಮುಟ್ಟು ನಿಲ್ಲುವ ಸಮಯ. ಆದರೆ ಮೂರು ತಿಂಗಳು ಮುಟ್ಟಾಗದೇ, ಮೂರನೇ ತಿಂಗಳಿಗೆ ಸಿಕ್ಕಾಪಟ್ಟೆ ಬ್ಲೀಡಿಂಗ್ ಆದರೆ, ಅಂಥವರು ಖಂಡಿತ ವೈದ್ಯರ ಬಳಿ ಹೋಗಿ, ಪರೀಕ್ಷಿಸಿಕೊಳ್ಳಬೇಕು. ಇನ್ನೊಂದು ಸೂಚನೆ ಅಂದ್ರೆ ದೇಹದ ತೂಕ ಹೆಚ್ಚುತ್ತದೆ. ಚಳಿಗಾಲವಿದ್ದರೂ, ನಿಮ್ಮ ದೇಹ ಮಾತ್ರ ಬೆವರಲು ಶುರುವಾಗುತ್ತದೆ. ಇವೆಲ್ಲ ಮುಟ್ಟು ನಿಲ್ಲುವ ಸೂಚನೆಗಳು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss