Wednesday, June 12, 2024

Latest Posts

ಸ್ವಾತಿ ಮಲಿವಾಲ್ ಆರೋಪಕ್ಕೆ ಮೊದಲ ಬಾರಿ ಪ್ರತಿಕ್ರಿಯಿಸಿದ ಯೂಟ್ಯೂಬರ್‌ ಧೃವ ರಾಠಿ

- Advertisement -

National Political News: ಆಪ್ ಪಕ್ಷದ ವಿರುದ್ಧವೇ ಕೇಸ್ ಹಾಕಿರುವ ಸ್ವಾತಿ ಮಲಿವಾಲ್, ಯ್ಯೂಟ್ಯೂಬರ್ ಧೃವ ರಾಠಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಧೃವ ರಾಠಿಯವರ ವೀಡಿಯೋದಿಂದಲೇ, ತನ್ನ ಮೇಲೆ ಈ ರೀತಿ ದೌರ್ಜನ್ಯವಾಗಿದೆ ಎಂದು ಆರೋಪಿಸಿದ್ದರು. ಅದಕ್ಕೆ ಧೃವ ರಾಠಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಧ್ರುವ್ ರಾಠಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಪ್ರತಿದಿನ ಜೀವಬೆದರಿಕೆ ಕರೆಗಳು ಬರುತ್ತದೆ. ಪ್ರತಿದಿನ ನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿದೆ. ನನಗೆ ಇದೆಲ್ಲವೂ ಅಭ್ಯಾಸವಾಗಿದೆ. ಆರೋಪಿಗಳೇ ಸಂತ್ರಸ್ತರಂತೆ ನಟಿಸುತ್ತಿದ್ದಾರೆ.ಇದೆಲ್ಲರ ಹಿಂದೆ ಯಾರಿದ್ದಾರೆಂದು ನನಗೆ ಗೊತ್ತಿದೆ. ನನ್ನನ್ನು ತುಳಿಯುವ ಕೆಲಸವಾಗುತ್ತಿದೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ನೀವು ಓರ್ವ ಧೃವ ರಾಠಿಯನ್ನು ತುಳಿಯಲು ಯತ್ನಿಸಿದರೆ, ಸಾವಿರ ಧೃವ ರಾಠಿ ಹುಟ್ಟುಕೊಳ್ಳುತ್ತಾರೆಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಯಾಕೆ ಸ್ವಾತಿ ಮಲಿವಾಲ್ ಧೃವ ರಾಠಿ ವಿರುದ್ದ ಆರೋಪ ಮಾಡಿದ್ದರು ಎಂದರೆ, ಸ್ವಾತಿ ಮಲಿವಾಲ್ ಕೇಜ್ರಿವಾಲ್ ಆಪ್ತನ ವಿರುದ್ಧ ದೌರ್ಜನ್ಯ ಆರೋಪ ಮಾಡಿ, ಕೇಸ್ ದಾಖಲಿಸಿ, ಅವನ ಬಂಧನವಾಗುವಂತೆ ಮಾಡಿದ್ದರು. ಆದರೆ ಆ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಆಕೆಗೆ ಬೆದರಿಕೆ ಕರೆ ಬರುತ್ತಿತ್ತಂತೆ. ಆದರೆ ಧೃವ ರಾಠಿ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಸ್ವಾತಿ ಮಲಿವಾಲ್‌ ಕೇಸ್‌ಗೆ ಸಂಬಂಧಿಸಿದಂತೆ, ಬರೀ ಒನ್ ಸೈಡ್ ಸ್ಚೋರಿ ಹೇಳಿದ್ದಾರೆ ಎಂಬುದು ಸ್ವಾತಿಮಲಿವಾಲ್ ಆರೋಪ. ಸತ್ಯವನ್ನು ಮುಚ್ಚಿಟ್ಟಿದ್ದಾರೆಂದು ಸ್ವಾತಿ ಆರೋಪಿಸಿದ್ದಾರೆ.

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

Political News: ಸಚಿವ ನಾಗೇಂದ್ರ ವಜಾಕ್ಕೆ ಪಿ.ರಾಜೀವ್ ಒತ್ತಾಯ

ಅಕ್ರಮ ಹೊಟೇಲ್ ವಾರದೊಳಗೆ ತೆರವುಗೊಳಿಸಬೇಕು: ಯಶ್ಪಾಲ್ ಸುವರ್ಣ ಆಗ್ರಹ

- Advertisement -

Latest Posts

Don't Miss