ಅಡುಗೆ ಕೋಣೆಯಲ್ಲಿ ಆಗುವಷ್ಟು ತಪ್ಪುಗಳು, ದೊಡ್ಡ ದೊಡ್ಡ ಆಫೀಸುಗಳಲ್ಲೂ ಆಗೋದಿಲ್ಲಾ. ಅಂಥ ತಪ್ಪುಗಳಿಂದ ಕೆಲ ವಸ್ತುಗಳು ಹಾಳಾದ್ರೆ, ಕೆಲವು ಬಾರಿ ಅಡುಗೆಗಳು ಹಾಳಾಗ್ತದೆ. ಹಾಗಾಗಿ ಇಂದು ನಾವು ಕೆಲ ಉಪಯುಕ್ತವಾದ ಕಿಚನ್ ಟಿಪ್ಸ್ ಹೇಳಲಿದ್ದೇವೆ.
ಟಿಪ್ 1. ಉದ್ದಿನ ದೋಸೆ ಗರಿಗರಿಯಾಗಿ, ಟೇಸ್ಟಿಯಾಗಬೇಕು ಅಂದ್ರೆ ನೀವು ಅದಕ್ಕೆ ಅರ್ಧ ಕಪ್ ದಪ್ಪ ಅವಲಕ್ಕಿ ಸೇರಿಸಬೇಕು. ಆಗ ದೋಸೆ ಕ್ರಿಸ್ಪಿಯಾಗಿರತ್ತೆ. ಇನ್ನು ದೋಸೆ ಹಿಟ್ಟು ಹೆಚ್ಚು ಹುಳಿ ಬರತ್ತೆ ಎಂದಾದಲ್ಲಿ, ದೋಸೆ ಹಿಟ್ಟು ರುಬ್ಬಿದ ತಕ್ಷಣ ಅದರಲ್ಲಿ ಒಂದು ಸ್ಪೂನ್ ಸಕ್ಕರೆ ಹಾಕಿಡಿ. ಇದರಿಂದ ಹಿಟ್ಟು ಹೆಚ್ಚು ಹುಳಿ ಬರುವುದಿಲ್ಲ. ಮತ್ತು ರುಚಿಯಾಗಿಯೂ ಇರುತ್ತದೆ.
ಟಿಪ್ 2: ತಾಮ್ರ ಮತ್ತು ಹಿತ್ತಾಳೆಯ ಪಾತ್ರೆ ತೊಳೆಯುವಾಗ, ಬಳಸಿದ ಹುಣಸೆ ಹಣ್ಣು ಅಥವಾ ನಿಂಬೆ ಹಣ್ಣಿನಿಂದ ತಿಕ್ಕಿ ತೊಳೆದರೆ, ಪಾತ್ರೆ ಹೊಸತರಂತೆ ಹೊಳೆಯುತ್ತದೆ. ಸಿಂಕ್ ಕೊಳೆಯಾದಾಗಲೂ ನೀವು ನಿಂಬೆಹಣ್ಣಿನಿಂದ ಸಿಂಕ್‌ನ್ನು ತಿಕ್ಕಿ, ಹತ್ತು ನಿಮಿಷದ ಬಳಿಕ, ಸೋಪ್ ಪೌಡರ್‌ನಿಂದ ಕ್ಲೀನ್ ಮಾಡಬಹುದು.
ಟಿಪ್ 3. ಕೆಲವೊಮ್ಮೆ ಕುಕ್ಕರನಲ್ಲಿ ನೀರು ಹಾಕಿದ್ದು ಹೆಚ್ಚಾಗಿ, ಕುಕ್ಕರ್ ವಿಶಿಲ್ ಆಗುವಾಗ ಆಗ ನೀರು ಹೊರ ಬಂದು, ಕುಕ್ಕರ್ ಗಲೀಜಾಗುತ್ತದೆ. ಹಾಗೆ ಆಗಬಾರದು ಅಂತಾದ್‌ರೆ, ಕುಕ್ಕರಿನಲ್ಲಿ ಒಂದು ಸ್ಪೂನ್ ಹಾಕಿ ಅದರೊಂದಿಗೆ ನಿಮಗೇನು ಬೇಕೋ, ಅದನ್ನು ಬೇಯಿಸಬೇಕು.
ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..
ಟಿಪ್ 4. ಮನೆಗೆ ತಂದ ಸೊಪ್ಪುಗಳು ಫ್ರಿಜ್‌ನಲ್ಲಿಟ್ರೂ ಕೂಡ ಎರಡನೇಯ ದಿನಕ್ಕೆ ಬಾಡಿ ಹೋಗುತ್ತದೆ. ಹಾಗಾಗಬಾರದು ಅಂದ್ರೆ, ಸೊಪ್ಪು ತಂದ ಬಳಿಕ, ಅದನ್ನು ಸ್ವಚ್ಛಗೊಳಿಸಿ, ಟಿಶ್ಯೂ ಪೇಪರ್‌ನಲ್ಲಿ ಸುತ್ತಿಡಬೇಕು. ನಂತರ ಒದು ಡಬ್ಬದಲ್ಲಿ ಹಾಕಿಡಬೇಕು. ಪುದೀನಾ ಸೊಪ್ಪಿನ ಎಲೆಯನ್ನ ಬೇರ್ಪಡಿಸಿ, ಒಂದು ಡಬ್ಬದಲ್ಲಿ ಹಾಕಿಡಿ.