Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್

Bollywood News: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ವೆಬ್ ಸಿರೀಸ್‌ ಸಖತ್ ಸೌಂಡ್ ಮಾಡುತ್ತಿದೆ. ಸಂಜಯ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ, ಅದು ಕೋಟಿ ಕೋಟಿ ಬಾಚಿಕೊಂಡೇ ಹೋಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇರೋ ವಿಷಯ. ಹಾಗಾಗಿಯೇ ಸಂಜಯ್ ಸಿನಿಮಾದಲ್ಲಿ ನಂಗೊಂದು ಚಾನ್ಸ್ ಸಿಗಬಹುದಾ ಅಂತಾ ಕಾದು ಕುಳಿತಿರುತ್ತಾರೆ.

ಅದೇ ರೀತಿ ಈ ಬಾರಿ ಸಂಜಯ್ ಮನೆಯಲ್ಲಿ ಕೂತೂಕೊಂಡೇ ಪ್ರೇಕ್ಷಕರು ಸಿನಿಮಾ ನೋಡಲಿ ಅಂತಾ, ವೆಬ್ ಸಿರೀಸ್ ರಿಲೀಸ್ ಮಾಡಿದ್ದಾರೆ, ಹೀರಾಮಂಡಿಯಲ್ಲಿ ಹಲವು ನಟಿಯರಿದ್ದು, ಇವರೆಲ್ಲ ವೇಶ್ಯೆಯ ಪಾತ್ರದಲ್ಲಿ ಮಿಂಚಿದ್ದಾರೆ. ಹಿಂದಿಯಲ್ಲಿ ಹೀರಾಮಂಡಿ ಎಂದರೆನೇ ವೇಶ್ಯೆಯರು ಇರುವ ಸ್ಥಳ ಎಂದರ್ಥ. ಆದರೆ ವೇಶ್ಯೆಯರಿಗೂ ಪ್ರೇಮಾಂಕುರವಾಗುತ್ತದೆ. ಅವರಿಗೂ ಮನಸ್ಸಿದೆ ಅಂತಾ ಹೀರಾಮಂಡಿಯಲ್ಲಿ ತೋರಿಸಲಾಗಿದೆ.

ಆದರೆ ಈ ಸಿನಿಮಾದಲ್ಲಿ ಆಲಂಜೇಬ್ ಎಂಬ ಪಾತ್ರ ನಿರ್ವಹಿಸಿರುವ ಶರ್ಮಿನ್ ಸೇಗಲ್ ಬಗ್ಗೆ ಬರೀ ನೆಗೆಟಿವ್ ಕಾಮೆಂಟ್ಸ್ ಕೇಳಿಬರುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ತಮ್ಮ ಸಿನಿಮಾದಲ್ಲಿ ನಟಿಯರನ್ನು ಅಳೆದು ತೂಗಿ ಸೆಲೆಕ್ಟ್ ಮಾಡುತ್ತಾರೆ. ಆದರೆ ಈಕೆಯನ್ನು ಹೇಗೆ ಸೆಲೆಕ್ಟ್ ಮಾಡಿದ್ರು ಅನ್ನೋದೇ ಪ್ರೇಕ್ಷಕರಿಗೆ ಪ್ರಶ್ನೆಯಾಗಿತ್ತು. ಕೊನೆಗೆ ಈ ಪ್ರಶ್ನೆಗೆ ಸಿಕ್ಕ ಉತ್ತರವೇನೆಂದರೆ, ಶರ್ಮಿನ್ ಸಂಜಯ್ ಲೀಲಾ ಬನ್ಸಾಲಿಯ ಸಂಬಂಧಿಯಂತೆ. ಹಾಗಾಗಿ ಈಕೆಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಲಾಗಿದೆ.

ಅಲ್ಲದೇ, ಬೇರೆ ನಟಿಯರಿಗಿಂತ ಈ ನಟಿಗೆ ಫೀಸ್ ಕೂಡ ಹೆಚ್ಚು ಕೊಡಲಾಗಿದೆ ಅನ್ನೋ ಸುದ್ದಿಯೂ ಇದೆ. ಆದರೆ ಈಕೆ ಸಿನಿಮಾದಲ್ಲಿ ಎಲ್ಲ ಸೀನ್‌ಗಳಲ್ಲೂ ಒಂದೇ ರೀತಿಯ ಎಕ್ಸ್‌ಪ್ರೆಶನ್ ಕೊಟ್ಟಿದ್ದಾರೆ. ಈ ಕಾರಣಕ್ಕೆ ಶರ್ಮಿನ್ ಸಖತ್ ಟ್ರೋಲ್ ಆಗುತ್ತಿದ್ದಾರೆ.

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

Political News: ಸಚಿವ ನಾಗೇಂದ್ರ ವಜಾಕ್ಕೆ ಪಿ.ರಾಜೀವ್ ಒತ್ತಾಯ

ಅಕ್ರಮ ಹೊಟೇಲ್ ವಾರದೊಳಗೆ ತೆರವುಗೊಳಿಸಬೇಕು: ಯಶ್ಪಾಲ್ ಸುವರ್ಣ ಆಗ್ರಹ

About The Author