Sunday, September 8, 2024

Latest Posts

ತುರಿಕೆ ಅಲರ್ಜಿಯಿಂದ ಮುಕ್ತರಾಗಲು ಇಲ್ಲಿದೆ ಪರಿಹಾರ

- Advertisement -

Health Tips: ವೈದ್ಯರಾದ ಕಿಶೋರ್ ಅವರು ಹಲವು ರೋಗಗಳಿಗೆ ನಾವು ಯಾವ ರೀತಿಯಾಗಿ ಮನೆ ಮದ್ದು ಮಾಡಿಕೊಳ್ಳಬಹುದು ಎಂಬ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಇಂದು ಕೂಡ ತುರಿಕೆ ಅಲರ್ಜಿಯಿಂದ ಮುಕ್ತಿ ಹೊಂದಲು ನಾವು ಹೇಗೆ ಮನೆಮದ್ದು ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ಕಿಶೋರ್ ಅವರು ಹೇಳಲಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ..

ಅಲರ್ಜಿ ಅನ್ನೋದು ಚರ್ಮದ ಹೊರಭಾಗದಲ್ಲೂ ಬರಬಹುದು. ಯಾವುದೋ ಆಹಾರ ಸೇವನೆಯಿಂದ, ಚರ್ಮದ ಒಳಭಾಗದಿಂದಲೂ ಬರಬಹುದು. ಕೆಲವರು ಕೆಲವು ಪದಾರ್ಥ, ತರಕಾರಿ, ಹಣ್ಣು ತಿಂದರೆ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಬದನೇಕಾಯಿ ತಿಂದರೆ, ಅಲರ್ಜಿಯಾಗಬಹುದು. ಅವರು ಅಪ್ಪಿತಪ್ಪಿ ಸ್ವಲ್ಪೇ ಸ್ವಲ್ಪ ಬದನೆ ಪಲ್ಯ ಅಥವಾ ವಾಂಗಿಭಾತ್ ತಿಂದರೂ, ಅವರ ದೇಹದ ಮೇಲೆ ಗುಳ್ಳೆಯಾಗೋಕ್ಕೆ ಶುರುವಾಗುತ್ತದೆ. ಇದನ್ನೇ ಅಲರ್ಜಿ ಎನ್ನಲಾಗುತ್ತದೆ.

ಈ ಅಲರ್ಜಿ ಸರಿಯಾಗಬೇಕು ಅಂದ್ರೆ, ನಮ್ಮ ಲಿವರ್ ಆರೋಗ್ಯವಾಗಿರಬೇಕು ಅಂತಾರೆ ವೈದ್ಯರು. ಹೀಗಾಗಿ ನಾಲ್ಕು ದೊಡ್ಡಪತ್ರೆ ಎಲೆ, ನಾಲ್ಕು ಕಾಳು ಮೆಣಸು, ಕೊಂಚ ಕಲ್ಲುಪ್ಪು, ಕೊಂಚ ಅರಿಶಿನ. ಇವಿಷ್ಟು ಅಲರ್ಜಿ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿ. ಮೊದಲು ದೊಡ್ಡಪತ್ರೆ ಎಲೆಯನ್ನು ಚೆನ್ನಾಗಿ ತೊಳೆದು ಕ್ಲೀನ್ ಮಾಡಿ, ಅದರ ಮೇಲೆ ಎರಡು ಕಾಳುಮೆಣಸು, ಕಲ್ಲುಪ್ಪು, ಅರಿಶಿನ ಹಾಕಿ, ಇನ್ನೊಂದು ದೊಡ್ಡಪತ್ರೆ ಎಲೆ ಹಾಕಿ, ಸ್ಯಾಂಡವಿಚ್ ರೀತಿ ತಯಾರಿಸಿಕೊಳ್ಳಿ.

ಇದನ್ನು ಸೇವಿಸಿ, ನಿಧಾನವಾಗಿ ಜಗಿಯಿರಿ. ಇದನ್ನು ತಿಂದು ತಕ್ಷಣ ನೀರು ಕುಡಿಯಬೇಡಿ. ತಿನ್ನುವಾಗ ಹೆಚ್ಚು ಮಾತನಾಡಬೇಡಿ. ಹೀಗೆ ಮಾಡಿದರೆ, ಅದು ಸರಿಯಾದ ರೀತಿಯಲ್ಲಿ  ನಮ್ಮ ಹೊಟ್ಟೆ ಸೇರುವುದಿಲ್ಲ. ಹಾಗಾಗಿ ನಿಧಾನವಾಗಿ ಇದನ್ನು ಜಗಿದು ತಿನ್ನಿ. ಇದರ ರಸ ದೇಹಕ್ಕೆ ಸೇರಿದಾಗಲೇ, ನಿಮಗೆ ಅಲರ್ಜಿ ಸಮಸ್ಯೆ ಕಡಿಮೆಯಾಗುತ್ತದೆ. ವೈದ್ಯರು ಈ ಬಗ್ಗೆ ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ಪಟಾಕಿಯಿಂದಾಗುವ ದುಷ್ಪರಿಣಾಗಳು ಏನೇನು..?

ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

ಪಟಾಕಿಯಿಂದ ಈ ಸಮಸ್ಯೆ ಬರುತ್ತದೆ ಎಚ್ಚರ..

- Advertisement -

Latest Posts

Don't Miss