Friday, November 22, 2024

Latest Posts

ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

- Advertisement -

Health Tips: ಬಾಯಿ ಹುಣ್ಣಿನ ಸಮಸ್ಯೆ ಹಲವರಿಗೆ ಆಗುತ್ತದೆ. ಆದರೆ, ಆ ಸಮಸ್ಯೆಯನ್ನು ಯಾರು ಅನುಭವಿಸುತ್ತಾರೋ, ಅವರಿಗೆ ಆ ನೋವು ಗೊತ್ತಾಗುತ್ತದೆ. ಹಾಗಾಗಿ ಇಂದು ವೈದ್ಯರು, ಬಾಯಿ ಹುಣ್ಣಿನ ನೋವಿಗೆ ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಿದ್ದಾರೆ.

ಬಾಯಿ ಹುಣ್ಣಾದಾಗ, ಸರಿಯಾಗಿ ಆಹಾರ ಸೇವಿಸಲು ಆಗುವುದಿಲ್ಲ. ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊಟ್ಟೆ ನೋವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹೀಗೆ ಹಲವು ಸಮಸ್ಯೆ ಬರುತ್ತದೆ. ಹಾಗಾಗಿ ಬಾಯಿ ಹುಣ್ಣು ಎಂಬ ಸಮಸ್ಯೆ ಕೇಳಲಷ್ಟೇ ಸುಲಭ. ಆದರೆ ಅದರ ನೋವು ಅನುಭವಿಸುವವನಿಗಷ್ಟೇ ಗೊತ್ತು ಎಂದು ಹೇಳೋದು.

ಬಸಳೆ ಸೊಪ್ಪು, ಜೇನುತುಪ್ಪ ಬಾಯಿ ಹುಣ್ಣಿಗೆ ಉತ್ತಮ ಮನೆ ಮದ್ದಾಗಿದೆ. ಬಸಳೆಯನ್ನು ನೀರಿರುವ ಪ್ರದೇಶದಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಹಸಿರು ಬಸಳೆ ಅಥವಾ ಕೆಂಪು ಬಸಳೆ, ಯಾವುದಾದರೂ ಬಸಳೆಯನ್ನು ಬಳಸಬಹುದು. ಬಾಯಿ ಹುಣ್ಣಿಗೆ ಕೆಂಪು ಬಸಳೆ ಉತ್ತಮ. ಕೆಂಪು ಬಸಲೆ ಮತ್ತು ಹೆಸರು ಬೇಳೆ ಬಳಸಿ, ತೋವೆ ಮಾಡಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಆದರೆ ಈ ತೋವೆ ಮಸಾಲೆಭರಿತ ಅಥವಾ ಖಾರವಾಗಿ ಇರಬಾರದು.

ಎರಡನೇಯದಾಗಿ ಹೆಸರು ಬೇಳೆ ಪಾಯಸದ ಸೇವನೆ ಮಾಡಬೇಕು. ಇದಕ್ಕೆ ಸಕ್ಕರೆ ಬಳಸಬೇಡಿ. ಹಸುವಿನ ತುಪ್ಪ ಮತ್ತು ಬೆಲ್ಲ, ಕೊಬ್ಬರಿ ತುರಿ ಬಳಸಿ, ಹೆಸರು ಬೇಳೆ ಪಾಯಸ ತಯಾರಿಸಿ, ಸೇವಿಸಿ. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದನ್ನು ತಿಳಿಯಲು ಈ ವೀಡಿಯೋ ನೋಡಿ..

ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..?

ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡ್ತೀರಾ..? ಎಚ್ಚರ..!

- Advertisement -

Latest Posts

Don't Miss